ಹೊರಗುತ್ತಿಗೆ ನೌಕರರ ವೇತನ ಮತ್ತು ಸೌಲಭ್ಯ ನಿಗಧಿತ ಕಾಲಾವಧಿಯಲ್ಲಿ ಪಾವತಿಸಿ- ಜಿಲ್ಲಾಧಿಕಾರಿ
ಉಡುಪಿ, ನ.3: ಸರ್ಕಾರಿ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರು ಸೇರಿದಂತೆ
ಮತ್ತಿತರ ನೌಕರರುಗಳು ಕುಂದು ಕೊರತೆಗಳನ್ನು ಆಗಿಂದಾಗ್ಗೆ ಬಗೆಹರಿಸಿ ಯಾವುದೇ ರೀತಿಯ ಸಮಸ್ಯೆಗಳು ಉಂಟಾಗದOತೆ ಎಚ್ಚರವಹಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಸೂಚನೆ ನೀಡಿದರು.
ಅವರು ಇಂದು ಮಣಿಪಾಲದ ರಜತಾದ್ರಿಯ ಅಟಲ್ ಬಿಹರಿ ವಾಜಪೇಯಿ ಸಭಾಂಗಣದಲ್ಲಿ, ಜಿಲ್ಲಾಡಳಿತ, ಕಾರ್ಮಿಕ ಇಲಾಖೆ,ನೌಕರರ ರಾಜ್ಯ ವಿಮಾನಿಗಮ, ಉದ್ಯೋಗಿಗಳ ಭವಿಷ್ಯ ನಿಧಿ ಇವರ ಸಹಯೋಗದಲ್ಲಿ ನಡೆದ, ಹೊರಗುತ್ತಿಗೆ ಸಿಬ್ಬಂದಿಗಳ ಇಎಸ್‌ಐ ಮತ್ತು ಇಪಿಎಫ್ ಬಗ್ಗೆ ಪ್ರದಾನ ಮಾಲೀಕರು ಮತ್ತು ಗುತ್ತಿಗೆದಾರರ ಜವಾಬ್ದಾರಿಗಳು ಮತ್ತು ಕರ್ತವ್ಯಗಳ ಕುರಿತು ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು. ಸರ್ಕಾರಿ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಸಿಬ್ಬಂದಿ ವರ್ಗದವರ ವೇತನ ಸೇರಿದಂತೆ ಮತ್ತಿತರೆ ಕೆಲಸ ಕಾರ್ಯಗಳನ್ನು ವಿಳಂಬವಿಲ್ಲದೇ ಮಾಡಿಕೊಟ್ಟು, ಕಚೇರಿಯಲ್ಲಿ ಉತ್ತಮ ವಾತಾವರಣ ನಿರ್ಮಾಣವಾದರೆ ಕಚೇರಿಯ ದೈನಂದಿನ ಕೆಲಸ ಕಾರ್ಯಗಳು ಹಾಗೂ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಸುಲಲಿತವಾಗಿ ಸಿಬ್ಬಂದಿಗಳು ಮಾಡಲು
ಸಾದ್ಯವಾಗುತ್ತದೆ ಎಂದರು.
