‘ಲ್ಯಾಪ್ ಟಾಪ್, ಮೊಬೈಲ್ ಸಹಿತ’ಎಲ್ಲಾ ಎಲೆಕ್ಟ್ರಾನಿಕ್ ಸಾಧನಗಳಿಗೆ ಒಂದೇ ಚಾರ್ಜರ್’
ನವದೆಹಲಿ, ಜ.10: ಸರ್ಕಾರದ ಭಾರತೀಯ ಮಾನದಂಡಗಳ ಬ್ಯೂರೊ ಮೂರು ಬಗೆಯ ಎಲೆಕ್ಟ್ರಾನಿಕ್ ಸಾಧನಗಳಿಗೆ ಗುಣಮಟ್ಟದ ಮಾನದಂಡಗಳ ಹೆಸರಿನಲ್ಲಿ ಹೊಸ ನಿಯಮಾವಳಿಗಳನ್ನ ತಂದಿದೆ.
ಈ ನಿಯಮಗಳು ಡಿಜಿಟಲ್ ಟೆಲಿವಿಷನ್ ರಿಸೀವರ್ಗಳು, ಯುಎಸ್ಬಿ ಟೈಪ್-ಸಿ ಚಾರ್ಜರ್ಗಳು ಮತ್ತು ವಿಡಿಯೋ ಸರ್ವೆಲೆನ್ಸ್ ಸಿಸ್ಟಮ್ ಗೆ ಅನ್ವಯಿಸುತ್ತವೆ. ದೂರದರ್ಶನದಂತಹ ಚಾನಲ್‌ಗಳನ್ನು ಸೆಟ್-ಟಾಪ್ ಬಾಕ್ಸ್ ಇಲ್ಲದೆ ಟಿವಿಗಳಲ್ಲಿ ಪ್ರಸಾರ ಮಾಡಬಹುದೆಂದು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ಒಳಗೊಂಡಿರುತ್ತದೆ.
ಲ್ಯಾಪ್ಟಾಪ್‌ಗಳು, ನೋಟ್ಬುಕ್‌ಗಳು, ಮೊಬೈಲ್‌ಗಳಂತಹ ಎಲ್ಲಾ ಎಲೆಕ್ಟ್ರಾನಿಕ್ ಸಾಧನಗಳನ್ನು ಅನುಕೂಲಕರವಾಗಿ ಸಂಪರ್ಕಿಸಲು ಸಾರ್ವತ್ರಿಕ ಚಾರ್ಜರ್, ಅಂತರರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ವಿಎಸೆಸ್ ಅನ್ನು ತರುವುದಾಗಿ ತಿಳಿದು ಬಂದಿದೆ.