ಸಾಧನ ಆಶ್ರೀತ್’ರಿಗೆ ಸ್ಯಾಂಡಲ್ ವುಡ್ ಫಿಲಂ ಸೇವಾರತ್ನ ಪ್ರಶಸ್ತಿ 2022
ಕಾರ್ಕಳ: ಕಾರ್ಕಳದ ಶ್ರೀನಿವಾಸ ಸೇವಾ ಟ್ರಸ್ಟ್ ಇದರ ಆಶ್ರಯದಲ್ಲಿ ನಡೆಸಲ್ಪಡುವ ಖ್ಯಾತ ಪ್ಯಾಶನ್ ಡಿಸೈನ್ ಕಾಲೇಜು ಸುಮೇಧಾ ಪ್ಯಾಶನ್ ಇನಸ್ಟಿಟ್ಯೂಟ್ ಮುಖ್ಯಸ್ಥೆ, ಕಿರುತೆರೆಯ ಖ್ಯಾತ ವಸ್ತ್ರವಿನ್ಯಾಸಕಿ ಸಾಧನ ಆಶ್ರೀತ್ ಅವರಿಗೆ ಕಾರ್ಟನ್ ಮೀಡಿಯಾ ಇವೆಂಟ್ಸ್ ಬೆಂಗಳೂರು ಇವರು ಸ್ಯಾಂಡಲ್ ವುಡ್ ನ ಸಾಧಕರಿಗೆ ನೀಡುವ ಸ್ಯಾಂಡಲ್ ವುಡ್ ಫಿಲಂ ಸೇವಾರತ್ನ ಪ್ರಶಸ್ತಿ 2022 ವಸ್ತ್ರ ವಿನ್ಯಾಸಕ್ಕಾಗಿ ಲಭಿಸಿದೆ.
ಬೆಂಗಳೂರು ವಿಜಯನಗರದ ಕಾಸಿಯ ಭವನದ ಆಡಿಟೋರಿಯಂನಲ್ಲಿ ನಡೆದ ಪ್ಯಾಶನ್ ಇವೆಂಟ್ ನ ಅದ್ದೂರಿ ಸಮಾರಂಭದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ ರವರು ಸಾಧನ ಆಶ್ರೀತ್ ರವರಿಗೆ ಸ್ಯಾಂಡಲ್ ವುಡ್ ಫಿಲಂ ಸೇವಾರತ್ನ ಪ್ರಶಸ್ತಿ 2022 ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಚಲನಚಿತ್ರ ನಟ ನಿರ್ಮಾಪಕ ಗಂಡಸಿ ಸದಾನಂದ ಸ್ವಾಮಿ, ಬಸವರಾಜ್ , ಕುಮಾರಸ್ವಾಮಿ, ಕ್ರಷ್ಣ ಬಿ ರಾವ್, ನಿರ್ಮಾಪಕ ಗುರುಪ್ರಸಾದ್, ಪ್ಯಾಶನ್ ಇವೆಂಟ್ ಸಂಯೋಜಕ , ನಿರ್ಮಾಪಕ ವಿಜಯ ಕುಮಾರ್ ಉಪಸ್ಥಿತರಿದ್ದರು
ಈ ಕಾರ್ಯಕ್ರಮದಲ್ಲಿ ಹಿರಿಯ ಚಿತ್ರನಟ ಡಿಂಗ್ರಿ ನಾಗರಾಜ್, ರತ್ನಮಾಲ, ರೇಖಾ ದಾಸ್, ಮೂಗು ಸುರೇಶ್, ಗಣೇಶ್ ರಾವ್, ಪುಷ್ಪ ಸ್ವಾಮಿ ಸೇರಿದಂತೆ ಸುಮಾರು 50 ಹಿರಿಯ ಕಲಾವಿದರನ್ನು ಪ್ಸುಪ್ರಸಿದ್ಧನು ನೀಡಿ ಗೌರವಿಸಲಾಯಿತು.
