ಮುರುಘಾ ಶ್ರೀಗಳ ವಿರುದ್ಧ ಪೋಕ್ಸೋ ಪ್ರಕರಣ: ಅತ್ಯಾಚಾರವಾಗಿಲ್ಲ ಎಂದ ವೈದ್ಯಕೀಯ ವರದಿ

ಚಿತ್ರದುರ್ಗ: ಹಾಸ್ಟೆಲ್​ನ ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಮೇಲೆ ಮುರುಘಾ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು ಜೈಲುಪಾಲಾಗಿರುವ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ವೈದ್ಯಕೀಯ ವರದಿ ಬಂದಿದೆ. ಅವರ ವಿರುದ್ಧದ ಆರೋಪಕ್ಕೆ ವ್ಯತಿರಿಕ್ತವೆಂಬಂತೆ ಬಾಲಕಿಯರ ಮೇಲೆ ಅತ್ಯಾಚಾರ ಆಗಿಲ್ಲ ಎಂದು ಜಿಲ್ಲಾಸ್ಪತ್ರೆಯ ವೈದ್ಯರು ವರದಿ ನೀಡಿದ್ದು ಈ ಪ್ರಕರಣಕ್ಕೆ ಇದೀಗ ಬಹಳ ದೊಡ್ಡ ತಿರುವು ಸಿಕ್ಕಿದೆ.

1ನೇ ಪೋಕ್ಸೋ ಪ್ರಕರಣದ ಇಬ್ಬರು ಸಂತ್ರಸ್ತೆ ಬಾಲಕಿಯರ ಮೆಡಿಕಲ್ ರಿಪೋರ್ಟ್​​​ನಲ್ಲಿ ಅತ್ಯಾಚಾರ ಆಗಿಲ್ಲ ಎಂಬ ವರದಿ ಬಂದಿದೆ. ಯಾವುದೇ ಗಾಯಗಳು ಇಲ್ಲ ಎಂದು ಚಿತ್ರದುರ್ಗ‌ ಜಿಲ್ಲಾಸ್ಪತ್ರೆಯ ವೈದ್ಯರು ಕೋರ್ಟ್​​​ಗೆ ಸಂತ್ರಸ್ತ ಬಾಲಕಿಯರ ಮೆಡಿಕಲ್ ರಿಪೋರ್ಟ್ ಸಲ್ಲಿಸಿದ್ದಾರೆ. ಈಗಾಗಲೇ ಪೊಲೀಸರು ಸಲ್ಲಿಸಿದ ಚಾರ್ಜ್ ಶೀಟ್​ನಲ್ಲಿಯೂ ಮೆಡಿಕಲ್ ರಿಪೋರ್ಟ್ ಬಗ್ಗೆ ಉಲ್ಲೇಖಿಸಲಾಗಿತ್ತು. ಸದ್ಯ ಮುರುಘಾಶ್ರೀ ವಿರುದ್ದದ ಫೋಕ್ಸೋ ಕೇಸ್ ಗೆ ಇದರಿಂದ ಮಹತ್ವದ ತಿರುವು ಸಿಗುವ ಸಾಧ್ಯತೆಯಿದೆ. 

ಚಿತ್ರದುರ್ಗ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಕಳೆದ ಆ. 27ರಂದು ದಾಖಲಾದ ಮೊದಲ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳು ಬಾಲಕಿಯರ ವೈದ್ಯಕೀಯ ಪರೀಕ್ಷೆ ನಡೆಸಿದರು. ಬಾಲಕಿಯನ್ನು ಆ. 28ರಂದು ತ್ತು ಇತರರನ್ನು ಸೆಪ್ಟೆಂಬರ್ 29ರಂದು ವೈದ್ಯಕೀಯ ಪರೀಕ್ಷೆ ನಡೆಸಲಾಗಿತ್ತು. 

ಪ್ರಕರಣ ಹಿನ್ನೆಲೆ…? ಮುರುಘಾ ಮಠದ ಹಾಸ್ಟೆಲ್ ನಲ್ಲಿ ವ್ಯಾಸಂಗ ಮಾಡುತ್ತಿದ್ದ ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪದ ಮೇಲೆ ಚಿತ್ರದುರ್ಗದ ಮುರುಘಾ ಮಠದಲ್ಲಿಯೇ ಮುರುಘಾ ಶ್ರೀ ಅವರನ್ನು ಪೋಕ್ಸೋ ಕಾಯ್ದೆಯಡಿ ಚಿತ್ರದುರ್ಗ ಪೊಲೀಸರು ಬಂಧಿಸಿದ್ದರು. ಚಿತ್ರದುರ್ಗ ಗ್ರಾಮಾಂತರ ಠಾಣೆಯ ಸಿಪಿಐ ಬಾಲಚಂದ್ರ ನಾಯ್ಕ್‌, ಮೊಳಕಾಲ್ಮೂರು ಠಾಣೆ ಸಿಪಿಐ ಸತೀಶ್ ಅವರುಗಳು ಮಠದ ಒಳಗೆ ಪ್ರವೇಶಿಸಿ, ಪ್ರಕರಣ ದಾಖಲಾಗಿ 6 ದಿನಗಳ ನಂತರ ಬಂಧಿಸಲಾಗಿತ್ತು.

Leave a Reply

Your email address will not be published. Required fields are marked *

error: Content is protected !!