ಉಡುಪಿ: ಜನರ ನಿರೀಕ್ಷೆಯಂತೆ ಮಾಧ್ಯಮ ಕೆಲಸ ಮಾಡಲಿ- ಸಿಎಂ ಸಲಹೆ 

ಉಡುಪಿ, ನ.7: ಜನರ ಮನಸ್ಸಿನ ಆಶೋತ್ತರ ಹಾಗೂ ನಿರೀಕ್ಷೆೆಗಳನ್ನು ಗಮನದಲ್ಲಿಟ್ಟುಕೊಂಡು ಎಲ್ಲ ಮಾಧ್ಯಮಗಳು ಕೆಲಸ  ಮಾಡಬೇಕು ಎಂದು  ಮುಖ್ಯಮಂತ್ರಿ ಬಸವರಾಜ ಬೊಮ್ಮಾಾಯಿ ತಿಳಿಸಿದರು.

ಮಣಿಪಾಲ ಮೀಡಿಯಾ ನೆಟ್ ವರ್ಕ್ ಲಿಮಿಟೆಡ್‌ನಿಂದ ಎಂಜಿಎಂ ಕಾಲೇಜಿನ ಸಹಯೋಗದಲ್ಲಿ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಸೋಮವಾರ ನಡೆದ ಮಣಿಪಾಲದಲ್ಲಿ ಅರಳಿದ  ಪತ್ರಿಕಾ ರಂಗದ ಧೀಮಂತ  ಸಾಧಕರ  ಶತಮಾನೋತ್ತರ ಸಂಸ್ಮರಣೆ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊೊಂಡು ಮಾತನಾಡಿದರು.  

ಸ್ವಾಾತಂತ್ರ್ಯ ಹೋರಾಟದಲ್ಲಿ ಭಾರತದ  ಪತ್ರಿಕೆಗಳ ಪಾತ್ರ ಬಹಳ ದೊಡ್ಡದು. ಮಾಧ್ಯಮಗಳಿಲ್ಲದ ಸಂದರ್ಭದಲ್ಲಿ ಬಹಳಷ್ಟು ಪತ್ರಿಕೆಗಳು ಕರಪತ್ರಿಕಗಳಾಗಿ ಬರುತ್ತಿದ್ದವು. ಮಹಾತ್ಮಾಾ ಗಾಂಧೀಜಿ  ಅವರೂ ಕೂಡ ಪತ್ರಿಕೆಗಳ ಮೂಲಕವೇ ತಮ್ಮ ಸಂದೇಶವನ್ನು ತಿಳಿಸುತ್ತಿದ್ದರು. ಅಂಥ ಸಂದರ್ಭದಲ್ಲಿ ಕರಾವಳಿ ಭಾಗದ ಪಾತ್ರ ಮಹತ್ವದ್ದು. ಕರ್ನಾಟಕದ ಮೊದಲ ಪತ್ರಿಕೆ ಪ್ರಾಾರಂಭವಾಗಿದ್ದೇ ಮಂಗಳೂರಿನಿಂದ. ಮೊದಲನೇ ಪತ್ರಿಕೆ ಇಲ್ಲಿ ಹಟ್ಟಬೇಕಾದರೆ, ದೂರದೃಷ್ಟಿಯಿರುವ  ಚಿಂಕತರು, ಅದನ್ನು ಬರಹದಲ್ಲಿ ಅಭಿವ್ಯಕ್ತಿ ಮಾಡುವ ಸಾಹಿತಿಗಳು ಮತ್ತು ದೇಶ ಪ್ರೇಮ ಈ ಕರಾವಳಿ ಭಾಗದಲ್ಲಿ ಪ್ರಮುಖವಾಗಿ ಬೆಳೆದಿದೆ ಎನ್ನುವುದು ಎದ್ದು ಕಾಣುತ್ತದೆ ಎಂದರು.

