ಉಡುಪಿ: ಕುಸಿದು ಬಿದ್ದು ಚಿನ್ನದ ಕೆಲಸಗಾರ ಮೃತ್ಯು

ಉಡುಪಿ ನ.12(ಉಡುಪಿ ಟೈಮ್ಸ್ ವರದಿ): ಬಸ್ ನಿಲ್ದಾಣದಲ್ಲಿ ಕುಸಿದು ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ 76ನೇ ಬಡಗುಬೆಟ್ಟು ಗ್ರಾಮದ  ಚಿಟ್ಪಾಡಿಯಲ್ಲಿ ನಡೆದಿದೆ.

ಉಡುಪಿಯಲ್ಲಿ ಚಿನ್ನದ ಕೆಲಸ ಮಾಡುತ್ತಿದ್ದ ನಾಗೇಶ ( 54) ಮೃತಪಟ್ಟವರು. 

ಇವರು ಉಡುಪಿಯ ಚಿತ್ತರಂಜನ್‌ ಸರ್ಕಲ್‌ನಲ್ಲಿ  ಚಿನ್ನದ ಕೆಲಸವನ್ನು ಮಾಡಿಕೊಂಡಿದ್ದು, ನ.11 ರಂದು ಸಂಜೆ ವೇಳೆ ಉಡುಪಿ  ತಾಲೂಕಿನ 76ನೇ  ಬಡಗುಬೆಟ್ಟು ಗ್ರಾಮದ ಚಿಟ್ಪಾಡಿಯ ಹೋಟೆಲ್‌ ವೊಂದರ ಬಳಿಯ ಬಸ್‌ ನಿಲ್ದಾಣದಲ್ಲಿ ಕುಸಿದು  ಬಿದ್ದಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲು ಕರೆದುಕೊಂಡು ಹೋಗುತ್ತಿದ್ದ ವೇಳೆ ಅವರು  ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಈ ಬಗ್ಗೆ ಮೃತರ ತಮ್ಮ ಸಂತೋಷ್ ಆಚಾರ್ಯ ಅವರು ನೀಡಿದ ಮಾಹಿತಿಯಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.

error: Content is protected !!