ರಜತಮಹೋತ್ಸವ ಸಂಭ್ರಮದಲ್ಲಿ ಸಂತೆಕಟ್ಟೆ ಮೌಂಟ್ ರೋಸರಿ ಆಂಗ್ಲ ಶಾಲೆ

ಉಡುಪಿ: ಚರ್ಚ್ ವಠಾರದಲ್ಲಿ ಒಂದು ಶಾಲೆ ಇರುವುದು ಸರ್ವೆಸಾಮನ್ಯ. ಆದರೆ ಕಲ್ಯಾಣಪುರ-ಸಂತೆಕಟ್ಟೆಯಲ್ಲಿ ಚರ್ಚ್ ಸ್ಥಾಪನೆಯಾಗಿ 160 ವರುಷಗಳ ನಂತರ 1997 ರಲ್ಲಿ ಅಂದಿನ ಪ್ರಧಾನ ಧರ್ಮಗುರುಗಳು ವಂದನೀಯ ಗೊಡ್ ಫ್ರಿ ಸಲ್ಡಾನ್ಹಾರವರ ದೂರದರ್ಶಿತ್ವದಲ್ಲಿ 185 ವರುಷಗಳ ಇತಿಹಾಸವಿರುವ ಕೇವಲ 25 ಮಕ್ಕಳು ಹಾಗು ಇಬ್ಬರು ಶಿಕ್ಷಕರೊಂದಿಗೆ ಆರಂಭವಾಯಿತು.

ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿರುವ ಚರ್ಚಿನ ಎಡಕ್ಕೆ ಮುಂಭಾಗದಲ್ಲಿ ವ್ಯಾವಹಾರಿಕ ಕಟ್ಟಡವಿದ್ದು ಬಲಬದಿಯಲ್ಲಿ ಅದೇ ಕಟ್ಟಡವನ್ನು ಮುಂದುವರಿಸಬಹುದಿತ್ತು. ಆದರೆ ಸ್ಥಾಪಕ ಸಂಚಾಲಕರಿಗೆ ಚರ್ಚ್ ಮೈದಾನದಲ್ಲಿ ಮಕ್ಕಳ ಲವಲವಿಕೆ, ಅವರ ನಲಿದಾಟ ಹೆಚ್ಚು ಸೂಕ್ತವೆನಿಸಿ ಶಾಲೆ ಆರಂಭಿಸಲು ಯೋಜನೆ ರೂಪಿಸಿದರು. ಆದರೆ ಅಸುಪಾಸಿನಲ್ಲಿ ಈಗಾಗಲೆ ಶಾಲೆಗಳು ಆರಂಭವಾಗಿದ್ದು, ಸುಲಭದಲ್ಲಿ ಶಿಕ್ಷಣ ಇಲಾಖೆಯಿಂದ ಅನುಮತಿ ದೊರೆಯಲಿಲ್ಲ. 1998 ರಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಅನುಮತಿ ನೀಡಿತು. ಶಾಲೆಯು ಮೌಂಟ್ ರೋಸರಿ ಎಜುಕೇಶನ್ ಟ್ರಸ್ಟ್ ಅಡಿಯಲ್ಲಿ ಆರಂಭಗೊಂಡಿತು.

2003 ರಲ್ಲಿ ಶಾಲೆಯು ಕಥೋಲಿಕ್ ವಿದ್ಯಾಮಂಡಳಿ ಮಂಗಳೂರು ಇಲ್ಲಿನ ಆಡಳಿತಕ್ಕೊಳಪಟ್ಟಿತು. 2003 ರಲ್ಲಿ ಅಂದಿನ ಸಂಚಾಲಕರಾದ ವಂದನೀಯ ಜೋನ್ ನೊರೊನ್ಹಾರವರು ಹೊಸ ಕಟ್ಟಡಕ್ಕೆ ಚಾಲನೆ ನೀಡಿದರು. ಮಾಂಡವಿ ಬಿಲ್ಡರ್ಸ್‍ನ ಮಾಲಕರಾದ ಡಾ | ಜೆರಿ ವಿನ್ಸೆಂಟ್ ಡಾಯಸ್ ಯಾವುದೇ ಪ್ರತಿಫಲದ ಆಪೇಕ್ಷವಿಲ್ಲದೆ ಕಟ್ಟಡ ನಿರ್ಮಿಸಿ ನೀಡಿದರು. ಮಕ್ಕಳ ಸಂಖ್ಯೆ ದ್ವಿಗುಣಗೊಂಡಾಗ ವಂದನೀಯ ಫಿಲಿಪ್ ನೆರಿಯವರು ನಾಲ್ಕು ಅಂತಸ್ತಿನ ಹೊಸ ಕಟ್ಟಡಕ್ಕೆ 2016ರಲ್ಲಿ ಚಾಲನೆ ನೀಡಿದರು.

2019ರಲ್ಲಿ ಅಂದಿನ ಸಂಚಾಲಕರಾದ ವಂದನೀಯ ಡಾ | ಲೆಸ್ಲಿ ಡಿಸೋಜ ಕಟ್ಟಡ ಪೂರ್ಣಗೊಳಿಸಿ ಗ್ರಂಥಾಲಯ, ಪ್ರಯೋಗಾಲಯ, ಸಭಾಭವನ ,ಮಕ್ಕಳ ಸುರಕ್ಷತೆಗೆ ದಾರಿ, ಹಳೇ ಕಟ್ಟಡಕ್ಕೆ ಹೊಸ ಮೆರುಗು ನೀಡಿದರು. ಈ ಕಟ್ಟಡವನ್ನು ಉಡುಪಿ ಧರ್ಮ ಪ್ರಾಂತ್ಯದ ಬಿಷಪ್ ಪೂಜ್ಯ ಡಾ | ಜೆರಾಲ್ಡ್ ಐಸಾಕ್ ಲೋಬೋ ಉದ್ಘಾಟಿಸಿದರು.

