ಉಡುಪಿ: ನಗರಸಭಾ ಸದಸ್ಯೆ ಸೆಲಿನಾ ಕರ್ಕಡ ಶ್ರದ್ಧಾಂಜಲಿ ಸಭೆ

ಉಡುಪಿ ನ.5(ಉಡುಪಿ ಟೈಮ್ಸ್ ವರದಿ): ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ಇತ್ತೀಚೆಗೆ ನಿಧನರಾದ ನಗರಸಭಾ ಸದಸ್ಯೆ, ಮಾಜಿ ಸ್ಥಾಯೀ ಸಮಿತಿಯ ಅಧ್ಯಕ್ಷೆ ಸೆಲಿನಾ ಕರ್ಕಡ ಅವರ ಶ್ರದ್ಧಾಂಜಲಿ ಸಭೆಯನ್ನು ಕಾಂಗ್ರೆಸ್ ಭವನದಲ್ಲಿ ನಡೆಸಲಾಯಿತು.

ಈ ವೇಳೆ ಮಾತನಾಡಿದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಅವರು ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ. ಹುಟ್ಟು ಮತ್ತು ಸಾವಿನ ಮಧ್ಯೆ ನಾವು ಮಾಡಿದ ಸೇವೆಯು ಶಾಶ್ವತ ಎಂದು ಸೆಲಿನಾ ಕರ್ಕಡ ಅವರ ಜನಪರ ಕಾಳಜಿ ಹಾಗೂ ಪಕ್ಷದ ಬಗ್ಗೆ ಇದ್ದ ಬದ್ಧತೆಯನ್ನು ಶ್ಲಾಘಿಸಿದರು.

ಇದೇ ವೇಳೆ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ  ಸಭೆಯಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಂ ಏ ಗಫೂರ್, ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಕುಶಾಲ್ ಶೆಟ್ಟಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ದಿವಾಕರ್ ಕುಂದರ್, ನಗರಸಭಾ ಸದಸ್ಯೆ ಅಮೃತ ಕೃಷ್ಣಮೂರ್ತಿ ಆಚಾರ್ಯ, ಮುಖಂಡರಾದ ನಾಗೇಶ್ ಕುಮಾರ್ ಉದ್ಯಾವರ ಹಾಗೂ ಉಡುಪಿ ಬ್ಲಾಕ್ ಕಾಂಗ್ರೆಸ್ ಎಸ್ ಸಿ ಘಟಕದ ಅಧ್ಯಕ್ಷರಾದ ಗಣೇಶ್ ನೆರ್ಗಿ ಅವರು ನುಡಿನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ನರಸಿಂಹಮೂರ್ತಿ, ಪ್ರಖ್ಯಾತ್ ಶೆಟ್ಟಿ, ಹರೀಶ್ ಕಿಣಿ, ಪ್ರಶಾಂತ್ ಜತ್ತನ್ನ, ಮೀನಾಕ್ಷಿ ಮಾಧವ ಬನ್ನಂಜೆ, ಆನಂದಿ, ವಿಜಯ್ ಪೂಜಾರಿ, ಶಾಂತಾರಾಮ್ ಸಾಲ್ವಂಕರ್, ಯತೀಶ್ ಕರ್ಕೇರ, ಸುರೇಶ್ ಶೆಟ್ಟಿ ಬನ್ನಂಜೆ, ದಯಾನಂದ್ ಗೋಪಾಲಪುರ, ಮಾರ್ಟಿನ್ ಜತ್ತನ್ನ, ತಾರಾನಾಥ್ ಸುವರ್ಣ, ಫಾ.ವಿಲಿಯಮ್ ಮಾರ್ಟಿಸ್, ಮೊಹಮ್ಮದ್ ಶೀಶ್, ಅನಂತ್ ನಾಯ್ಕ್, ಮ್ಯಾಕ್ಸಿಮ್ ಡಿ’ಸೋಜಾ, ಹಸನ್ ಸಾಹೇಬ್, ಹಮ್ಮದ್, ಗಣೇಶ್ ದೇವಾಡಿಗ, ಶಶಿರಾಜ್ ಕುಂದರ್, ಸತೀಶ್ ಪುತ್ರನ್, ಲಕ್ಷ್ಮಣ್ ಪೂಜಾರಿ, ಮಮತಾ ಶೆಟ್ಟಿ, ಜಯಕುಮಾರ್, ಸುಕನ್ಯಾ ಪೂಜಾರಿ, ಲತಾ ಆನಂದ ಶೇರಿಗಾರ್, ಸಾಧನಾ ಕಿಣಿ, ಪ್ರಶಾಂತ್ ಪೂಜಾರಿ, ಶರತ್ ಶೆಟ್ಟಿ, ಸಾಯಿರಾಜ್ ಕಿದಿಯೂರು, ಜಯವೀರ್, ರವಿರಾಜ್, ವೆಂಕಟೇಶ್ ಪೆರಂಪಳ್ಳಿ, ಡಿಯೋನ್ ಡಿ‌’ಸೋಜಾ, ಸಾಗರ್, ಸುನಿಲ್ ಬೈಲಕರೆ, ರಿಕಿತ್, ರೀಟಾ, ಭೂಮಿಕಾ, ಸಂಜಯ್ ಆಚಾರ್ಯ ಅವರು ಉಪಸ್ಥಿತರಿದ್ದರು.

ಸತೀಶ್ ಕುಮಾರ್ ಮಂಚಿ ಅವರು ಸ್ವಾಗತಿಸಿ, ಸುಕೇಶ್ ಕುಂದರ್ ಅವರು ವಂದಿಸಿದರು.

Leave a Reply

Your email address will not be published.

error: Content is protected !!