ಟಿ.ಎಂ.ಎ. ಪೈ ಅವರು ಮಣಿಪಾಲ ಪ್ರೆೆಸ್ ಪ್ರಾರಂಭಿಸಿ ಮಣಿಪಾಲಷ್ಟೇ ಅಲ್ಲದೇ ಭಾರತದಲ್ಲಿಯೇ ದೊಡ್ಡ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಕ್ರಾOತಿಯನ್ನು ಮಾಡಿದ್ದಾರೆ. ಮಣಿಪಾಲ ಇಂದು ಶಿಖರದೆತ್ತರಕ್ಕೇ ಬೆಳೆದಿರುವುದು ಹೆಮ್ಮೆ ಪಡುವ ವಿಚಾರ ಎಂದ ಮುಖ್ಯಮಂತ್ರಿಗಳು ಇದಕ್ಕೆೆ ಶ್ರಮಿಸಿದ ಎಲ್ಲರನ್ನೂ ಅಭಿನಂದಿಸಿದರು.

ಪ್ರಜಾಪ್ರಭುತ್ವದ ಉಳಿವಿನಲ್ಲಿ ಪತ್ರಿಕೆಗಳ ಪಾತ್ರ: ಪ್ರಜಾಪ್ರಭುತ್ವದ  ವ್ಯವಸ್ಥೆೆಯಲ್ಲಿ ಪತ್ರಿಕೋದ್ಯಮ ಅತ್ಯಂತ ಮಹತ್ವದ ಪಾತ್ರವನ್ನು ವಹಿಸುತ್ತದೆ. ಪ್ರಜಾಪ್ರಭುತ್ವ ಜೀವಂತವಾಗಿದ್ದರೆ ಅದಕ್ಕೆೆ ಪತ್ರಿಕೆಗಳು ಹಾಗೂ ವಿದ್ಯುನ್ಮಾನ ಮಾಧ್ಯಮ ಕಾರಣ. ಅನೇಕರಿಗೆ ಈ ದೇಶದಲ್ಲಿ, ರಾಜ್ಯದಲ್ಲಿ, ಊರಿನಲ್ಲಿ ಏನಾಗುತ್ತಿದೆ ಎಂಬ ಬಗ್ಗೆೆ ಮಾಹಿತಿ ಇದ್ದಾಗ ಮಾತ್ರ ನಮ್ಮ ದೇಶದ ಬಗ್ಗೆೆ ಜಾಗೃತಿ ಹಾಗೂ ಕಳಕಳಿ ಉಂಟಾಗಲು ಸಾಧ್ಯವಿದೆ. ಈ ಹಿನ್ನೆೆಲೆಯಲ್ಲಿ ಪ್ರಜಾಪ್ರಭುತ್ವದ ಉಳಿವಿಗೆ ಪತ್ರಿಕೋದ್ಯಮ ಬಹಳ ದೊಡ್ಡ ಪಾತ್ರವನ್ನು ವಹಿಸಿದೆ ಎಂದರು.

ರಾಜಕಾರಣಿಗಳು ಮತ್ತು ಪತ್ರಿಕೆಗಳ ಅವಿನಾಭಾವ ಸಂಬಂಧ: ರಾಜಕಾರಣಿಗಳು ಮತ್ತು ಪತ್ರಿಕೆಗಳದ್ದು ಅವಿನಾಭಾವ ಸಂಬಂಧ. ನಿಮ್ಮನ್ನು ಬಿಟ್ಟು ನಾವು, ನಮ್ಮನ್ನು ಬಿಟ್ಟು ನೀವು ಇರಲು ಸಾಧ್ಯವಿಲ್ಲ. ರಾಜಕೀಯ ಸುದ್ದಿಇಲ್ಲದೆ ಪತ್ರಿಕೆಗಳು ಸಪ್ಪೆೆಯಾಗಿರುತ್ತವೆ. ರಾಜಕಾರಣಿಗಳೂ ಸಹ ಪತ್ರಿಕೆಗಳಿಗೆ ರಜೆ ಇದ್ದರೆ ಒದ್ದಾಡುವಂತಾಗುತ್ತದೆ. ನಾವು ಹೇಳವುದು ಜನರಿಗೆ ಮುಟ್ಟಿಸುವ ಕೆಲಸ ಮಾಧ್ಯಮಗಳು ಮೂಲಕವೇ ಆಗುತ್ತದೆ.  ಇದೊಂದು ರೀತಿಯಲ್ಲಿ ಗಂಡಹೆಂಡತಿಯ ಸಂಬಂಧವಿದ್ದಂತೆ. ಒಬ್ಬರಿಗೊಬ್ಬರು ಇರಲೇಬೇಕಾಗುತ್ತದೆ ಎಂದರು.

