ಮದುವೆಗೆ ವರ ಮಾಡಿಕೊಂಡ ಅಗ್ರಿಮೆಂಟ್ ಏನು ಗೊತ್ತಾ….?!

ಕೇರಳ ನ.13: ಮದುವೆಯಾದ ನಂತರ ಹೀಗೆ ಇರಬೇಕು ಎಂದು ಕೊಳ್ಳುತ್ತಾರೆ. ಕೆಲವೊಮ್ಮೆ ಮದುವೆಯಾದ ಮೇಲೆ ಹೇಗಿರಬೇಕೆಂಬ ಬಗ್ಗೆ ಭರವಸೆಗಳು ಸಿಗುತ್ತವಾದರೂ ಅವು ಹುಸಿಯಾಗುವುದೇ ಹೆಚ್ಚು. ಆದರೆ ನೀವೆಂದಾದರೂ ಈ ಬಗ್ಗೆ ಮದುವೆಗೆ ಮುಂಚಿತವಾಗಿಯೇ ಒಪ್ಪಂದ ಮಾಡಿಕೊಂಡಿದ್ದು ಕೇಳಿದ್ದೀರಾ. 

ಹೌದು ಕೇರಳದಲ್ಲಿ ನಡೆದ ಮದುವೆಯೊಂದರಲ್ಲಿ  ಮದುವೆಗೆ ಮೊದಲೇ ಮುಂದೆ ಹೇಗೆ ಇರಬೇಕು ಎಂಬ ಬಗ್ಗೆ ವಧು ವರರ ನಡುವೆ ಒಪ್ಪಂದವಾಗಿದೆ.

ಎಸ್‌.ಅರ್ಚನಾ ಎಂಬ ಯುವತಿ ರಘು ಎಸ್‌ ಕೆಡಿಆರ್‌ ಎಂಬ ವ್ಯಕ್ತಿಯನ್ನು ವಿವಾಹ ಮಾಡಿಕೊಳ್ಳುವಾಗ ಒಂದು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

“ಮದುವೆಯ ನಂತರ ನಾನು ರಾತ್ರಿ 9 ಗಂಟೆವರೆಗೆ ಪತಿಗೆ ಕರೆ ಮಾಡಿ ತೊಂದರೆ ಕೊಡುವುದಿಲ್ಲ. ಅಲ್ಲಿಯವರೆಗೆ ಪತಿ ತನ್ನ ಗೆಳೆಯರೊಂದಿಗೆ ಕಾಲ ಕಳೆಯಲು ಅವಕಾಶ ನೀಡುತ್ತೇನೆ’ ಎಂಬುದೇ ಈ ಒಪ್ಪಂದದಲ್ಲಿರುವ ಅಂಶವಾಗಿದೆ.

ರಘು ಮೂಲತಃ ಬ್ಯಾಡ್ಮಿಂಟನ್‌ ಆಟಗಾರ.ಅವರು ಇನ್ನಿತರೆ ಆಟಗಾರರೊಂದಿಗೆ 17 ಮಂದಿಯಿರುವ ವಾಟ್ಸ್‌ಆ್ಯಪ್‌ ಗುಂಪು ಮಾಡಿಕೊಂಡಿದ್ದಾರೆ.

ಈ ಗುಂಪಿನ ಪ್ರತಿಯೊಬ್ಬರೂ ವಿವಾಹವಾಗುವಾಗ ಇಂತಹದ್ದೇನಾದರೂ ಮಾಡಿ ಸುದ್ದಿಯೆಬ್ಬಿಸುತ್ತಾರೆ. ಈ ಬಾರಿಯೂ ಅಂತಹದ್ದೇ ಒಂದು ಅಚ್ಚರಿ ನೀಡಿದ್ದಾರೆ.

ಸದ್ಯ ಈ ಒಪ್ಪಂದದ ಮದುವೆ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

Leave a Reply

Your email address will not be published.

error: Content is protected !!