ಕರಾವಳಿಗೂ ಸಾಗರ ಆಂಬುಲೆನ್ಸ್ ನೀಡುವಂತೆ ಆಗ್ರಹ: ರವಿರಾಜ್ ಸುವರ್ಣ ಮಲ್ಪೆ
ಮಲ್ಪೆ:(ಉಡುಪಿ ಟೈಮ್ಸ್ ವರದಿ) ಕಡಲಾಳದಲ್ಲಿ ಮೀನುಗಾರಿಕೆ ನಡೆಸುವಾಗ ಅಫಘಾತಗಳು ಹಾಗೂ ಮೀನುಗಾರರ ಆರೋಗ್ಯದಲ್ಲಿ ಸಮಸ್ಯೆ ಉಂಟಾದಾಗ ತುರ್ತು ಚಿಕಿತ್ಸೆ ನೀಡಲು ತುರ್ತು ಸಾಗರ ಆಂಬುಲೆನ್ಸ್ ಪ್ರಾಂಭಿಸುವಂತೆ ಬಿಜೆಪಿ ಮೀನುಗಾರ ಪ್ರಕೋಷ್ಟದ ಜಿಲ್ಲಾಸಂಚಾಲಕರು ಹಾಗೂ ಆಳಸಮುದ್ರ ಟ್ರಾಲ್ ಬೋಟ್ ತಾಂಡೇಲರ ಸಂಘದ ಅಧ್ಯಕ್ಷರು ಅಗಿರುವಂತಹ ರವಿರಾಜ್ ಸುರ್ವರ್ಣ ಮಲ್ಪೆ ಆಗ್ರಹಿಸಿದ್ದಾರೆ.
ನೂರಾರು ಮೈಲು ಆಳಸಮುದ್ರದಲ್ಲಿ ಮೀನುಗಾರಿಕೆ ನಡೆಸುವ ಸಂಧರ್ಭದಲ್ಲಿ ಹಲವು ಅವಘಡಗಳು ಸಂಭವಿಸಿವೆ.ಈ ಸಂಧರ್ಭದಲ್ಲಿ ಉಳಿದ ಮೀನುಗಾರಿಕಾ ಬೋಟಿನವರು ರಕ್ಷಣೆ ಮಾಡಿದರು ಸಹ ,ಚಿಕಿತ್ಸೆಗಾಗಿ ದಡ ತಲುಪಿಸುವ ಹೊತ್ತಿಗೆ ಸಮಯ ಮೀರಿ ಹೋಗಿರುತ್ತದೆ. ಇಂತಹ ಸಂಧರ್ಭದಲ್ಲಿ ಸಾಗರ ಅಂಬುಲ್ಯಾನ್ಸ್ ಇದ್ದರೆ ಕ್ಲಪ್ತ ಸಮಯದಲ್ಲಿ ಮೀನುಗಾರರಿಗೆ ಚಿಕಿತ್ಸೆ ದೊರೆದು ಪ್ರಾಣ ಉಳಿಸಿದಂತಾಗುತ್ತದೆ.
ಈ ಬಗ್ಗೆ ಕಳೆದ ಐದು ವರುಷಗಳಿಂದ ರಾಜ್ಯ ಹಾಗೂ ಕೇಂದ್ರಕ್ಕೆ ಮನವಿ ಸಲ್ಲಿಸುತ್ತಾ ಬಂದಿದ್ದೇವೆ. ಅದ್ರೆ ಯಾವುದೇ ಪ್ರಯೋಜನವಾಗಿಲ್ಲ.ಕೇರಳ ಸರಕಾರ ಈಗಾಗಲೇ ಸಾಗರ ಅಂಬುಲ್ಯಾನ್ಸ್ ಸೇವೆ ಜಾರಿಗೆ ತಂದಿದೆ.ಇದೇ ಮಾದರಿಯಲ್ಲಿ ಕರಾವಳಿಗೂ ಸಾಗರ ಅಂಬುಲ್ಯಾನ್ಸ್ ಮಂಜೂರು ಮಾಡುವಂತೆ ಮೀನುಗಾರಿಕಾ ಮತ್ತು ಬಂದರು ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಮಾನ್ಯ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ರವರ ಬಳಿ ವಿನಂತಿಸಿಕೊಳ್ಳುತ್ತಿದ್ದೇವೆ.