ಎಫ್ಎಎ ಕಂಪ್ಯೂಟರ್ ನಲ್ಲಿ ತಾಂತ್ರಿಕ ದೋಷ: ಅಮೆರಿಕದಾದ್ಯಂತ ವಿಮಾನಗಳ ಹಾರಾಟ ಸ್ಥಗಿತ
ನ್ಯೂಯಾರ್ಕ್: ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್(ಎಫ್ಎಎ)ನಲ್ಲಿ ತಾಂತ್ರಿಕ ದೋಷದಿಂದ ಕಂಪ್ಯೂಟರ್ ಸ್ಥಗಿತಗೊಂಡ ನಂತರ ಅಮೆರಿಕದಾದ್ಯಂತ ಎಲ್ಲಾ ವಿಮಾನಗಳ ಹಾರಾಟವನ್ನೂ ಸ್ಥಗಿತಗೊಳಿಸಲಾಗಿದೆ.
ಫ್ಲೈಟ್ಅವೇರ್ನ ಫ್ಲೈಟ್ ಟ್ರ್ಯಾಕಿಂಗ್ ವೆಬ್ಸೈಟ್ ಪ್ರಕಾರ, ಬೆಳಗ್ಗೆ 6:30ಕ್ಕೂ ಮುನ್ನ ಅಮೆರಿಕದ ಒಳಗೆ ಬರುವ ಅಥವಾ ಹೊರಗೆ ಹೋಗುವ ಸುಮಾರು 760 ವಿಮಾನಗಳು ವಿಳಂಬವಾಗಿವೆ.
ಕಂಪ್ಯೂಟರ್ ನಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷದಿಂದ ರಾಷ್ಟ್ರೀಯ ವಾಯುಪ್ರದೇಶದ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರುತ್ತಿದೆ. ನಾವು ಪರಿಶೀಲನೆ ನಡೆಸುತ್ತಿದ್ದೇವೆ ಮತ್ತು ಈಗ ಸಿಸ್ಟಮ್ ಅನ್ನು ಮರುಲೋಡ್ ಮಾಡುತ್ತಿದ್ದೇವೆ” ಎಂದು ಎಫ್ಎಎ ತಿಳಿಸಿದೆ.
ಈಗ ಉಂಟಾಗಿರುವ ಅಡೆತಡೆಗಳ ಕುರಿತು ಅಥವಾ ವಿಮಾನ ನಿಲ್ದಾಣ ಸೌಲಭ್ಯ ಸೇವೆಗಳಲ್ಲಿನ ಯಾವುದೇ ಬದಲಾವಣೆ ಮತ್ತು ಪರಿಷ್ಕೃತ ಮಾಹಿತಿ ಪ್ರಕ್ರಿಯೆ ನಡೆಯುತ್ತಿಲ್ಲ ಎಂಬ ಎಚ್ಚರಿಕೆಯನ್ನು ಪೈಲಟ್ಗಳಿಗೆ ಹಾಗೂ ಇತರೆ ವಿಮಾನ ಸಿಬ್ಬಂದಿಗೆ ತನ್ನ ವ್ಯವಸ್ಥೆ ಮೂಲಕ ಎಚ್ಚರಿಕೆ ರವಾನಿಸಲಾಗಿದೆ ಎಂದು ಎಫ್ಎಎ ಹೇಳಿದೆ.