ಮಣಿಪಾಲ: ಮಾದಕ ವಸ್ತು ಸೇವನೆ- ಅಲೆವೂರಿನ ಯುವಕ ವಶಕ್ಕೆ

ಮಣಿಪಾಲ ಡಿ.23(ಉಡುಪಿ ಟೈಮ್ಸ್ ವರದಿ): ಅಲೆವೂರು ಗ್ರಾಮದ ಶಾಂತಿನಗರದಲ್ಲಿ ಮಾದಕ ವಸ್ತು ಸೇವನೆ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಯುವಕನನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಅಲೆವೂರು ಗ್ರಾಮದ ಕಾರ್ತಿಕ್ (22) ಪೊಲೀಸರು ವಶಕ್ಕೆ ಪಡೆದ ಯುವಕ. ಡಿ.21 ರಂದು ಅಲೆವೂರು ಗ್ರಾಮದ ಶಾಂತಿನಗರದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಕಾರ್ತಿಕ್’ನನ್ನು ಮಾದಕವಸ್ತು ಸೇವಿಸಿರುವ ಅನುಮಾನದ ಮೇರೆಗೆ ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು. ಇಂದು ಬಂದ ಈತನ ವೈದ್ಯಕೀಯ ಪರೀಕ್ಷಾ ವರದಿಯಲ್ಲಿ ಕಾರ್ತಿಕ್ ನು ಗಾಂಜಾ ಸೇವಿಸಿರುವುದು ದೃಢಪಟ್ಟಿದ್ದು, ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!