ಹಿರಿಯಡ್ಕ: ಚಿನ್ನದ ಸರ ಕಳವು ಮಾಡಿದ ಹೊಮ್ ನರ್ಸ್ ಸೆರೆ

ಹಿರಿಯಡ್ಕ: ವೃದ್ಧ ಮಹಿಳೆಯ ಆರೈಕೆ ಬಂದ ಹೋಮ್‌ ನರ್ಸ್ ಕೆಲಸಕ್ಕೆ ಸೇರಿದ ಕೆಲವೇ ದಿನದಲ್ಲಿ ವೃದ್ದೆಯ ಕುತ್ತಿಗೆಯಲ್ಲಿದ್ದ ಒಂದುವರೆ ಲಕ್ಷ ರೂ. ಮೌಲ್ಯದ ಚಿನ್ನದ ಸರ ಕದ್ದು ಪರಾರಿಯಾಗಿದ್ದಳು.

ಹಿರಿಯಡ್ಕ ಪೊಲೀಸರ ಮಿಂಚಿನ‌ ಕಾರ್ಯಾಚರಣೆಯಲ್ಲಿ ಆರೋಪಿ ಯುವತಿಯನ್ನು ಬಾಗಲಕೋಟೆಯ ಹೆಬ್ಬಾಳ್ಳಿಯ ರೇಖಾ ಎಂಬವಳನ್ನು ವಶಕ್ಕೆ ಪಡೆದು ಕಳವು ಮಾಡಿಕೊಂಡಿದ್ದ ಚಿನ್ನದ ಸರವನ್ನು ಪೊಲೀಸರು ಸ್ವಾಧೀನ ಪಡಿಸಿಕೊಂಡಿದ್ದಾರೆ.

ಘಟನೆ ವಿವರ: ಮದಗದ ಚೆನ್ನಿಬೆಟ್ಟು ನಿವಾಸಿ ವಸಂತ ಶೆಟ್ಟಿ ಅವರು ತಮ್ಮ 98 ವರ್ಷದ ತಾಯಿ ಸರಸ್ವತಿ ಅವರ ಆರೈಕೆ ಮಾಡಿ ನೋಡಿಕೊಳ್ಳಲು ಉಡುಪಿಯ ಉಷಾ ಮ್ಯಾರೇಜ್ ಬ್ಯುರೋ & ಜಾಬ್ ಲಿಂಕ್ಸ್ ಏಜೆನ್ಸಿ ಮುಖಾಂತರ ರೇಖಾ ಹೆಬ್ಬಾಳ್ಳಿ ಎಂಬಾಕೆಯನ್ನು ಹೋಂ ನರ್ಸ್ ಆಗಿ ನೇಮಿಸಿದ್ದರು.

ಅ.20 ರಿಂದ ರೇಖಾ ಹೆಬ್ಬಳ್ಳಿ, ಸರಸ್ವತಿ ಅವರ ಆರೈಕೆ ಮಾಡಿ ನೋಡಿಕೊಂಡಿದ್ದು, ನ.21 ರಂದು ಸಂಜೆ ವೇಳೆ ರೇಖಾ ಹೆಬ್ಬಳ್ಳಿ ಯಾರಿಗೂ ಹೇಳದೇ ಮನೆಯಿಂದ ಹೋಗಿದ್ದಳು. ಬಳಿಕ ವಸಂತ ಶೆಟ್ಟಿ ಅವರು ಸರಸ್ವತಿ ಅವರ ಬಳಿ ಹೋಗಿ ನೋಡಿದಾಗ ಅವರ ಕುತ್ತಿಗೆಯಲ್ಲಿದ್ದ 1,45,000 ರೂ ಮೌಲ್ಯದ ಚಿನ್ನದ ಚೈನ್ ಕಂಡು ಬಂದಿಲ್ಲ. ಈ ಬಗ್ಗೆ ರೇಖಾಳಿಗೆ ಫೋನ್ ಮಾಡಿದಾಗ ಆಕೆಯು ಫೋನ್ ಸ್ವೀಕರಿಸುತ್ತಿರಲಿಲ್ಲ. ಅದರಂತೆ ವಸಂತ ಶೆಟ್ಟಿ ಅವರ ತಾಯಿಯ ಚಿನ್ನದ ಚೈನ್ ಕಳವಾಗಿದ್ದು ಚೈನನ್ನು ರೇಖಾ ಕಳವು ಮಾಡಿಕೊಂಡು ಹೋಗಿರುವ ಬಗ್ಗೆ ಸಂಶಯ ಇರುವುದಾಗಿ ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು‌ ಮಾಡಿದ್ದರು.

Leave a Reply

Your email address will not be published.

error: Content is protected !!