ಭಾರತದ ಮಾರುಕಟ್ಟೆಗೆ ಅಗ್ಗದ ದರದಲ್ಲಿ ರೆಡ್ ಮಿ 9A ಬಿಡುಗಡೆ
ಚೀನಾದ ಸ್ಮಾರ್ಟ್ ಫೋನ್ ತಯಾರಕ ಸಂಸ್ಥೆ ಶಿಯೋಮಿ ಸಂಸ್ಥೆ ರೆಡ್ ಮಿ 9A ಮೊಬೈಲ್ ನ್ನು ಭಾರತದ ಮಾರುಕಟ್ಟೆಯಲ್ಲಿದರಕ್ಕೆ ಬಿಡುಗಡೆಯಾಗಿದೆ.
2 ಜಿಬಿ ರ್ಯಾಮ್ +32 GB ಆಂತರಿಕ ಸ್ಟೋರೇಜ್ ಆವೃತ್ತಿಯ ಮೊಬೈಲ್ ನ್ನು ಭಾರತದ ಮಾರುಕಟ್ಟೆಗೆ 6,799 ರೂಪಾಯಿಗಳನ್ನು ನಿಗದಿಪಡಿಸಲಾಗಿದೆ. ಇದೇ ಮಾದರಿಯ 3 ಜಿಬಿ ರ್ಯಾಮ್+ 32 ಜಿಬಿ ಆಂತರಿಕ ಸ್ಟೋರೇಜ್ ಆವೃತ್ತಿಯ ಮೊಬೈಲ್ ಗೆ 7,499 ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ.
ಮೂರು ಕಲರ್ ಗಳಲ್ಲಿ ಈ ಮೊಬೈಲ್ ಲಭ್ಯವಿದ್ದು ಸೆ.04 ರಿಂದ ಎಲ್ಲಾ ಮಳಿಗೆಗಳಲ್ಲಿ ಮಾರಾಟಕ್ಕೆ ಲಭ್ಯವಿರಲಿದೆ.
6,53 ಇಂಚ್ ನ ಈ ಮೊಬೈಲ್ ಟಿಯುವಿ ರೈನ್‌ಲ್ಯಾಂಡ್ ಲೋ ಬ್ಲೂ ಲೈಟ್ ಸರ್ಟಿಫಿಕೇಷನ್ ಹೊಂದಿದ್ದು, ರೀಡಿಂಗ್ ಮೋಡ್ ನಲ್ಲಿ ಉತ್ತಮ ವಿಸಿಬಲಿಟಿ ಯನ್ನು ನೀಡಲಿದೆ.
ಆಕ್ಟಾಕೋರ್ ಮೀಡಿಯಾ ಟೆಕ್ ಹೆಲಿಯೊ G25 ಚಾಲಿತ ಚಿಪ್ ಸೆಟ್ ನ್ನು ಹೊಂದಿದ್ದು 512 ಜಿಬಿ ವರೆಗೂ ವಿಸ್ತರಿಸಬಹುದಾದ ಮೆಮೊರಿಯನ್ನು ಹೊಂದಿದೆ. 13 ಎಂಪಿ ಎಐ ಕ್ಯಾಮರಾವ, 5ಎಂಪಿ ಸೆಲ್ಫಿ ಕ್ಯಾಮರಾವನ್ನು ಹೊಂದಿದೆ. 5000 ಎಂಎಎಚ್ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದು, 2.5-3 ವರ್ಷ ಬಾಳಿಕೆ ಬರಲಿದೆ ಎಂದು ಸಂಸ್ಥೆ ತಿಳಿಸಿದೆ.