ಹೆಬ್ರಿ: ಬಿಜೆಪಿಯಿಂದ ವಿಶ್ವಕರ್ಮ ಸಮಾಜಕ್ಕೆ ಅನ್ಯಾಯ- ಮಾರುತಿ ಬಡಿಗೇರ್

ಉಡುಪಿ: ಕಳೆದ ಮೂರು ವರ್ಷಗಳಿಂದ ನಮ್ಮ ರಾಜ್ಯದಲ್ಲಿ ಬಿಜೆಪಿ ಸರ್ಕಾರ ವಿಶ್ವಕರ್ಮ ಸಮುದಾಯಕ್ಕೆ ಸಂಪೂರ್ಣವಾಗಿ ಅನ್ಯಾಯವನ್ನು ಮಾಡಿದ್ದು ಮುಂದಿನ ಚುನಾವಣೆಯಲ್ಲಿ ಇವರಿಗೆ ತಕ್ಕ ಪಾಠ ಕಲಿಸಲಾಗುವುದು. ಎಂದು ವಿಶ್ವಕರ್ಮ ಸಮಾಜದ ಹಿರಿಯ ಮುಖಂಡರಾದ ಹೋರಾಟಗಾರ, ಪತ್ರಕರ್ತ ಮಾರುತಿ ಬಡಿಗೇರ್ ತಿಳಿಸಿದ್ದಾರೆ.

ಬಿಜೆಪಿ ಪಕ್ಷಕ್ಕೆ ಚುನಾವಣೆ ಸಂದರ್ಭದಲ್ಲಿ ನಮ್ಮ ನಾಯಕರಾದ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ರಾಜ್ಯಾಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಕೆಪಿ ನಂಜುಂಡಿ ಅವರಿಗೆ ಸಚಿವ ಸಚಿವ ಸ್ಥಾನ ನೀಡುತ್ತೇವೆ ಎಂದು ಭರವಸೆ ನೀಡಿದ್ದ ಬಿಜೆಪಿ ಮುಖಂಡರು ಈಗ ಅವರನ್ನು ನಿರ್ಲಕ್ಷ ಮಾಡಿದ್ದಾರೆ. ಮೂಗಿಗೆ ತುಪ್ಪ ಸವರಿದಂತೆ ವಿಧಾನ ಪರಿಷತ್ ಗೌರವ ಸ್ಥಾನವನ್ನು ನೀಡಿ ನಂಜುಂಡಿ ಅವರನ್ನು ಚುನಾವಣೆಗೆ ಮಾತ್ರ ಉಪಯೋಗಿಸಿ ಕೊಂಡಿರುವ ಬಿಜೆಪಿ ಪಕ್ಷ. ಲಾಕ್ ಡೌನ್ ಮತ್ತು ಕರೋನಾ ಸಂದರ್ಭದಲ್ಲಿ ಎಲ್ಲಾ ಜಾತಿ ಮತ್ತು ಕಸುಬುದಾರರಿಗೆ ಬಿಜೆಪಿ ಸರ್ಕಾರ ಪರಿಹಾರವನ್ನು ನೀಡಿದರೆ ನಮ್ಮ ವಿಶ್ವಕರ್ಮ ಸಮುದಾಯದ ಕಸುಬುದಾರರಾದ  ಬಡಿಗ ಕಂಬಾರ ಅಕ್ಕಸಾಲಿಗ ಶಿಲ್ಪಿ ಆರ್ಥಿಕ ಸಂಕಷ್ಟದಲ್ಲಿ ಇದ್ದವರಿಗೆ ಬಿಜೆಪಿ ಸರ್ಕಾರ ಒಂದು ರೂಪಾಯಿ ಪರಿಹಾರ ನೀಡಲಿಲ್ಲ.

ಇದಲ್ಲದೆ ಕರ್ನಾಟಕ ರಾಜ್ಯ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ ನಿಗಮಕ್ಕೆ ಬೇಕಾಬಿಟ್ಟಿಯಾಗಿ ಸ್ವಲ್ಪ ಅನುದಾನ ನೀಡಿ ಸಮುದಾಯದ 45 ಲಕ್ಷ ಕಸುಬುದಾರರಿಗೆ ಅನ್ಯಾಯ ಮಾಡಿದ್ದಾರೆ. ಕಳೆದ ಒಂದೆರಡು ತಿಂಗಳಿಂದ ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನು ತೆಗೆದು ಹೊಸ ಅಧ್ಯಕ್ಷರನ್ನು ನೇಮಕ ಮಾಡುವಲ್ಲಿ ಸಹ ಸರ್ಕಾರ ವಿಳಂಬ ತೋರಿದೆ. ಈಗಾಗಲೇ ನಮ್ಮ ನಾಯಕರದ ಕೆಪಿ ನಂಜುಂಡಿ ಅವರು ವಿಶ್ವಕರ್ಮ ಸಮುದಾಯಕ್ಕೆ ಎಸ್ ಟಿ ಮೀಸಲಾತಿಯನ್ನು ಕೊಡಬೇಕೆಂದು ಸರ್ಕಾರದ ಮೇಲೆ ಒತ್ತಡವನ್ನು ತರುತ್ತಿದ್ದಾರೆ. ಆದರೂ ಸರ್ಕಾರ ನಮ್ಮನ್ನು ನಿರ್ಲಕ್ಷ ತೋರುತ್ತಿದೆ. ಅಕ್ಟೋಬರ್ 30 ರಂದು ಕಲಬುರ್ಗಿಯಲ್ಲಿ ನಡೆದ ರಾಜ್ಯಮಟ್ಟದ ಬಿಜೆಪಿ ಹಿಂದುಳಿದ ವರ್ಗದ ಸಮಾವೇಶದಲ್ಲಿ ಹಿಂದುಳಿದ ವಿಶ್ವಕರ್ಮ ಸಮಾಜದ ನಾಯಕರದಂತ ಕೆ ಪಿ ನಂಜುಂಡಿ ಅವರ ಫೋಟೋ ಆಗಲಿ ಅಥವಾ ಅವರ ಬಗ್ಗೆ ಎಲ್ಲೂ ಮಾತನಾಡದೆ ಇರುವುದು ನಿಜವಾಗಿ ನಮ್ಮನ್ನು ಸಂಪೂರ್ಣವಾಗಿ ನಿರ್ಲಕ್ಷತನ ತೋರಿದ್ದಾರೆ ಬಿಜೆಪಿಯವರು.

