ಬಾಂಬ್ ಚಂಡಮಾರುತ ಭೀತಿಯಲ್ಲಿ ಅಮೆರಿಕಾ- ಕೋಟ್ಯಾಂತರ ಜನ ಆತಂಕದಲ್ಲಿ…!

ಚಿಕಾಗೊ: ‘ಬಾಂಬ್ ಸೈಕ್ಲೋನ್’ ಎಂಬ ಚಳಿಗಾಲದ ಚಂಡಮಾರತವು ಅಮೆರಿಕವನ್ನು ಸುತ್ತುವರಿದಿದ್ದರಿಂದ ಇಲ್ಲಿನ ಹೆಚ್ಚಿನ ರಾಜ್ಯಗಳು ತೀವ್ರ ಭೀತಿಯನ್ನು ಎದುರಿಸುತ್ತಿದ್ದೆ.

ಚಳಿಗಾಲದ ಈ ಸೈಕ್ಲೋನ್ ಹಲವು ಕಡೆಗಳಲ್ಲಿ ಹೆದ್ದಾರಿಗಳು ನಾಶಗೊಂಡಿದ್ದು, ಸಂಪರ್ಕ ಸ್ಥಗಿತಗೊಂಡಿದೆ, ವಿಮಾನಗಳ ಹಾರಾಟವಿಲ್ಲದೇ ಕ್ರಿಸ್‌ಮಸ್ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರು ತೊಂದರೆಯಲ್ಲಿ ಸಿಲುಕಿದ್ದಾರೆ. ಅಷ್ಟಲ್ಲದೇ 10 ಲಕ್ಷಕ್ಕಿಂತಲೂ ಅಧಿಕ ಮಂದಿ ವಿದ್ಯುತ್‌ ಇಲ್ಲದೇ ಕಗ್ಗತ್ತಲಿನಲ್ಲಿರುವಂತಾಗಿದೆ.

ವಾಷಿಂಗ್ಟನ್‌ನಿಂದ ಹಿಡಿದು ಪ್ಲಾರಿಡಾವರೆಗೆ ಒಟ್ಟು 48 ರಾಜ್ಯಗಳು ಚಂಡಮಾರುತದ ಹೊಡೆತಕ್ಕೆ ಸಿಲುಕಿವೆ. 20 ಕೋಟಿ ಜನ ಇದರಿಂದ ತೊಂದರೆ ಅನುಭವಿಸುತ್ತಿದ್ದಾರೆ. 

ದೇಶದ ಬಹುತೇಕ ಕಡೆ ಭಾರಿ ಹಿಮ ಮಳೆ ಸುರಿಯುತ್ತಿದೆ. ಗಾಳಿಯ ಸದ್ದು ಆನೆ ಘೀಳಿಡುವಂತೆ ಕೇಳುತ್ತದೆ. ಕೊರೆಯುವ ಚಳಿ ಜನರನ್ನು ಸಂಕಷ್ಟಕ್ಕೆ ದೂಡಿದೆ. ಸಮಶೀತೋಷ್ಣ ವಲಯದ ದಕ್ಷಿಣ ರಾಜ್ಯಗಳಲ್ಲೂ ವಿಪರೀತ ಚಳಿ ಆವರಿಸಿದೆ. ಯಾವ ಮಟ್ಟಕ್ಕೆ ಎಂದರೆ, ವಿಶ್ವದಲ್ಲೇ ಮೊದಲು ಎಂಬಂತೆ ಕುದಿಯುವ ನೀರೂ ಕೂಡ ಕೆಲವೇ ಕ್ಷಣಗಳಲ್ಲಿ ಮಂಜಿನ ಗಡ್ಡೆಯಾಗುತ್ತಿದೆಂದು ವರದಿ ತಿಳಿಸಿವೆ.

