ಉಡುಪಿ: ಮನೆಯ ಎದುರು ನಿಲ್ಲಿಸಿದ್ದ ಬೈಕ್ ಕಳವು
ಉಡುಪಿ ಜ.11(ಉಡುಪಿ ಟೈಮ್ಸ್ ವರದಿ): ನಗರದ ಬನ್ನಂಜೆ ಪರಿಸರದಲ್ಲಿ ಮನೆಯೊಂದರ ಎದುರು ನಿಲ್ಲಿಸಿದ ದ್ವಿಚಕ್ರ ವಾಹನ ಕಳವಾಗಿರುವ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಸ್ಥಳೀಯ ನಿವಾಸಿ ಕೆ. ಜಯಪ್ರಕಾಶ್ ಎಂಬವರು ಡಿ.23 ರಂದು ರಾತ್ರಿ ತಮ್ಮ ದ್ವಿಚಕ್ರ ವಾಹನವನ್ನು ಬನ್ನಂಜೆಯಲ್ಲಿರುವ ತಮ್ಮ ಮನೆಯ ಎದುರು ನಿಲ್ಲಿಸಿದ್ದರು. ಆದರೆ ಮರುದಿನ ಡಿ.24 ರಂದು ಬೆಳಿಗ್ಗೆ ನೋಡಿದಾಗ ದ್ವಿಚಕ್ರ ವಾಹನ ನಿಲ್ಲಿಸಿದ ಜಾಗದಲ್ಲಿ ಇಲ್ಲದಿರುವುದು ಗಮನಕ್ಕೆ ಬಂದಿದೆ. ಅದರಂತೆ ಮನೆಯ ಎದುರು ನಿಲ್ಲಿಸಿದ ದ್ವಿಚಕ್ರ ವಾಹನವನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿ ಕೆ. ಜಯಪ್ರಕಾಶ್ ಅವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.