ಉಡುಪಿ: ಇನ್ಟಾಗ್ರಾಮ್’ನಲ್ಲಿ ಪರಿಚಯವಾದ ವ್ಯಕ್ತಿಯಿಂದ ಮಹಿಳೆಗೆ 6.91ಲಕ್ಷ ರೂ. ವಂಚನೆ

ಉಡುಪಿ ಡಿ.1(ಉಡುಪಿ ಟೈಮ್ಸ್ ವರದಿ): ಆನ್ಲೈನ್ ನಲ್ಲಿ ಪರಿಚಯವಾದ ಗೆಳೆಯನ ಗಿಫ್ಟ್ ಆಸೆಗೆ ಮಹಿಳೆಯೊಬ್ಬರು 6.91 ಲಕ್ಷ ರೂ. ಹಣ ಕಳೆದುಕೊಂಡಿರುವ ಬಗ್ಗೆ ಉಡುಪಿ ಸೆನ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮಹಿಳೆಯೊಬ್ಬರಿಗೆ ಸೆಪ್ಟೆಂಬರ್‌ ತಿಂಗಳಿನಲ್ಲಿ ಸಾಮಾಜಿಕ ಜಾಲತಾಣವಾದ ಇನ್ಟಾಗ್ರಾಮ್ ನಲ್ಲಿ ಲಿನೋರ್ಡ್ ಹಂಕ್ಸ್ ಎಂಬ ವ್ಯಕ್ತಿ ಪರಿಚಯವಾಗಿದ್ದ. ಈತ ತಾನು ಸಾಟ್ಕ್ಲ್ಯಾಂಡ್‌ ನಲ್ಲಿ ಡಾಕ್ಟರ್ ಎಂಬುದಾಗಿ ಪರಿಚಯಿಸಿ ಕೊಂಡಿದ್ದ. ನಂತರ ಇವರು ವಾಟ್ಸ್ಅಪ್ ಮುಖೇನ ಚಾಟಿಂಗ್ ನಡೆಸಿ, ಸ್ನೇಹಿತರಾಗಿದ್ದರು. 

ಈ ನಡುವೆ ನವಂಬರ್‌ ಮೊದಲನೇ ವಾರದಲ್ಲಿ ಆತನು ಕೋರಿಯರ್‌ ಪಾರ್ಸೆಲ್‌ ಮುಖೇನಾ ಗಿಫ್ಟ್‌ ನ್ನು ಕಳುಹಿಸುವುದಾಗಿ ಮಹಿಳೆಯನ್ನು ನಂಬಿಸಿದ್ದ, ಅದಾದ ಬಳಿಕ ನವಹೆಲಿ ಇಂಟರ್‌ ನ್ಯಾಶನಲ್‌ ಎರ್‌ ಪೋರ್ಟ್ ಕೊರಿಯರ್‌ ಕಚೇರಿಯಿಂದ ಅಪರಿಚಿತ ವ್ಯಕ್ತಿ ಕರೆ ಮಾಡಿ ಸಾಟ್ಕ್ಲ್ಯಾಂಡ್‌ ದಿಂದ ಬಂದಿರುವ ಪಾರ್ಸೆಲ್ ಗೆ ಪಾರ್ಸೆಲ್ ಚಾರ್ಜ್‌, ಇನ್‌ಕಮ್‌ ಟ್ಯಾಕ್ಸ್, ಪೌಂಡ್‌ ಹಣವನ್ನು ಭಾರತೀಯ ರೂಪಾಯಿಗೆ ಬದಲಾಯಿಸಲು ಹಣ ಪಾವತಿಸಬೇಕು ಎಂದು ತಿಳಿಸಿದ್ದನು. ಇದನ್ನು ನಂಬಿದ ಮಹಿಳೆ ಆರೋಪಿಗಳು ಸೂಚಿಸಿದ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು ರೂ. 6,91,000 ಹಣವನ್ನು ವರ್ಗಾಯಿಸಿದ್ದಾರೆ. ಆದರೆ ಆ ಬಳಿಕ ಆರೋಪಿಗಳು ಮಹಿಳೆಗೆ ಪಾರ್ಸೆಲ್ ಕಳುಹಿಸದೇ, ಕಳುಹಿಸಿದ ಹಣವನ್ನೂ ವಾಪಾಸು ನೀಡದೇ ವಂಚಿಸಿದ್ದಾರೆ. ಈ ಬಗ್ಗೆ ಮಹಿಳೆ ನೀಡಿದ ದೂರಿನಂತೆ ಉಡುಪಿ ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!