ಶಿರ್ವಾ: ಯುವಕ ನೇಣಿಗೆ ಶರಣು

ಶಿರ್ವಾ, ನ.5(ಉಡುಪಿ ಟೈಮ್ಸ್ ವರದಿ): ಇರ್ಮಿಜ್ ಚರ್ಚ್ ಬಳಿಯ ಅವಿವಾಹಿತ ಯುವಕನೊರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ಬೆಳಕಿಗೆ ಬಂದಿದೆ.

ಸುಳ್ಯ ಸಂಪಾಜೆ ನಿವಾಸಿ ಲಿಯೋ ಕ್ರಿಸ್ಟೋಫರ್ ಡಿಸೋಜಾ(33)ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.ಲಿಯೋ ತಾನು ಇದ್ದ ಬಾಡಿಗೆ ಮನೆಯ ಬಳಿ ಶುಕ್ರವಾರ ರಾತ್ರಿ ಮರವೊಂದಕ್ಕೆ ಕೇಬಲ್ ವಯರ್ ಕಟ್ಟಿ‌ ಕುತ್ತಿಗೆಗೆ ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.
ಶಿರ್ವಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ತನಿಖೆ ನಡೆಸುತ್ತಿದ್ದಾರೆ.  
ಯಾವುದೇ ಸಮಸ್ಯೆಗೆ ಆತ್ಮಹತ್ಯೆಯೊಂದೇ ಪರಿಹಾರವಲ್ಲ ಆತ್ಮಹತ್ಯೆ ಮಾಡಿಕೊಳ್ಳುವ ಸಂಭವನೀಯ ವ್ಯಕ್ತಿಗಳ ಗಮನಕ್ಕೆ, ಸಹಾಯವಾಣಿ ನಂಬರ್:080 2572 2573, ಸಮರ್ಥನಂ ಆವರಣ,15ನೇ ಕ್ರಾಸ್, ಹೆಚ್‍ಎಸ್‍ಆರ್ ಸೆಕ್ಟರ್-4,ಬೆಂಗಳೂರು.


Leave a Reply

Your email address will not be published.

error: Content is protected !!