ಐಎಂಜೆ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ & ಕಾಮರ್ಸ್: “ಚೈತನ್ಯಚಿಲುಮೆ” ಕಾರ್ಯಕ್ರಮ ಉದ್ಘಾಟನೆ
ಕುಂದಾಪುರ ಡಿ:22(ಉಡುಪಿ ಟೈಮ್ಸ್ ವರದಿ): ಮೂಡ್ಲಕಟ್ಟೆಯ ಐಎಂಜೆ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ & ಕಾಮರ್ಸ್ ನಲ್ಲಿ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷಕ್ಕೆ ಸಂಬಂದಿಸಿದಂತೆ ವಿವಿಧ ಸಂಘಗಳ ಒಕ್ಕೂಟವಾದ “ಚೈತನ್ಯಚಿಲುಮೆ” ಯ ಉದ್ಘಾಟನಾ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸುಬ್ರಮಣ್ಯ ಜೋಶಿ ಅವರು, ಧನಾತ್ಮಕ ಚಿಂತನೆ, ಆತ್ಮ ಗೌರವ, ಮಾನವೀಯತೆ, ದೈಹಿಕ ಸಾಮಥ್ರ್ಯವನ್ನು ಹೆಚ್ಚಿಸಿ ಕೊಳ್ಳುವ ಮೂಲಕ ಸಮಾಜದಲ್ಲಿ ತೇಜೋನ್ಮುಖವಾಗಿ ಬಾಳಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಈ ವೇಳೆ ಐ.ಎಂ.ಜೆ ಸಂಸ್ಥೆಗಳ ನಿರ್ದೇಶಕರಾದ ಪ್ರೊ.ದೋಮ ಚಂದ್ರಶೇಖರ್ ಅವರು ಮಾತನಾಡಿ, ಪ್ರಕೃತಿಯೇ ನಮಗೆಲ್ಲಾ ಗುರು, ಕಲಿಕೆಯ ತಾಣ ಬಾಲ್ಯ, ಯೌವನ, ವಯಸ್ಕ ಹೀಗೆ ಬದುಕಿನ ಹಂತವನ್ನು ಅರಿವಿನ ಹಂತವೆಂದು ತಿಳಿದರೆ ಬದುಕಿನ ಕೌತುಕ, ಚಿಂತನೆಯ ಮಟ್ಟ ಹೆಚ್ಚುತ್ತದೆ ಎಂದರು.
ಇದೇ ವೇಳೆ ಪ್ರಾಸ್ತಾವಿಕ ಭಾಷಣ ಮಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ| ಪ್ರತಿಭಾ ಎಂ.ಪಟೇಲ್ ಅವರು ಕಲಿಕೆ, ಸಮಾಜ, ಮಾನವೀಯತೆ, ಸಾಹಿತ್ಯದ ಆಸಕ್ತಿಯನ್ನು ನೀವು ಮೂಡಿಸಿಕೊಳ್ಳುವ ಮೂಲಕ ನಿಮ್ಮಲ್ಲಿರುವ ಸುಪ್ತವಾದ ಸಾಹಿತ್ಯಿಕ ಪ್ರಜ್ಞೆಯನ್ನು ಜಾಗೃತಿಗೊಳಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಸಾಂಸ್ಕøತಿ ಕಾರ್ಯಕ್ರಮಗಳು ನಡೆದವು. ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಕಾಲೇಜಿನ ಉಪ ಪ್ರಾಂಶುಪಾಲರಾದ ಜಯಶೀಲ ಕುಮಾರ್, ಸಂಸ್ಥೆಯ ಆಂಗ್ಲ ಭಾಷೆಯ ಸಹ ಪ್ರಾಧ್ಯಾಪಕಿ ಪಾವನ, ಕನ್ನಡ ಭಾಷೆಯ ಸಹ ಪ್ರಾಧ್ಯಾಪಕಿ ಸುಮನ ಸೇರಿದಂತೆ ಭೋದಕ, ಭೋದಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.