ಕರಾಟೆಯಲ್ಲಿ 2ನೇ ಬಾರಿ ಅವಳಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ ರಿಯಾ ಶೆಟ್ಟಿ

ಉಡುಪಿ: ಹಾವಂಜೆ ಗ್ರಾಮದ ಛಾಯಾಗ್ರಾಹಕ ಕೀಳಂಜೆ ಗಣೇಶ್ ಶೆಟ್ಟಿ, ಜಯಲಕ್ಷ್ಮೀ ಶೆಟ್ಟಿ ದಂಪತಿಗಳ ಸುಪುತ್ರಿ ರಿಯಾ ಜಿ ಶೆಟ್ಟಿ ಉಡುಪಿ ಒಳಕಾಡು ಶಾಲೆಯ 8 ನೇ ತರಗತಿಯ ವಿದ್ಯಾರ್ಥಿನಿ.

ಈಕೆ ಅಂತರಾಷ್ಟ್ರೀಯ ಮಟ್ಟದ ಕರಾಟೆ ಪಟು ಶಿಕ್ಷಕಿ ಪ್ರವೀಣ ಪರ್ಕಳ ಇವರ ಶಿಷ್ಯೆಯಾಗಿದ್ದು ಪರ್ಕಳ ಪಿ.ಕೆ.ಸಿ ತಂಡದ ಹೆಮ್ಮೆಯ ಸದಸ್ಯೆಯಾಗಿದ್ದಾಳೆ. ನ.5 ಮತ್ತು 6 ರಂದು ಇನ್ಸ್ ಟಿಟ್ಯೂಟ್ ಅಫ್ ಕರಾಟೆ ಎಂಡ್ ಆಟ್ಸ್೯ ಕೊಡವೂರು ಇವರ ವತಿಯಿಂದ ಉಡುಪಿಯ ಅಮ್ರತ್ ಗಾರ್ಡನ್ ಸಭಾಂಗಣದಲ್ಲಿ ನಡೆದ ರಾಷ್ಟ್ರ ಮಟ್ಟದ 40 ನೇ ಸ್ಪರ್ಧಾ ಕೂಟದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ ರಿಯಾ ಜಿ. ಶೆಟ್ಟಿ ಕಟ ಮತ್ತು ಕುಮಿಟೆ ಎರಡು ವಿಭಾಗದಲ್ಲಿಯೂ ಅವಳಿ ಚಿನ್ನ ಗೆದ್ದ ಸಾಧಕಿಯಾಗಿದ್ದು, ರಾಷ್ಟ್ರ ಮಟ್ಟದಲ್ಲಿ ಆಯೋಜಿಸಲ್ಪಟ್ಟ ಸತತ ಎರಡನೇ ಪಂದ್ಯದಲ್ಲಿಯೂ 2ನೇ ಬಾರಿಗೆ ಮತ್ತೆ ಅವಳಿ ಚಿನ್ನದೊಡತಿಯಾಗಿದ್ದು ವಿಶೇಷ ಸಾಧನೆ.

ಅಷ್ಟೇ ಅಲ್ಲದೆ ಟೀಂ ಕಟ ವಿಭಾಗದಲ್ಲಿಯೂ ಬೆಳ್ಳಿ ಪದಕ ಗೆದ್ದುಕೊಂಡು ಕರಾಟೆಯಲ್ಲಿ ಸಾಧನೆಗೈದ ಈ ಬಾಲ ಪ್ರತಿಭೆ ಭವಿಷ್ಯದಲ್ಲಿ ಕರಾಟೆ ಚಾಂಪಿಯನ್ ಎನಿಸಿಕೊಳ್ಳುವ ಭರವಸೆ ಮೂಡಿಸಿದ್ದಾಳೆ.

Leave a Reply

Your email address will not be published. Required fields are marked *

error: Content is protected !!