ತಡರಾತ್ರಿ ಪ್ರೇಯಸಿ ಮನೆಗೆ ಹೋಗಿ ಬಾವಿ ಬಿದ್ದ ಪ್ರಿಯಕರ!

ಬಿಹಾರ ಡಿ.12: ತನ್ನ ಪ್ರೇಯಸಿಯನ್ನು ಗೌಪ್ಯವಾಗಿ ಭೇಟಿ ಮಾಡಿದ ಯುವನೋರ್ವ ಆಕೆಯ ಪೋಷಕರು ಬರುತ್ತಿದ್ದಂತೆ ಹೆದರಿ ಬಾವಿಗೆ ಹಾರಿರುವ ಘಟನೆ ಬಿಹಾರದ ಛಾಪ್ರಾ ಎಂಬಲ್ಲಿ ನಡೆದಿದೆ.

ಮೋತಿರಾಜ್ ಪುರದ ನಿವಾಸಿ ಮುನ್ನಾರಾಜ್ ಎಂಬ ಯುವಕ ತನ್ನ ಗ್ರಾಮದ ಬಳಿಯ ಛಾಪ್ರಾ ನಿವಾಸಿ ಯುವತಿಯನ್ನು ಪ್ರೀತಿಸುತ್ತಿದ್ದ. ಆಕೆಯನ್ನು ಭೇಟಿಯಾಗಲೆಂದು ಶನಿವಾರ ತಡರಾತ್ರಿ 2 ಗಂಟೆಯ ವೇಳೆ ಆಕೆಯ ಮನೆಗೆ ಗೌಪ್ಯವಾಗಿ ಬಂದಿದ್ದಾನೆ. ಈ ವೇಳೆ ಸದ್ದು ಕೇಳಿ ಎಚ್ಚರವಾದ ಪ್ರೇಯಸಿಯ ಮನೆಯವರು ಮುನ್ನಾರಾಜ್ ನನ್ನು ಹಿಡಿಯಲು ಮುಂದಾಗಿದ್ದಾರೆ. ಈ ವೇಳೆ ಆತ ಆಳವಾದ ಬಾವಿಗೆ ಹಾರಿದ್ದಾನೆ. ಬಳಿಕ ಗ್ರಾಮಸ್ಥರು ಯುವಕನನ್ನು ಹಗ್ಗದ ಸಹಾಯದಿಂದ ಮೇಲೆತ್ತಿದ್ದಾರೆ.

ಈತನ ಕೃತ್ಯದಿಂದ ಆಕ್ರೋಶಗೊಂಡ ಕುಟುಂಬಸ್ಥರು ಪಂಚಾಯತಿಕೆ ನಡೆಸಿದ್ದಾರೆ. ಬಳಿಕ ಯುವತಿಯೊಂದಿಗಿನ ಯುವಕನ ಪ್ರೇಮಸಂಬಂಧ ದೃಢವಾದ ಹಿನ್ನೆಲೆಯಲ್ಲಿ ಇಬ್ಬರಿಗೆ ಊರಿನ ದೇವಸ್ಥಾನದಲ್ಲಿ ಮದುವೆ ಮಾಡಿಸಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!