ಕಾಂಗ್ರೆಸ್ ನ ಸಾಮಾನ್ಯ ಕಾರ್ಯಕರ್ತರು ಪೋಸ್ಟರ್ ಅಂಟಿಸಲು ಮಾತ್ರವೇ? ಬಿಜೆಪಿ ಪ್ರಶ್ನೆ

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳಿಗೆ ರೂ.2 ಲಕ್ಷ ಶುಲ್ಕವನ್ನು ಕೆಪಿಸಿಸಿ ನಿಗದಿ ಮಾಡಿರುವ ವಿಚಾರವಾಗಿ ಬಿಜೆಪಿ ಟೀಕೆ ಮತ್ತೆ ಮುಂದುವರಿಸಿದೆ. ಸಾಮಾನ್ಯ ಕಾರ್ಯಕರ್ತರು ಪೋಸ್ಟರ್‌ ಅಂಟಿಸಲು ಮಾತ್ರವೇ? ಎಂದು ಪ್ರಶ್ನಿಸಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರನ್ನು ಬಿಜೆಪಿ ಸರಣಿ ಟ್ವೀಟ್‌ ಮೂಲಕ ತರಾಟೆಗೆ ತೆಗೆದುಕೊಂಡಿದೆ.

ಕಾಂಗ್ರೆಸ್‌ ಅಭ್ಯರ್ಥಿಯಾಗಲು ಅಧಿಕೃತ ಟಿಕೆಟ್‌ ಹರಾಜಿಗಿಟ್ಟಿರುವ ಕೆಪಿಸಿಸಿ ಅಧ್ಯಕ್ಷರು, ಟಿಕೆಟ್‌ಗಾಗಿಯೇ ಲಕ್ಷಾಂತರ ಕಟ್ಟಿಸಿಕೊಳ್ಳುವ ಮೂಲಕ ಸ್ಥಿತಿವಂತರಿಗೆ ಮಾತ್ರ ಟಿಕೆಟ್‌ ಎನ್ನುವ ನಿಯಮ ಜಾರಿಗೆ ತಂದಂತಿದೆ. ಸಾಮಾನ್ಯ ಕಾರ್ಯಕರ್ತರ ಪಾಡೇನು? ಎಂದು ಬಿಜೆಪಿ ಟ್ವೀಟ್‌ ಮಾಡಿದೆ.

ಕಾಂಗ್ರೆಸ್ ಪಕ್ಷದ ಟಿಕೆಟ್‌ಗೆ ಅರ್ಜಿ ಸಲ್ಲಿಸಲು ಲಕ್ಷಾಂತರ ಕಟ್ಟಬೇಕೆಂಬ ಕಟ್ಟಪ್ಪಣೆ ಮಾಡುವ ಮೂಲಕ ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ಇಲ್ಲ ಎನ್ನುವ ಸಂದೇಶ ಸಾರಿದೆ. ಸಾಮಾನ್ಯ ಕಾರ್ಯಕರ್ತರು ಪೋಸ್ಟರ್ ಅಂಟಿಸಲು ಮಾತ್ರವೇ? ಎಂದು ಪ್ರಶ್ನಿಸಿದೆ.

ಅರ್ಜಿ ಸಲ್ಲಿಸಲು ದಿನಾಂಕ ನಿಗದಿ ಪಡಿಸಿರುವ ಕೆಪಿಸಿಸಿ ಅಧ್ಯಕ್ಷರು ಅರ್ಜಿ ಸಲ್ಲಿಸದವರಿಗೆ ಟಿಕೆಟ್ ಇಲ್ಲ ಎಂದು ಈಗಲೇ ಘೋಷಣೆ ಮಾಡುವರೇ? ಅಥವಾ ಹೆಚ್ಚಿನ ದುಡ್ಡು ಕೊಡುವವರಿಗೆ ಬ್ಲಾಕ್‌ನಲ್ಲಿ ಮಾರಿಕೊಳ್ಳುವರೇ? ಎಂದು ಪ್ರಶ್ನಿಸಿದೆ. 

Leave a Reply

Your email address will not be published.

error: Content is protected !!