ಉಡುಪಿಯಲ್ಲಿ ಅಡಗಿರುವ ಸ್ಯಾಂಟ್ರೋ ರವಿ?- ಹೆಬ್ರಿಯ ಅಂಗಡಿ ಮಾಲೀಕನ ವಿಚಾರಣೆ?
ಉಡುಪಿ: ಕುಖ್ಯಾತ ಡೀಲರ್, ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದ ‘ಸ್ಯಾಂಟ್ರೋ ರವಿ’ಯ ಬಂಧಿಸಿಲು ಬಲೆ ಬೀಸಿರುವ ಪೊಲೀಸರಿಗೆ ಇತ ಉಡುಪಿಯ ಹೆಬ್ರಿಗೆ ಭೇಟಿ ನೀಡಿದ್ದರ ಕುರಿತು ಮಹತ್ವ ಸಾಕ್ಷ್ಯ ದೊರೆತಿದೆ ಎಂದು ತಿಳಿದುಬಂದಿದೆ.
ಹೆಬ್ರಿಯಿಂದ ಆಗುಂಬೆ ತೆರಳುವ ರಸ್ತೆಯಲ್ಲಿರುವ ಗೂಡಂಗಡಿಯೊಂದಕ್ಕೆ ಭೇಟಿ ನೀಡಿದ್ದು ಅಂಗಡಿ ಮಾಲಕ ಹೆಬ್ರಿಯ ರಮೇಶ್ ಕುಲಾಲ್ ಅವರ ಬಳಿ ಮೊಬೈಲ್ ನಲ್ಲಿ ತನ್ನ ಸಹವರ್ತಿಗೆ ಕರೆ ಮಾಡಿದ್ದು, ಇದೇ ಜಾಡು ಹಿಡಿದು ಮೈಸೂರು ಪೊಲೀಸರು ಉಡುಪಿಗೆ ಆಗಮಿಸಿದ್ದಾರೆ.
ಮೂರು ದಿನಗಳ ಹಿಂದೆ ಮೈಸೂರಿನ ಪೊಲೀಸರು ರಮೇಶ್ ಕುಲಾಲ್ ವಿಚಾರಣೆ ನಡೆಸಿದ್ದಲ್ಲದೆ ಆತನ ಮೊಬೈಲ್ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.