ನ.6 ರಂದು ಉಡುಪಿಯಲ್ಲಿ ಹೀರೋ ಮೋಟರ್ ಕಾರ್ಪ್‌ ನೂತನ ಶೋರೂಂ ಉದ್ಘಾಟನೆ

ಉಡುಪಿ ನ.5: ಪ್ರಸಿದ್ಧ ಹೀರೋ ಮೋಟರ್ ಕಾರ್ಪ್‌ ಸಂಸ್ಥೆಯು ಇದೇ ಮೊದಲ ಬಾರಿಗೆ ಕರಾವಳಿಯ ಉಡುಪಿ ಜಿಲ್ಲೆಯ ಕರಾವಳಿ ಜಂಕ್ಷನ್ ಬಳಿಯಿರುವ ಶ್ರೀ ರಾಮದರ್ಶನ ಕಟ್ಟಡದಲ್ಲಿ ತೆರೆಯಲಿರುವ ತನ್ನ ಪ್ರಪ್ರಥಮ ಶೋರೂಂನ ಉದ್ಘಾಟನಾ ಸಮಾರಂಭ ನ.6 ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ ಎಂದು ಎಂದು ಹೀರೋ ಮೋಟರ್ ಕಾರ್ಪ್ ನ ವ್ಯವಸ್ಥಾಪಕ ನಿರ್ದೇಶಕ ವಿಜಯ್ ಕುಮಾರ್ ಟಿ. ಕರ್ನೆ  ಅವರು ಹೇಳಿದರು.

ಹೀರೋ ಶಕ್ತಿ ಮೋಟಾರ್ಸ್ ನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಶಾಸಕ ರಘುಪತಿ ಭಟ್ ಅವರು ಉದ್ಘಾಟನಾ ಕಾರ್ಯವನ್ನು ನೆರವೇರಿಸಲಿದ್ದಾರೆ. 

ನವೆಂಬರ್ 6 ವರೆಗೆ ಶೋರೂಂ ಗೆ ಭೇಟಿ ನೀಡುವ ಗ್ರಾಹಕರಿಗೆ ಆಕರ್ಷಕ ಕೊಡುಗೆಗಳಿದ್ದು, ಶೋರೂಂ ಉದ್ಘಾಟನೆಯಾದ ಬಳಿಕ ನ.6 ರಿಂದ ಡಿ.6 ರವರೆಗೆ ವಾಹನ ಖರೀದಿಸುವವರಿಗೆ ಖಚಿತ ಬಂಪರ್ ಕೊಡುಗೆಗಳಿದ್ದು, ಲಕ್ಕಿ ಡ್ರಾ ಕೂಡಾ ಇದೆ. ಪ್ರಥಮ ಬಹುಮಾನ 1 ಸ್ಪ್ಲೆಂಡರ್ ಬೈಕ್, ದ್ವಿತೀಯ ಬಹುಮಾನ 3 ಎಲ್.ಇ.ಡಿ ಟಿವಿ, ತೃತೀಯ ಬಹುಮಾನ 2 ಚಿನ್ನದ ನಾಣ್ಯ, ನಾಲ್ಕನೇ ಬಹುಮಾನ 20 ಬೆಳ್ಳಿ ನಾಣ್ಯ ಮತ್ತು 5 ಮತ್ತು 6ನೇ ಬಹುಮಾನವಾಗಿ ಕ್ರಮವಾಗಿ 25 ಮೊಬೈಲ್ ಫೋನ್ ಮತ್ತು 50 ಬ್ಲೂ ಟೂಥ್ ಹೆಡ್ ಸೆಟ್ ಗಳು ದೊರೆಯಲಿವೆ ಎಂದು ತಿಳಿಸಿದರು.

2000 ಚದರ ಅಡಿಯ ಸಂಪೂರ್ಟ ಡಿಜಿಟಲೀಕೃತ ಶೋರೂಂನಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಸೇವೆಯೊಂದಿಗೆ ಹೊಸ ಮಾದರಿಯ ದ್ವಿಚಕ್ರ ವಾಹನಗಳು, ಬಿಡಿ ಭಾಗಗಳು ದೊರೆಯಲಿದ್ದು, 8000 ಚದರ ಅಡಿಯ ಗೋದಾಮಿನಲ್ಲಿ ಬಿಡಿಭಾಗಗಳು ಮತ್ತು ವಾಹನಗಳ ಸರ್ವಿಸಿಂಗ್ ಕೂಡಾ ನಡೆಸಲಾಗುತ್ತದೆ. ಗ್ರಾಹಕರು ಇದರ ಸಂಪೂರ್ಣ ಉಪಯೋಗ ಪಡೆಯಬೇಕು ಎಂದರು ಹಾಗೂ ಶಿವಮೊಗ್ಗದಲ್ಲಿ ಹೀರೋ ಶಕ್ತಿ ಮೋಟರ್ ಸಂಸ್ಥೆಯ 6 ಕಂಪನಿಗಳಿದ್ದು ಒಟ್ಟು 12 ಜಿಲ್ಲೆಗಳ ಹೀರೋ, ಹೋಂಡಾ, ಟಿವಿಎಸ್, ಸಿಯಾಟ್ ಮುಂತಾದ ಶೋರೂಂಗಳು, ಸಗಟು ಮತ್ತು ಚಿಲ್ಲರೆ ವ್ಯಾಪಾರಸ್ಥರಿಗೆ ಬಿಡಿಭಾಗಗಳು ಮತ್ತು ದ್ವಿಚಕ್ರವಾಹನಗಳನ್ನು ಪೂರೈಸಲಾಗುತ್ತಿದೆ. 

ತಮ್ಮಗಣನೀಯ ಗ್ರಾಹಕ ಸೇವೆ ಮತ್ತು ಬೆಳವಣಿಗೆಯನ್ನು ಗಮನಿಸಿದ ಹೀರೋ ಮೋಟರ್ ಕಾರ್ಪ್ ಸಂಸ್ಥೆಯು ಇದೇ ಮೊದಲ ಬಾರಿಗೆ ಉಡುಪಿಯಲ್ಲಿ ಅಧಿಕೃತ ಶೋರೂಂ ಅನ್ನು ತೆರೆಯಲು ಅವಕಾಶ ನೀಡಿದೆ. ಭಾರತದಲ್ಲಿ ಈಗಾಗಲೇ ಒಟ್ಟು 4 ಶೋರೂಂಗಳಿದ್ದು, 5 ನೇ ಶೋರೂಂ ಅನ್ನು ಉಡುಪಿಯಲ್ಲಿ ತೆರೆಯಲಾಗಿದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮ್ಯಾನೇಜರ್ ರಾಹುಲ್ ಮಿರಾಜ್ಕರ್ ಮತ್ತು ಉಡುಪಿಯ ಸಿಎ ಇನ್ಸಿಟ್ಯೂಟ್‌ ನ ಅಧ್ಯಕ್ಷ ಸಿಎ ಲೋಕೇಶ್ ಶೆಟ್ಟಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!