ಮಲ್ಪೆ: ಪಡುತೋನ್ಸೆ ಜೇನುಹುಳ ಕಚ್ಚಿ ಮಹಿಳೆ ಮೃತ್ಯು

ಮಲ್ಪೆ ನ.12(ಉಡುಪಿ ಟೈಮ್ಸ್ ವರದಿ): ಜೇನು ಹುಳ ಕಚ್ಚಿ 53 ವರ್ಷದ ಮಹಿಳೆಯೊಬ್ಬರು ಮೃತಪಟ್ಟ ಘಟನೆ  ಪಡುತೋನ್ಸೆ ಗ್ರಾಮದ ಕೆಮ್ಮಣ್ಣುವಿನಲ್ಲಿ ನಡೆದಿದೆ.

ಸಂಪಾ (53 ) ಮೃತಪಟ್ಟವರು. ಇವರು ಎಂದಿನಂತೆ ನಿನ್ನೆ ಬೆಳಿಗ್ಗೆ 10:00 ಗಂಟೆಗೆ ಕುದ್ರುವಿನಲ್ಲಿರುವ ತೋಟಕ್ಕೆ ಹಸುಗಳಿಗೆ ಹುಲ್ಲು ತರಲು  ಹೋಗಿದ್ದರು.  ಈ ವೇಳೆ ಹುಲ್ಲು ಕೊಯ್ಯುವಾಗ ಅವರಿಗೆ ಜೇನು ಹುಳ ಕಚ್ಚಿರುವುದಾಗಿ ಅವರು ಮನೆಗೆ ಬಂದು ತಿಳಿಸಿದ್ದರು.  ಈ ವೇಳೆ ಮನೆಯವರು ಸಂಪಾರವರನ್ನು ಹತ್ತಿರದ  ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಮನೆಗೆ ಕರೆದುಕೊಂಡು ಬಂದಿದ್ದರು. ಮನೆಯಲ್ಲಿ  ಇರುವಾಗ ತೀವ್ರ ಅಸ್ವಸ್ಥಗೊಂಡಿದ್ದ ಸಂಪಾ ಅವರನ್ನು ಚಿಕಿತ್ಸೆಗೆ ಉಡುಪಿಯ  ಆಸ್ಪತ್ರೆಯಲ್ಲಿ ದಾಖಲಿಸಿದ್ದರು. ಆದರೆ ಸಂಪಾ ರವರು  ಚಿಕಿತ್ಸೆ ಫಲಕಾರಿ ಆಗದೇ ರಾತ್ರಿ 7:30 ಗಂಟೆ ಸಮಯಕ್ಕೆ  ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ಬಗ್ಗೆ ಮಲ್ಪೆ  ಠಾಣೆಯಲ್ಲಿ ಮೃತರ ಅಳಿಯ ಹರಿದಾಸ ಎಂಬವರು ನೀಡಿದ ಮಾಹಿತಿಯಂತೆ ಪ್ರಕರಣ ದಾಖಲಾಗಿದೆ.

Leave a Reply

Your email address will not be published.

error: Content is protected !!