ಚಿಕ್ಕಮಗಳೂರು: ನ.28-ಡಿ.8 ವರೆಗೆ ದತ್ತಮಾಲಾ ಅಭಿಯಾನ

ಚಿಕ್ಕಮಗಳೂರು: ದಕ್ಷಿಣದ ಅಯೋದ್ಯೆ ಎಂದೇ ಕರೆಯಲ್ಪಡುವ ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತದಲ್ಲಿರುವ ದತ್ತಾತ್ರೇಯ ಪೀಠದಲ್ಲಿ ದತ್ತ ಜಯಂತಿ ಉತ್ಸವದ ಅಂಗವಾಗಿ ಪ್ರತೀ ವರ್ಷದಂತೆ ಈ ವರ್ಷವೂ ಕೂಡ ದತ್ತಮಾಲಾ ಅಭಿಯಾನವು ದಿನಾಂಕ 28-11-2022 ಸೋಮವಾರ ಸ್ಕಂದ ಪಂಚಮಿಯಂದು ಆರಂಭಗೊಂಡು ಡಿಸೆಂಬರ್ 8 ರಂದು ದತ್ತಜಯಂತಿಯ ದಿವಸ ದತ್ತ ಪೀಠದಲ್ಲಿ ಸಮಾಪಣೆಗೊಳ್ಳಲಿದೆ

ವಿಶ್ವಹಿಂದು ಪರಿಷದ್ ಬಜರಂಗದಳದ ನೇತೃತ್ವದಲ್ಲಿ ನಡೆಯುವ ದತ್ತಮಾಲಾ ಅಭಿಯಾನವು ಕರ್ನಾಟಕದ ಎಲ್ಲಾ ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿ ದತ್ತ ಭಕ್ತರು ಮತ್ತು ಭಜರಂಗದಳದ ಕಾರ್ಯಕರ್ತರು ನಾಳೆಯ ದಿನ ದತ್ತಮಾಲೆ ಹಾಕುವ ಮೂಲಕ ದತ್ತಮಲಾ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ ಇಡೀ ರಾಜ್ಯದಿಂದ ದತ್ತ ಜಯಂತಿಯ ದಿವಸ 50,000 ಕ್ಕೂ ಮಿಕ್ಕಿ ದತ್ತ ಮಾಲಾದಾರಿಗಳು ದತ್ತಪೀಠದಲ್ಲಿ ದತ್ತಪಾದುಕೆಯ ದರ್ಶನ ಪಡೆಯಲಿದ್ದಾರೆ.

ರಾಜ್ಯ ಸರಕಾರ ದತ್ತಪೀಠಕ್ಕೆ ಸಮಿತಿ ರಚನೆ ಮಾಡಿದ್ದು ಸ್ವಾಗತಾರ್ಹ ಅದೇ ರೀತಿ ತಕ್ಷಣ ಸರಕಾರ ಪೀಠಕ್ಕೆ ಹಿಂದೂ ಅರ್ಚಕರನ್ನು ನೇಮಕ ಮಾಡಬೇಕೆಂದು ಬಜರಂಗದಳ ಪ್ರಾಂತ ಸಂಚಾಲಕರು ಸುನಿಲ್ ಕೆ. ಆರ್. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!