ಶಾಲೆಯ ಸ್ಥಾಪಕ ಮುಖ್ಯ ಶಿಕ್ಷಕಿ ಸಿ | ಎಡ್ರಿಯಾನ್ ಸೆರಾವೊ ಶಾಲೆಯಲ್ಲಿ ಪಠ್ಯ-ಪಠ್ಯೇತರ ಚಟುವಟಿಕೆಗಳಿಗೆ ಒತ್ತು ನೀಡಿದರು. 25 ವಿದ್ಯಾರ್ಥಿಗಳೊಂದಿಗೆ ಆರಂಭವಾದ ಶಾಲೆ 25 ವರ್ಷಗಳ ಹೊಸ್ತಿಲಿನಲ್ಲಿರುವಾಗ 1559 ವಿದ್ಯಾರ್ಥಿಗಳು 44 ಶಿಕ್ಷಕರು 10 ಶಿಕ್ಷಕೇತರ ಸಿಬ್ಬಂದಿ ಸೇವೆ ಸಲ್ಲಿಸುತ್ತಿದ್ದಾರೆ. ಶಾಲೆಯು ನಿರಂತರವಾಗಿ ಹತ್ತನೇ ತರಗತಿಯಲ್ಲಿ 100% ಫಲಿತಾಂಶದ ಜೊತೆಗೆ ಸರಾಸರಿ 25-30 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದುತ್ತಿರುವುದು ಹೆಮ್ಮೆಯ ವಿಚಾರ.

ಶಾಲೆಯು ರಾಜ್ಯಮಟ್ಟದ ಚೆಸ್ ಪಂದ್ಯಾಟಗಳ ಆಯೋಜನೆ, ಜಿಲ್ಲಾ ತಾಲೂಕು ಹೋಬಳಿ ಮಟ್ಟದ ಕ್ರೀಡಾಕೂಟ ,ಬ್ರಹ್ಮಾವರ ವಲಯ ಮಟ್ಟದ ಪ್ರತಿಭಾ ಕಾರಂಜಿಯನ್ನು ಯಶಸ್ವಿಯಾಗಿ ಆಯೋಜಿಸಿದೆ. ಕೋವಿಡ್ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಪಬ್ಲಿಕ್ ಪರೀಕ್ಷೆಗಳನ್ನು ನಡೆಸಲು ಸಂಸ್ಥೆಯಲ್ಲಿ ಅವಕಾಶ ನೀಡಿ ಯಶಸ್ವಿಗೊಳಿಸಿದೆ. ಪೋಲೀಸ್ ಇಲಾಖೆಯ ಅರ್ಹತಾ ಪರೀಕ್ಷಾ ಕೇಂದ್ರವಾಗಿ ಕೂಡಾ ಸಂಸ್ಥೆಯು ಸಹಕಾರ ನೀಡಿದೆ.

ಚಿತ್ರಕಲೆ,ಭಾಷಣ,ಶಾಸ್ತ್ರೀಯ ನೃತ್ಯ, ಕ್ರೀಡೆಗಳಲ್ಲಿ ಈ ಸಂಸ್ಥೆಯ ವಿದ್ಯಾರ್ಥಿಗಳು ಜಿಲ್ಲಾ,ರಾಜ್ಯ,ರಾಷ್ಟ್ರಮಟ್ಟದ ಸಾಧನೆಯನ್ನು ಮಾಡಿದ್ದಾರೆ. ಪಠ್ಯದ ಜೊತೆಗೆ ಭರತನಾಟ್ಯ ,ಕರಾಟೆ,ಯಕ್ಷಗಾನ,ವಾದ್ಯವೃಂದ,ಸ್ಕೌಟ್ಸ್ ಗೈಡ್ಸ್,ಸ್ಪೀಡ್ ಮ್ಯಾತ್ಸ್,ಅ¨ಕಾಸ್, ಚಿತ್ರಕಲೆಯಲ್ಲಿ ವಿಶೇಷ ತರಬೇತಿ ನೀಡುತ್ತಿದೆ.

ಡಿ.1 ಮತ್ತು 2 ರಂದು ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಸ್ವಾಮಿ,ಉಡುಪಿ ಶಾಸಕ ರಘುಪತಿ ಭಟ್,ಸ್ಥಾಪಕ ಧರ್ಮ ಗುರು ಗೊಡ್ ಫ್ರಿ ಸಲ್ಡಾನ್ಹಾ,ಕಲ್ಯಾಣಪುರ ಪಂಚಾಯತ್ ಅಧ್ಯಕ್ಷ ಕೃಷ್ಣ ಒಳಗೊಂಡು ಅತಿಥಿ ಅಭ್ಯಗತರ ಸಮ್ಮುಖದಲ್ಲಿ ಪ್ರಸ್ತುತ ಸಂಚಾಲಕ ವಂ |ಡಾ|ರೊಕ್ ಡಿಸೋಜ ಮುಖ್ಯ ಶಿಕ್ಷಕಿ ಸಿ|ವಂದಿತಾ ಶಿಕ್ಷಕ-ರಕ್ಷಕ ವೃಂದ, ಹಳೆ ವಿದ್ಯಾರ್ಥಿ ಸಂಘ,ಬೆಳ್ಳಿ ಮಹೋತ್ಸವ ಸಮಿತಿ ರಜತಸಂಭ್ರಮ ಆಚರಿಸಲು ಸಿದ್ಧವಾಗಿದೆ.

Leave a Reply

Your email address will not be published. Required fields are marked *

error: Content is protected !!