ಮಂಗಳೂರಿನಲ್ಲೇ ಆದಾಯ ತೆರಿಗೆ ಇಲಾಖೆ ಆಯುಕ್ತರ ಕಚೇರಿ ಉಳಿಸಿ: ಯೋಗೀಶ್ ಶೆಟ್ಟಿ

ಮಂಗಳೂರು: ಆದಾಯ ತೆರಿಗೆ ಇಲಾಖೆಯ  ಪ್ರಧಾನ ಆಯುಕ್ತ(ICIT) ಕಚೇರಿಯನ್ನು ಮಂಗಳೂರಿನಲ್ಲಿಯೇ ಉಳಿಸಿಕೊಳ್ಳುವಂತೆ ಕೇಂದ್ರ ಸರಕಾರಕ್ಕೆ ಉಡುಪಿ ಜಿಲ್ಲಾ ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ವಿ  ಶೆಟ್ಟಿ ಒತ್ತಾಯಿಸಿದ್ದಾರೆ.

ಕಳೆದ ಎರಡು ದಶಕದಿಂದ ಐಟಿ ಕಚೇರಿಯ ಮಂಗಳೂರಿನಲ್ಲಿ ಕಾರ್ಯವೆಸಗುತ್ತಿದು, ಇದರ ವ್ಯಾಪ್ತಿಯಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಮಂದಿ ತೆರಿಗೆ ಪಾವತಿದಾರರಿದ್ದು ಅತಿ ಹೆಚ್ಚು ತೆರಿಗೆ ಸಂಗ್ರಹಿಸುತ್ತಿರುವ ಕಚೇರಿಯನ್ನು ಮಂಗಳೂರಿನಲ್ಲಿಯೇ ಉಳಿಸಿಕೊಳ್ಳಬೇಕು. ಅವಳಿ ಜಿಲ್ಲೆಯ ಜನಪ್ರತಿನಿಧಿಗಳು ಬಿಜೆಪಿ ಪಕ್ಷದವರಾಗಿದ್ದರೂ ಎರಡು ಜಿಲ್ಲೆಗೆ ನಿರಂತರ ಅನ್ಯಾಯವಾಗುತ್ತಿದೆ.
ಜಿಲ್ಲೆಯ ಪ್ರಮುಖ ಬ್ಯಾಂಕ್ ಗಳಾಗಿದ್ದ, ವಿಜಯ ಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್,ಮೊದಲಾದವುಗಳನ್ನು ವಿಲೀನಗೊಳಿಸಿ ಸರಕಾರ ಜಿಲ್ಲೆಯ ಜನರಿಗೆ ಅನ್ಯಾಯವೆಸಗಿದೆ. ಮಂಗಳೂರು ವಿಮಾನ ನಿಲ್ದಾಣವನ್ನು ಅದಾನಿಗೆ ಮಾರಾಟ ಮಾಡಲಾಗಿರುತ್ತದೆ.

ತೆರಿಗೆದಾರರ ಹಿತದೃಷ್ಟಿಯಿಂದ ಐಸಿಐಟಿ ಕಚೇರಿಯನ್ನು ಮಂಗಳೂರಿನಲ್ಲಿ ಉಳಿಸಿಕೊಳ್ಳುವರೆ ರಾಜ್ಯದ ಎಲ್ಲ ಪ್ರತಿನಿಧಿಗಳು ಕೇಂದ್ರ ಸರಕಾರವನ್ನು ಒತ್ತಾಯಿಸ ಬೇಕೆಂದು ಇದರಿಂದ  ಉಭಯ  ಜಿಲ್ಲೆಗೂ ಸಹಕಾರವಾಗುತ್ತದೆ.
ಅನೇಕ ವ್ಯವಹಾರಗಳು ಬ್ಯಾಂಕುಗಳು, ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಟ್ರಸ್ಟಿಗಳು ಇತ್ಯಾದಿಗಳ ಕೇಂದ್ರವಾಗಿದ್ದು ಕಚೇರಿ ಸ್ಥಳಾಂತರದಿಂದ ಉಭಯ ಜಿಲ್ಲೆಗೆ ತೊಂದರೆಯಾಗುತ್ತಿದೆ ಎಂದು ಉಡುಪಿ ಜಿಲ್ಲಾ ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ವಿ ಶೆಟ್ಟಿ ಯವರು ಕೇಂದ್ರ ಮತ್ತು ರಾಜ್ಯ  ಸರಕಾರವನ್ನು  ಒತ್ತಾಯಿಸಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!