ಸರ್ಕಾರಿ ಕಚೇರಿ, ನಿಗಮ ಮತ್ತು ಮಂಡಳಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಮತ್ತು ಹೊರ ಗುತ್ತಿಗೆ ನೌಕರರಿಗೆ ವೇತನದೊಂದಿಗೆ ಪಾವತಿಸುವ ಇಎಸ್‌ಐ ಮತ್ತು ಇಪಿಎಫ್ ಕಡಿತಗಳ ಬಗ್ಗೆ ಎಲ್ಲಾ ಅಧಿಕಾರಿಗಳು ಮಾಹಿತಿ ಹೊಂದಿರಬೇಕು ಒಂದೊಮ್ಮೆ ಅವರುಗಳಿಗೆ ಈ ಸೌಲಭ್ಯಗಳು ಲಭಿಸದೇ ಇದ್ದಲ್ಲಿ ಸಂಬ0ದಿಸಿದ ಗುತ್ತಿಗೆದಾರರರಿಂದ ಅವುಗಳನ್ನು ದೊರಕಿಸಲು ಕ್ರಮವಹಿಸಬೆಕು ಎಂದರು.ಬಟವಾಡೆ ಅಧಿಕಾರಿಗಳಿಗೆ, ಅಧೀಕ್ಷಕರು, ಗುಮಾಸ್ತರು ಸೇರಿದಂತೆ ಮತ್ತಿತರೆ ಇಲಾಖಾ ಸಿಬ್ಬಂದಿಗಳು ವೇತನ ಸೇರಿದಂತೆಮತ್ತಿತರ ಸೌಲಭ್ಯಗಳು ಪಾವತಿಗಳನ್ನು ಮಾಡುವಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳನ್ನು ಹೊಂದಿದಲ್ಲಿ ಮಾತ್ರ ಯಾವುದೇ ಗೊಂದಲ ಗಳಿಲ್ಲದೇ ಪಾವತಿಗೆ ಅನುಕೂಲವಾಗುತ್ತದೆ ಈ ಹಿನ್ನಲೆಯಲ್ಲಿ ಈ ಕಾರ್ಯಗಾರವನ್ನು ಆಯೋಜಿಸಿದೆ ಇದರ ಸದುಪಯೋಗವನ್ನು ಪಡೆದುಕೊಂಡು ದೈನಂದಿನ ಕಚೇರಿ ಕೆಲಸಗಳನ್ನು ನಿರ್ವಹಿಸಬೇಕೆಂದು ಸಲಹೆ ನೀಡಿದರು.
ಪ್ರತೀ ತಿಂಗಳು ಹೊರಗುತ್ತಿಗೆ ನೌಕರರ ವೇತನ ಬಿಲ್ ತಯಾರಿಸುವಾಗ ಗುತ್ತಿಗೆದಾರರು ಇಎಸ್‌ಐ ಮತ್ತು ಇಪಿಎಫ್
ಕಡಿತಗೊಳಿಸಿ, ಸರ್ಕಾರಕ್ಕೆ ಮತ್ತು ನೌಕರರ ಖಾತೆಗಳಿಗೆ ಪಾವತಿ ಮಾಡಿರುವ ಬಗ್ಗೆ ಪರಿಶೀಲಿಸಬೇಕು, ಯಾವುದೇ
ಹೊರಗುತ್ತಿಗೆ ಸಿಬ್ಬಂದಿ ಇವುಗಳ ಸೌಲಭ್ಯದಿಂದ ವಂಚಿತರಾಗದ0ತೆ ಮತ್ತು ಗುತ್ತಿಗೆದಾರರಿಂದ ದಾಖಲೆಗಳನ್ನು ಪಡೆದು ಪರಿಶೀಲಿಸಬೇಕು ಎಂದರು.
ಕಾರ್ಯಗಾರದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಎಸ್ಪಿ ಹಾಕೆ ಅಕ್ಷಯ್ ಮಚ್ಚೀಂದ್ರ, ಅಪರ ಜಿಲ್ಲಾಧಿಕಾರಿ ವೀಣಾ, ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ್ ಉಪಸ್ಥಿತರಿದ್ದರು. ಇಎಸ್‌ಐ ಸೌಲಭ್ಯದ ಕುರಿತು ಮಂಗಳೂರು ಇಎಸ್‌ಐ ಪ್ರಾದೇಶಿಕ ಕಚೇರಿಯ ಸಾಮಾಜಿಕ ಭದ್ರತಾ ಅಧಿಕಾರಿ ಅಭಿಷೇಕ್
ತೋಮರ್, ಇಪಿಎಫ್ ಕುರಿತು ಉಡುಪಿ ಪ್ರಾದೇಶಿಕ ಇಪಿಎಫ್ ಕಚೇರಿಯ ಜಾರಿ ಅಧಿಕಾರಿ ಮಲ್ಲಿಕಾರ್ಜುನ ರೆಡ್ಡಿ ಮಾಹಿತಿ ನೀಡಿದರು. ಜಿಲ್ಲೆಯ ವಿವಿಧ ಇಲಾಖೆಗಳು ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಹೊರಗುತ್ತಿಗೆ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.