ವಿಶ್ವಕರ್ಮ ಸಮಾಜ ಹಿಂದುಳಿದ ವರ್ಗದಲ್ಲಿ ಬರುತ್ತಿದ್ದು ಹಿಂದುಳಿದ ನಮ್ಮನ್ನು ಕಡೆಗಣಿಸಿದರೆ. ಉದ್ದೇಶ ಪೂರ್ವಕವಾಗಿ ಬಿಜೆಪಿ ಸರ್ಕಾರದವರು ಬಿಜೆಪಿ ಪಕ್ಷದವರು ನಮ್ಮ ನಾಯಕರನ್ನು ಮತ್ತು ನಮ್ಮ ಸಮಾಜವನ್ನು ಕಡೆಗಣಿಸುತ್ತಿದ್ದಾರೆ. ಇದರ ಬಗ್ಗೆ ರಾಜ್ಯ ಬಿಜೆಪಿ ಅಧ್ಯಕ್ಷರಾಗಲಿ ರಾಜ್ಯದ ಮುಖ್ಯಮಂತ್ರಿಗಳಾಗಲಿ ಯಾವುದೇ ರೀತಿಯ ಸ್ಪಂದನೆ ಇದು ಖಂಡನೀಯ… ಇನ್ನೂ ವಿಶ್ವಕರ್ಮ ಸಮಾಜವನ್ನು ಬಿಜೆಪಿ ಪಕ್ಷ ಮತ್ತು ಬಿಜೆಪಿ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ನಮ್ಮ ಮೇಲೆ ಯಾವುದೇ ರೀತಿಯ ವಿಶೇಷವಾದ ಮಾನ್ಯತವನ್ನು ನೀಡುತ್ತಿಲ್ಲ.

ನಮ್ಮ ಸಮುದಾಯದವರನ್ನು ಇಷ್ಟೊಂದು ಕಡೆಗಣಿಸುತ್ತಿರುವ ಬಿಜೆಪಿ ವಿರುದ್ಧ ನಾವು ಮುಂದಿನ ಚುನಾವಣೆ ಯಲ್ಲಿ ಬಹಿರಂಗವಾಗಿ ತಕ್ಕ ಪಾಠ ಕಲಿಸುತ್ತೇವೆ. ಕಲ್ಯಾಣ ಕರ್ನಾಟಕದ ಬೀದರ್ ಗುಲ್ಬರ್ಗ ಯಾದಗಿರಿ ರಾಯಚೂರು ಕೊಪ್ಪಳ ಬಳ್ಳಾರಿ ವಿಜಯನಗರ ಈ ಜಿಲ್ಲೆಗಳಲ್ಲಿ ಸಹ ಅತಿ ಹೆಚ್ಚು ವಿಶ್ವಕರ್ಮ ಸಮಾಜದವರು ಬಡವರಿದ್ದಾರೆ. ಈ ಭಾಗದಲ್ಲಿ ಯಾವುದೇ ರೀತಿಯ ನಮ್ಮ ಸಮಾಜಕ್ಕೆ ಸರ್ಕಾರದ ಸೌಲಭ್ಯಗಳಾಗಲಿ ಅಥವಾ ಅಭಿವೃದ್ಧಿಯ ಬಗ್ಗೆ ಗಮನಿಸಿಲ್ಲ. ರಾಜಕೀಯವಾಗಿ ನಮ್ಮನ್ನು ಮೂಲೆಗುಂಪು ಸಹ ಬಿಜೆಪಿ ಸರ್ಕಾರ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ನಾವು ಈ ಭಾಗದಲ್ಲಿ ಸರ್ಕಾರದ ವಿರುದ್ಧ ಬೀದಿಗಿಳಿದು ಪ್ರತಿಭಟನೆ ಮಾಡುವುದಂತೂ ಖಚಿತ ಎಂದು ಮಾರುತಿ ಬಡಿಗೇರ್ ಹೇಳಿದರು.

Leave a Reply

Your email address will not be published. Required fields are marked *

error: Content is protected !!