ಟೀಕೆಗಳಿಂದ ಎಚ್ಚರಿಕೆಯ ಹೆಜ್ಜೆೆಯಿಡಲು ಸಾಧ್ಯ: ಪ್ರಜಾಪ್ರಭುತ್ವದ ಭಾರತದಲ್ಲಿ ಪತ್ರಿಕೆಗಳು ನಮ್ಮನ್ನು ಸದಾ ಕಾಲ ಹೊಗಳುತ್ತಿರಬೇಕೆಂದು ನಿರೀಕ್ಷೆೆ ಮಾಡುವುದು ದಡ್ಡತನ. ಪತ್ರಿಕೆಗಳು ಜಾಗೃತಿ ಮೂಡಿಸಲೆಂದೇ ಇದೆ.  ಹಾಗಿದ್ದಾಗಲೇ ಆಡಳಿತ ಮಾಡುವವರಿಗೆ ಎಚ್ಚರಿಕೆಯ ನಡೆ ಇಡಲು ಸಾಧ್ಯವಾಗುತ್ತದೆ. ಟೀಕೆಗಳನ್ನು ಸ್ವಾಗತಿಸ ಬೇಕು. ಸುಧಾರಣೆಗೆ ಅವಕಾಶಗಳೂ ಸಹ ಇರುತ್ತದೆ. ಪತ್ರಿಕೆಗಳಲ್ಲಿ ಬರುವ ಟೀಕೆಟಿಪ್ಪಣಿಗಳಿಂದಲೇ  ಹಲವಾರು ನಿರ್ಣಯಗಳನ್ನು ಕೈಗೊಂಡು ಸುಧಾರಣೆಗಳನ್ನು ತಂದಿದ್ದೇವೆ ಎಂದರು.

ತರಂಗ ವಾರಪತ್ರಿಕೆಯ ವ್ಯವಸ್ಥಾಾಪಕ ಸಂಪಾದಕಿ ಡಾ ಸಂಧ್ಯಾ ಎಸ್. ಪೈ ಅವರು ಅಧ್ಯಕ್ಷತೆ ವಹಿಸಿದ್ದರು. ಸಚಿವರಾದ ವಿ.ಸುನಿಲ್ ಕುಮಾರ್, ಎಸ್.ಅಂಗಾರ, ಶಾಸಕ ಕೆ. ರಘುಪತಿ ಭಟ್, ಮಣಿಪಾಲ್ ಮೀಡಿಯಾ ನೆಟ್‌ವರ್ಕ್‌ನ ಕಾರ್ಯನಿರ್ವಾಹಕ ಅಧ್ಯಕ್ಷರೂ ಆದ ಎಂಜಿಎಂ ಕಾಲೇಜು ಟ್ರಸ್‌ಟ್‌‌ನ ಅಧ್ಯಕ್ಷರಾದ ಟಿ. ಸತೀಶ್ ಪೈ, ಎಂಟಿಎಲ್‌ನ ಕಾರ್ಯನಿರ್ವಾಹಕ ಅಧ್ಯಕ್ಷರಾದ ಗೌತಮ್ ಎಸ್.ಪೈ, ಮಾಹೆ ವಿ.ವಿ. ಸಹ ಕುಲಾಧಿಪತಿ ಡಾ ಎಚ್. ಎಸ್. ಬಲ್ಲಾಾಳ್, ಎಂಎಂಎನ್‌ಎಲ್‌ನ ಆಡಳಿತ ನಿರ್ದೇಶಕ ಹಾಗೂ ಸಿಇಒ ವಿನೋದ್ ಕುಮಾರ್  ಉಪಸ್ಥಿತರಿದ್ದರು.

