ಪಡುಬಿದ್ರೆ: ಚಿತ್ರಿಕರಣದ ಸ್ಥಳ ವೀಕ್ಷಣೆಗೆ ಬಂದ ಯುವಕ ನದಿಯಲ್ಲಿ ಮುಳುಗಿ ಓರ್ವ ಮೃತ್ಯು, ಇಬ್ಬರ ರಕ್ಷಣೆ

ಪಡುಬಿದ್ರೆ: (ಉಡುಪಿ ಟೈಮ್ಸ್ ವರದಿ) ಚಿತ್ರೀಕರಣದ ಸ್ಥಳ ವೀಕ್ಷಣೆಗೆ ಬಂದ ತಂಡವೊಂದರ ಯುವಕನೊರ್ವನ ನದಿಯಲ್ಲಿ ಮುಳುಗಿ ಮೃತ ಪಟ್ಟ ಘಟನೆ ಪಲಿಮಾರು ಶಾಂಭವಿ ನದಿಯಲ್ಲಿ ನಡೆದಿದೆ.


ಬೆಂಗಳೂರಿನಿಂದ ಓಮಿನಿ ಕಾರ್ ನಲ್ಲಿ ಏಳು ಜನರ ಯುವಕರ ತಂಡವು ಪಲಿಮಾರು ನದಿ ಬಳಿ ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಚಿತ್ರಿಕರಣದ ಲೋಕೆಶನ್ ನೋಡಲು ಬಂದಿದ್ದರು.

ತಂಡದ ಮೂವರು ಶಾಂಭವಿ ನದಿಗೆ ಸ್ನಾನಕ್ಕೆ ಇಳಿದಿದ್ದರು, ನದಿಯಲ್ಲಿನ ನೀರಿನ ಸೆಳೆತಕ್ಕೆ ಸಿಕ್ಕಿ ಮೂವರೂ ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಈ ಸಂದರ್ಭ ಉಳಿದ ಸ್ನೇಹಿತರು ಸ್ಥಳೀಯರನ್ನು ಸಹಾಯಕ್ಕೆ ಕರೆದಿದ್ದರು, ತಕ್ಷಣ ಬಂದ ಸ್ಥಳೀಯ ನಿವಾಸಿಗಳಾದ ರೋಕಿ ಡಿಸೋಜಾ ಮತ್ತು ರೋಶನ್ ಕರ್ನಿರೆ ನದಿಯಲ್ಲಿ ಮುಳುಗುತ್ತಿದ್ದ ಇಬ್ಬರನ್ನು ರಕ್ಷಿಸಿದ್ದಾರೆ. ಇನ್ನೋರ್ವ ಅನಿಲ್ (32) ಎಂಬಾತನಿಗೆ ಸರಿಯಾಗಿ ಈಜಾಡಲು ಬಾರದೆ ಇರುವ ಕಾರಣ ನೀರಿನಲ್ಲಿ ಮುಳುಗಿ ಮೃತ ಪಟ್ಟಿದ್ದಾಗಿ ತಿಳಿದು ಬಂದಿದೆ.

ತಕ್ಷಣ ಸ್ಥಳಕ್ಕೆ ಆಗಮಿಸಿ ರಕ್ಷಣೆಗೆ ಧಾವಿಸಿದ ಯುವಕರ ಸಮಯೋಚಿತ ಕಾರ್ಯ ವ್ಯಾಪಕ ಪ್ರಶಸಂಸೆಗೆ ಪಾತ್ರವಾಗಿದೆ.

Leave a Reply

Your email address will not be published. Required fields are marked *

error: Content is protected !!