ಪುತ್ತಿಗೆ ಶ್ರೀಗಳ ಚತುರ್ಥ ಪರ್ಯಾಯ: ಕೋಟಿ ಗೀತಾ ಲೇಖನ ಕೇಂದ್ರ ಉದ್ಘಾಟನೆ
ಉಡುಪಿ: ಪುತ್ತಿಗೆ ಮಠದ ಮುಂಭಾಗದಲ್ಲಿನ ಶ್ರೀಗಳವರ ಪ್ರತಿಕೃತಿ ಇರುವ ಕೋಟಿಗೀತಾ ಲೇಖನ ಯಜ್ಞದ ನೂತನ ಕೇಂದ್ರವನ್ನು ಉದ್ಘಾಟಿಸಿದ ಉಡುಪಿನಗರ ಸಭೆಯ ಪೌರಾಯುಕ್ತರಾದ ಉದಯ್ ಕುಮಾರ್ ಶೆಟ್ಟಿ ಇವರು ಶ್ರೀಸುಗುಣೇಂದ್ರ ತೀರ್ಥ ಶ್ರೀಪಾದಂಗಳವರ 2024 – 26ರ ಪರ್ಯಾಯ ಉತ್ಸವದ ಬೃಹತ್ ಯೋಜನೆಯಾದ ಕೋಟಿ ಶ್ರೀಕೃಷ್ಣ ಭಕ್ತರಿಂದ ಬರೆಸಲ್ಪಡುವ ಗೀತಾ ಲೇಖನ ಯಜ್ಞದಲ್ಲಿ ಭಾಗವಹಿಸಿ ಶ್ರೀ ಕೃಷ್ಣ ಹಾಗೂ ಗುರುಗಳ ಅನುಗ್ರಹಕ್ಕೆ ಪಾತ್ರರಾಗಿ ಎಂದು ಶುಭ ಹಾರೈಸಿದರು.
ಮತ್ತೋರ್ವ ಮುಖ್ಯ ಅತಿಥಿ ತೆಂಕಪೇಟೆ ವಾರ್ಡಿನ ನಗರಸಭಾ ಸದಸ್ಯೆ ಮಾನಸಿ ಪೈ ಈ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಸಭೆಯಲ್ಲಿ ದಿವಾನರಾದ ನಾಗರಾಜ ಆಚಾರ್ಯ, ಅನಂತ ಕೃಷ್ಣಪ್ರಸಾದ್, ವಿಷ್ಣುಮೂರ್ತಿ ಉಪಾಧ್ಯಾಯ, ರಮಣ ಆಚಾರ್, ಚಂದನ್ ಕಾರಂತ್, ಸುರೇಶ್ ಕಾರಂತ್, ಎನ್ ವಿ ಉಡುಪ, ಶ್ರೀಶ ಆಚಾರ್, ರವೀಂದ್ರ ಆಚಾರ್ಯ, ಸೀತಾರಾಮ್ ಭಟ್, ಸಾತ್ವಿಕ್ ಬಟ್ ಹಾಗೂ ಗೀತಾ ಮಾತೆಯರು ಉಪಸ್ಥಿತರಿದ್ದರು.
ರಮೇಶ್ ಭಟ್ ಪ್ರಸ್ತಾವಿಕವಾಗಿ ಮಾತಾಡಿ ಅತಿಥಿಗಳನ್ನು ಸ್ವಾಗತಿಸಿದರು, ಮಹಿತೋಷ್ ಆಚಾರ್ಯರು ಧನ್ಯವಾದವಿತ್ತರು, ವಿಕ್ರಂ ಕುಂಟಾರ್ ಕಾರ್ಯಕ್ರಮವನ್ನು ನಿರೂಪಿಸಿದರು