ತಾಪಮಾನವು –48 ಸೆಲ್ಸಿಯಸ್‌ಗಿಂತ ಕಡಿಮೆ ಮಟ್ಟಕ್ಕೆ ಕುಸಿಯುತ್ತಿರುವುದಾಗಿ ರಾಷ್ಟ್ರೀಯ ಹವಾಮಾನ ಸೇವೆ (ಎನ್‌ಡಬ್ಲ್ಯುಎಸ್‌) ತೀವ್ರ ಆಘಾತ ವ್ಯಕ್ತಪಡಿಸಿದೆ. ಹೀಗಾಗಿ ಸುಮಾರು 2 ಕೋಟಿ ಜನ ರೆಡ್‌ ಅಲರ್ಟ್‌ನಡಿ ದಿಗಿಲಿನಿಂದ ದಿನ ದೂಡುತ್ತಿದ್ದಾರೆ.

ಗಾಳಿ, ಹಿಮ ಮಳೆಯ ಪರಿಣಾಮವಾಗಿ ಹಲವಾರು ಕಡೆಗಳಲ್ಲಿ ವಿದ್ಯುತ್‌ ವ್ಯತ್ಯಯುಂಟಾಗಿದೆ. ವಿದ್ಯುತ್‌ ಇಲ್ಲದೇ ಪರಿತಪಿಸುತ್ತಿರುವ ಲಕ್ಷಾಂತರ ಜನರು ಕೊರೆಯುವ ಚಳಿಯ ನಡುವೆ ಜೀವ ಬದುಕಿನ ನಡುವೆ ಹೋರಾಡುತ್ತಿದ್ದಾರೆ.

‘ಇದೊಂದು ಮಹಾ ದುರಂತ. ರಾಷ್ಟ್ರವ್ಯಾಪಿ ಅಪಾಯ’ ಎಂದು ನ್ಯೂಯಾರ್ಕ್ ಗವರ್ನರ್ ಕ್ಯಾಥಿ ಹೊಚುಲ್ ಘೋಷಿಸಿದ್ದಾರೆ.

‘ನ್ಯೂಯಾರ್ಕ್, ಸಿಯಾಟಲ್ ಮತ್ತು ಚಿಕಾಗೋದ ಓ’ಹೇರ್‌ನಲ್ಲಿರುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಸುಮಾರು 5,000 ವಿಮಾನಗಳು ಶುಕ್ರವಾರ ರದ್ದುಗೊಂಡಿವೆ ಮತ್ತು 7,600 ವಿಮಾನಗಳು ವಿಳಂಬವಾಗಿವೆ’ ಎಂದು ವಿಮಾನಯಾನ ಸೇವೆಯ ಮೇಲೆ ನಿಗಾ ವಹಿಸುವ ಸಂಸ್ಥೆ ಹೇಳಿದೆ.

ಶುಕ್ರವಾರ ಮಧ್ಯಾಹ್ನದ ಹೊತ್ತಿಗೆ, ಚಂಡಮಾರುತವು ‘ಬಾಂಬ್ ಸೈಕ್ಲೋನ್’ ಆಗಿ ರೂಪಾಂತರಗೊಂಡಿದೆ. ಇದರ ಪರಿಣಾಮವಾಗಿ ತೀವ್ರ ಮಳೆ, ಹಿಮ ಮಳೆಯಾಗುತ್ತಿದೆ. ತೀರ ಪ್ರದೇಶಗಳಲ್ಲಿ ಪ್ರವಾಹ ಉಂಟಾಗಲಿದೆ. ಬಲವಾದ ಗಾಳಿ ಬೀಸಲಿದೆ.

ಬಾಂಬ್ ಚಂಡಮಾರುತ ಮಧ್ಯ-ಅಕ್ಷಾಂಶದ ಚಂಡಮಾರುತ. ಅದರ ವಾಯುಭಾರವು 24 ಗಂಟೆಗಳಲ್ಲಿ ತೀವ್ರವಾಗಿ ಕುಸಿತವುಂಟಾಗಿದೆ. ಹೀಗಾಗಿ ಅದರು ವಿನಾಶಕಾರಿ ರೂಪ ಪಡೆದುಕೊಂಡಿದೆ.

Leave a Reply

Your email address will not be published. Required fields are marked *

error: Content is protected !!