ಶಿರ್ವ: ಜುವೆಲ್ಲರಿ ಶಾಪ್‌’ನಲ್ಲಿ ಕಳ್ಳತನ- ನಾಲ್ವರು ಅಂತಾರಾಜ್ಯ ಕಳ್ಳರ ಬಂಧನ

ಶಿರ್ವ: ಗ್ರಾಹಕರ ಸೋಗಿನಲ್ಲಿ ಜುವೆಲ್ಲರಿ ಶಾಪ್‌ಗೆ ತೆರಳಿ ಕಳ್ಳತನ ಮಾಡುತ್ತಿದ್ದ ನಾಲ್ವರು ಅಂತಾರಾಜ್ಯ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡಿನ ದಿಂಡಿಗಲ್‌ ಜಿಲ್ಲೆಯ ಶನಾಬೆಲ್ಲಾ ಬಿ.(45), ಮೊಹಮ್ಮದ್‌ ಆಲಿ (32), ಅಶುರ್‌ ಆಲಿ (32) ಮತ್ತು ಗಣೇಶ್‌ ಕುಮಾರ್‌ ಬಂಧಿತರು. ಬಂಧಿತರಿಂದ ರೂ. 1,49,000 ಮೌಲ್ಯದ 28.882 ಗ್ರಾಂ ತೂಕದ ಚಿನ್ನದ ಗಟ್ಟಿ, ರೂ.1,17,000 ಮೌಲ್ಯದ 26 ಗ್ರಾಂ ಚಿನ್ನದ ಗಟ್ಟಿ ಮತ್ತು ಒಂದು ಮೋಟಾರ್‌ ಬೈಕನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮಲೆಯಾಳ ಮತ್ತು ತಮಿಳಿನಲ್ಲಿ ಮಾತನಾಡುತ್ತಿದ್ದ ಅಪರಿಚಿತರಿಬ್ಬರು ಗ್ರಾಹಕರ ಸೋಗಿನಲ್ಲಿ ಶಿರ್ವ ಪೇಟೆಯಲ್ಲಿನ ಆಭರಣದಂಗಡಿಗೆ ಬಂದು ಜೂನ್ 6 ರಂದು ಮಧ್ಯಾಹ್ನ 1.49 ಲ.ರೂ ಮೌಲ್ಯದ 28.79 ಗ್ರಾಂ. ಚಿನ್ನದ ನೆಕ್ಲೆಸ್‌ ಕಳವು ಮಾಡಿದ್ದರು.

Leave a Reply

Your email address will not be published.

error: Content is protected !!