ಈ ಸಮಾರಂಭದಲ್ಲಿ ಸಾಧನ ಆಶ್ರೀತ್ ನೇತೃತ್ವದ
ಸುಮೇಧಾ ಪ್ಯಾಶನ್ ಇನಸ್ಟಿಟ್ಯೂಟ್ ವಿದ್ಯಾರ್ಥಿಗಳಾದ ರಕ್ಷಿತಾ ಪೂಜಾರಿ, ಅಪೂರ್ವ ನಾಯಕ್ , ರಕ್ಷಿತಾ ನಾಯಕ್ ,ಶ್ರೀದೇವಿ ಪಾಠಕ್, ಮಾನಸ , ಪ್ರತೀಕ್ಷಾ , ವಿದೀಕ್ಷಾ ,ಪ್ರೀಯಾ ಡಯಾನ, ಅನುಷಾ, ಶ್ರೇಯಾ, ಸೌಜನ್ಯ, ಸ್ನೇಹಾ, ದಿವ್ಯ ಕುಮಾರಿ, ಕೆ. ರಜನಿ ಬಾಯಿ, ಕೆ ಪ್ರಗ್ನ, ಹೆಚ್.ಬಿ.ಪವಿತ್ರ, ಸಂಗೀತ ರವರು ವಿನ್ಯಾಸ ಗೊಳಿಸಿದ ಪ್ಯಾಶನ್ ವಸ್ತ್ರಗಳನ್ನು ರಾಜ್ಯದ ಸುಪ್ರಸಿದ್ಧ ಮೊಡಲ್ ಗಳು ಧರಿಸಿ ಪ್ಯಾಶನ್ ಇವೆಂಟ್ ನಲ್ಲಿ ಭಾಗವಹಿಸಿ ಮೆಚ್ಚುಗೆ ಪಡೆದರು.
ಸಿನರ್ಜಿ ಎಂಟರ್ಟೈನ್ಮೆಂಟ್ ಕಂಪೆನಿ ಬೆಂಗಳೂರು ಕಾರ್ಪೊರೇಟ್ ವುಮೆನ್ ಆಂಡ್ ವುಮೆನ್ಎಂಟರ್ ಪ್ರೈಸರ್ ನಡೆಸಿದ ಬಿಯುವರ್ ಓನ್ ಲೇಬಲ್ ಫಾರ್ ವುಮೆನ್ ಕಾರ್ಪೊರೇಟ್ ಪ್ಯಾಶನ್ ವೀಕ್ ಸ್ಪರ್ಧೆಯಲ್ಲಿ ಭಾಗವಹಿಸಿದ ಸಾಧನ ಆಶ್ರೀತ್ ನೇತೃತ್ವದ ಪ್ರತಿಷ್ಠಿತ ಸುಮೇಧಾ ಫ್ಯಾಶನ್ ಇನ್ಸ್ಟಿಟ್ಯೂಟ್ ತಂಡವು ರಾಜ್ಯ ಮಟ್ಟದ ಫಿನಾಲೆಯಲ್ಲಿ ವಸ್ತ್ರ ವಿನ್ಯಾಸ ಕ್ಕಾಗಿ ರಾಜ್ಯ ಪ್ರಶಸ್ತಿ ಪಡೆದುಕೊಂಡಿತ್ತು.ಮಾತ್ರವಲ್ಲದೆ ಕಿರುತೆರೆಯ ನಟಿಯರ ವಸ್ತ್ರ ವಿನ್ಯಾಸಕ್ಕಾಗಿ ಸಿರಿ ರಾಜ್ಯ ಪ್ರಶಸ್ತಿ, ಹೆಮ್ಮೆಯ ಕನ್ನಡಿಗ 2022 ರಾಜ್ಯ ಪ್ರಶಸ್ತಿ , ಚಿತ್ತಾರ ಸಂಸ್ಥೆ ಕಿರುತೆರೆಯಲ್ಲಿ ಸಾಧನೆಗೈದ ಮಹಿಳೆಯರಿಗೆ ನೀಡುವ ರಾಜ್ಯ ಮಟ್ಟದ ಗೋಲ್ಡನ್ ವುಮೆನ್ ಅವಾರ್ಡ್_2021 ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿರುತ್ತಾರೆ.