ಉಡುಪಿ: ನ.5-7 ದೊಡ್ಡಣಗುಡ್ಡೆಯಲ್ಲಿ ‘ಸಸ್ಯ ಸಂತೆ’

ಉಡುಪಿ, ನ.03: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ತೋಟಗಾರಿಕೆ ಇಲಾಖೆ, ಉಡುಪಿ ಜಿಲ್ಲೆ ಇವರ
ಸಂಯುಕ್ತ ಆಶ್ರಯದಲ್ಲಿ ನವೆಂಬರ್ 5 ರಿಂದ 7 ರ ವರೆಗೆ ದೊಡ್ಡಣಗುಡ್ಡೆ ಶಿವಳ್ಳಿ ಮಾದರಿ ತೋಟಗಾರಿಕೆ ಕ್ಷೇತ್ರ ಇಲ್ಲಿನ ಪುಷ್ಪ ಹರಾಜು ಕೇಂದ್ರ (ರೈತ ಸೇವಾ ಕೇಂದ್ರ)ದ ಆವರಣದಲ್ಲಿ ‘ಸಸ್ಯ ಸಂತೆ-2022′ ನಡೆಯಲಿದೆ.

ಸದರಿ ಸಸ್ಯ ಸಂತೆಯಲ್ಲಿ ಜಿಲ್ಲೆಯ ಹಾಗೂ ಹೊರ ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ನರ್ಸರಿಗಳಿಗೆ ಮತ್ತು ವಿವಿಧ
ತೋಟಗಾರಿಕೆ ಬೆಳೆಗಳ ಬೀಜ ಮಾರಾಟಗಾರರಿಗೆ ಕಸಿ ಹಾಗೂ ಸಸಿ ಗಿಡ, ಬೀಜ ಮತ್ತು ನರ್ಸರಿ ಉಪಕರಣಗಳನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗುವುದು. ಜಿಲ್ಲೆಯ ರೈತರು ಹಾಗೂ ಸಾರ್ವಜನಿಕರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!