ಕೋಟ: ಸಾಲ ಮರು ಪಾವತಿಸಲು ಹೋದ ಮಹಿಳೆ ನಾಪತ್ತೆ
ಕೋಟ ನ.30 (ಉಡುಪಿ ಟೈಮ್ಸ್ ವರದಿ): ಕುಂದಾಪುರದ ಸೊಸೈಟಿಗೆ ಲೋನ್ ಕಟ್ಟಲು ಹೋಗುವುದಾಗಿ ತಿಳಿಸಿ ಮನೆಯಿಂದ ಹೋದ ಮಹಿಳೆಯೊಬ್ಬರು ವಾಪಸ್ಸು ಬಾರದೆ ನಾಪತ್ತೆಯಾಗಿರುವ ಘಟನೆ ಬೇಳೂರು ಗ್ರಾಮದಲ್ಲಿ ನಡೆದಿದೆ.
ಬೇಳೂರು ಗ್ರಾಮದ ಸಂಪೂರ್ಣ (55) ನಾಪತ್ತೆಯಾದವರು. ಇವರು ನ.29 ರಂದು ಬೆಳಿಗ್ಗೆ 10.30ಕ್ಕೆ ಕುಂದಾಪುರದ ಸೊಸೈಟಿಗೆ ಲೋನ್ ಕಟ್ಟಲು ಹೋಗುವುದಾಗಿ ಹೇಳಿ ಹೋದವರು ಈ ವರೆಗೂ ಮನೆಗೆ ಬಾರದೇ ಕಾಣೆಯಾಗಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.