ಪೆರ್ಣಂಕಿಲ: ನೀಲಾವರ ಗೋಶಾಲೆಗೆ ಗೋ ಗ್ರಾಸ ಸಮರ್ಪಣೆ
ಉಡುಪಿ: ಪೆರ್ಣಂಕಿಲ ಶ್ರಿ ಮಹಾಗಣಪತಿ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ನಿಮಿತ್ತ ನಡೆದ ಗಣಹೋಮ, ಮೃತ್ಯುಂಜಯ ಹೋಮ, ಐಕ್ಯತಾ ಹೋಮ ಮತ್ತು ಕೊಪ್ಪರಿಗೆ ಅಪ್ಪ ಸೇವಾ ಕಾರ್ಯಕ್ರಮ ನಿಮಿತ್ತ ಪೆರ್ಣಂಕಿಲ ಶಂಕರ ಪ್ರತಿಷ್ಠಾನ ವತಿಯಿಂದ ನೀಲಾವರ ಗೋಶಾಲೆಗೆ ಸುಮಾರು 6 ಲಾರಿ ಗೋಗ್ರಾಸವನ್ನು ಪೇಜಾವರ ಮಠಾಧೀಶರಾದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರ ಮೂಲಕ ಸಮರ್ಪಿಸಲಾಯಿತು.
ಗೋಗ್ರಾಸ ತುಂಬಿದ ವಾಹನಗಳಿಗೆ ಕ್ಯಾಂಪ್ಕೋ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಎಸ್ ಅರ್ ರಂಗಮೂರ್ತಿಯವರು ಭಗವಾಧ್ವಜ ತೋರಿಸುವ ಮೂಲಕ ಚಾಲನೆ ನೀಡಿದರು. ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಜೀರ್ಣೋದ್ದಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಪೆರ್ಣಂಕಿಲ ಶ್ರೀಶ ನಾಯಕ್, ಕೊಡಿಬೆಟ್ಟು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಸದಾನಂದ ಪ್ರಭು, ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ಶಶಿಧರ ವಾಗ್ಳೆ, ಪೆರ್ಣಂಕಿಲ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ವಿದ್ವಾನ್ ಹರಿದಾಸ್ ಭಟ್ ಪರಿವಾರದ ಕಾರ್ಯಕರ್ತರಾದ ಸುಬ್ರಮಣ್ಯ ವಾಗ್ಳೆ, ವೀರೇಂದ್ರ ಪಾಟ್ಕರ್, ಉಮೇಶ್ ನಾಯಕ್ ನಾಲ್ಕು ಪಾಲು ಮೊದಲಾದವರು ಉಪಸ್ಥಿತರಿದ್ದರು.