ಉದಯವಾಣಿ ಸಂಪಾದಕ ಅರವಿಂದ ನಾವಡ ಅವರು ಪ್ರಸ್ತಾವನೆಗೈದರು. ಎಚ್.ಆರ್. ವಿಭಾಗದ ವ್ಯವಸ್ಥಾಪಕಿ ಉಷಾರಾಣಿ ಕಾಮತ್ ಕಾರ್ಯಕ್ರಮ ನಿರ್ವಹಿಸಿದರು. ಕಾಲೇಜಿನ ಪ್ರಾಾಂಶುಪಾಲ ಪ್ರೊ ಲಕ್ಷ್ಮೀನಾರಾಯಣ ಕಾರಂತ ವಂದಿಸಿದರು.

ಮಣಿಪಾಲದಲ್ಲಿ ಅರಳಿ ವಿವಿಧೆಡೆ ಪತ್ರಿಕಾ ರಂಗದಲ್ಲಿ ಸೇವೆ ಸಲ್ಲಿಸಿದ ಧೀಮಂತ ಹಿರಿಯ ಆರು ಮಂದಿ ಸಾಧಕರ ಜನ್ಮಶತಮಾನೋತ್ತರ ಸಂಸ್ಮರಣೆ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಉದ್ಘಾಟಿಸಿದರು. ಜಿ.ಪಂ. ಸಿಇಒ ಪ್ರಸನ್ನ ಎಚ್. ಉಪಸ್ಥಿತರಿದ್ದರು. ಗಣತ ಲಿಪಿ ತಜ್ಞ ಪ್ರೊ.ಕೆ.ಪಿ.ರಾವ್ ಅಧ್ಯಕ್ಷತೆ ವಹಿಸಿದ್ದರು.  

ಅನಂತರ ನಡೆದ ವಿಚಾರಗೋಷ್ಠಿಯಲ್ಲಿ ಎಸ್.ಯು. ಪಣಿಯಾಡಿಯವರ ಬಗ್ಗೆೆ ವಿಮರ್ಶಕ, ನಿವೃತ್ತ ಪ್ರಾಧ್ಯಾಪಕ ಪ್ರೊ.ಮುರಳೀಧರ ಉಪಾಧ್ಯ, ಪಾವೆಂ ಆಚಾರ್ಯರ ಕುರಿತು ಪಾ.ವೆಂ.ಆಚಾರ್ಯ ಟ್ರಸ್ಟ್ ನಿರ್ವಾಹಕ ವಿಶ್ವಸ್ಥೆೆ ಛಾಯಾ ಉಪಾಧ್ಯ ಬೆಂಗಳೂರು, ಕಮಲ್ ಹೈದರ್ ಬಗ್ಗೆೆ ಪ್ರೊ ಕೆ.ಪಿ.ರಾವ್, ಬನ್ನಂಜೆ ರಾಮಾಚಾರ್ಯರ ಬಗ್ಗೆೆ ಲೇಖಕ, ನಿವೃತ್ತ ಪ್ರಾಧ್ಯಾಾಪಕ ಡಾ ಶ್ರೀಕಾಂತ್ ರಾವ್ ಸಿದ್ದಾಪುರ, ಬೈಕಾಡಿ ಕೃಷ್ಣಯ್ಯ ಅವರ ಬಗ್ಗೆೆ ಸಾಹಿತಿ, ಸಿಂಡಿಕೇಟ್ ಬ್ಯಾಾಂಕ್ ನಿವೃತ್ತ ಅಧಿಕಾರಿ ಬೆಳಗೋಡು ರಮೇಶ್ ಭಟ್, ಎಂ.ವಿ.ಹೆಗ್ಡೆೆಯವರ ಬಗ್ಗೆೆ ಸಂಶೋಧಕ, ನಿವೃತ್ತ ಪ್ರಾಾಂಶುಪಾಲ ಡಾ ಅನಿಲ್ ಕುಮಾರ್ ಶೆಟ್ಟಿ ವಿಚಾರ ಮಂಡಿಸಿದರು. ಎಂಜಿಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವಿದ್ಯಾಾರ್ಥಿಗಳು ಸಹಿತವಾಗಿ ವಿವಿಧ ವಿಭಾಗದ ವಿದ್ಯಾರ್ಥಿಗಳು, ಬೋಧಕ, ಬೋಧಕೇತರ ಸಿಬಂದಿ ಭಾಗವಹಿಸಿದ್ದರು.

Leave a Reply

Your email address will not be published.

error: Content is protected !!