ಹುಬ್ಬಳ್ಳಿ: ಪ್ರಧಾನಿ ಮೋದಿ ರೋಡ್ ಶೋ ನಲ್ಲಿ ಭದ್ರತಾ ಲೋಪ
ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರೀಯ ಯುವಜನೋತ್ಸವದ ಉದ್ಘಾಟನೆಗೆಂದು ಹುಬ್ಬಳ್ಳಿಗೆ ಆಗಮಿಸಿದ್ದು, ಅವರು ರೋಡ್‌ಶೋ ನಡೆಸುವ ವೇಳೆ ಬಾಲಕನೋರ್ವ ಅಡ್ಡಗಟ್ಟಿದ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಹುಬ್ಬಳ್ಳಿ ಏರ್‌ಪೋರ್ಟ್‌ನಿಂದ ಪ್ರಧಾನಿ ಮೋದಿ ಅವರು ಕಾರ್ಯಕ್ರಮ ನಡೆಯುತ್ತಿರುವ ರೈಲ್ವೆ ಮೈದಾನದತ್ತ ರೋಡ್ ಶೋ ನಡೆಸುವ ವೇಳೆ ರಸ್ತೆ ಮಧ್ಯೆ ಬಾಲಕನೊಬ್ಬ ಪ್ರಧಾನಿಗೆ ಹಾರ ಹಾಕಲು ಬ್ಯಾರಿಕೇಡ್ ದಾಟಿ ಕಾರಿನ ಬಳಿ ಹೋಗಿದ್ದಾನೆ. ಈ ವೇಳೆ ಬಾಲಕನನ್ನು ಭದ್ರತಾ ಸಿಬ್ಬಂದಿ ತಡೆದಿದ್ದಾರೆ.
ಮಾರ್ಗ ಮಧ್ಯದಲ್ಲಿ ಕಾರು ನಿಲ್ಲಿಸಿದ ಮೋದಿ, ಜನರತ್ತ ಕೈ ಬೀಸಿ ಧನ್ಯವಾದ ಸಲ್ಲಿಸಿದರು. ಮೋದಿ ರೋಡೋ ಶೋ ಹಿನ್ನೆಲೆಯಲ್ಲಿ ರಸ್ತೆ ಬದಿ ಹಾಗೂ ಕಟ್ಟಡಗಳ ಮೇಲೆ ಜನಸ್ತೋಮ ಕಂಡುಬಂದಿತು