ಬೈಂದೂರು: ಬೈಕ್ ಸ್ಕಿಡ್ ಆಗಿ ಪತ್ರಿಕಾ ವಿತರಕ ಮೃತ್ಯು

ಬೈಂದೂರು: ಇಲ್ಲಿನ ಉಪ್ಪುಂದ ಅರೆಹೊಳೆ ಪೆಟ್ರೋಲ್ ಬಂಕ್ ಬಳಿ ಬೈಕ್ ಸ್ಕಿಡ್ ಆಗಿ ಗಂಭೀರ ಗಾಯಗೊಂಡಿದ್ದ ಪತ್ರಿಕಾ ವಿತರಕರೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಸಂಭವಿಸಿದೆ.
ಮೃತ ಯುವಕ ಕಿರಿಮಂಜೇಶ್ವರ ಗ್ರಾಮದ ಅರೆಹೊಳೆ ಕ್ರಾಸ್ ಸಿಲ್ವರ್ ಕಾಲನಿ ನಿವಾಸಿ ಗಿರೀಶ ಮೋಗವೀರ (27) ಎಂದು ತಿಳಿದು ಬಂದಿದೆ.
ಗಿರೀಶ್ ನ.2ರಂದು ರಾತ್ರಿ ನಾವುಂದ ಬಳಿಯ ಪೆಟ್ರೋಲ್ ಬಂಕ್‌ನಲ್ಲಿ ಪೆಟ್ರೋಲ್ ಹಾಕಿಕೊಂಡು ಮನೆ ಕಡೆಗೆ ಹೋಗುತ್ತಿದ್ದಾಹ ಬೈಕ್ ಸ್ಕಿಡ್ ಆಗಿ ಗಂಭೀರ ಗಾಯಗೊಂಡಿದ್ದರು.
ತತ್‌ಕ್ಷಣ ಸ್ಥಳೀಯರು ಕುಂದಾಪುರ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅನಂತರ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲದ ಖಾಸಗಿ ಆಸ್ಪತ್ರೆಗೆ ಕರೆದು ಕೊಂಡುಹೋಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.