ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರಿಗೆ ಒಂದು ಬಹಿರಂಗ ಪತ್ರ..

ಉಡುಪಿ: ಬಾರಕೂರು ಒಂದು ಬ್ರಹತ್ ಇತಿಹಾಸವುಳ್ಳ ನಗರ ಅಲ್ಲದೆ ಸಾಂಸ್ಕೃತಿಕ ನಗರವೂ ಆಗಿತ್ತು. ಸರ್ಕಾರ ಒಂದು ಸ್ಪಷ್ಟ ರೀತಿಯಲ್ಲಿ ಉತ್ತೇಜನ ನೀಡಿದ್ದಲ್ಲಿ ಒಂದು ಪ್ರಖ್ಯಾತ ಪ್ರವಾಸಿ ತಾಣವೂ ಆಗುತ್ತಿತ್ತು. ಆದರೆ ಉತ್ತೇಜನ ನೀಡುವುದು ಬಿಡಿ ಇದ್ದ ಒಂದು ಕೊಂಕಣ ರೈಲ್ವೆಯ ಮತ್ಸ್ಯ ಗಂಧ ರೈಲ್ (ಮುಂಬೈ to ಮಂಗಳೂರು) ಬಾರಕೂರು ನಿಲುಗಡೆಯನ್ನು ಕೋರೋನ ಕಾಲದಲ್ಲಿ ರದ್ದುಗೊಳಿಸಿ ಈಗ ಶಾಶ್ವತವಾಗಿ ರದ್ದುಗೊಳಿಸಿದೆ. ಕೋವಿಡ್ ನಿರ್ಗಮನದ ನಂತರ ಬಾರಕೂರು ನಲ್ಲಿ ಶಾಂತರಾಮ ಶೆಟ್ಟಿ ನೇತ್ರತ್ವದಲ್ಲಿ ರೈಲ್ವೆ ಪ್ರಯಾಣಿಕರ ತಂಡ ಹಾಗು ನವಿ ಮುಂಬೈನಲ್ಲಿ ರಾಜಾರಾಮ್ ಆಚಾರ್ಯರ ನೇತೃತ್ವದಲ್ಲಿ ಬಿಜೆಪಿ ಕರ್ನಾಟಕ ನವಿ ಮುಂಬೈ ಜಿಲ್ಲಾ ಘಟಕದ ಬಾರಕೂರುನಲ್ಲಿ ನಿಲುಗಡೆ ಪುನರಾರಂಭ ಮಾಡಬೇಕೆಂದು ಸಂಬಂದಿತರಿಗೆ ಮನವಿ ಸಲ್ಲಿಸಲಾಯಿತು.

ಆದರೆ ಫಲಿತಾಂಶ ಶೂನ್ಯ. ಬಾರ್ಕೂರಿನಲ್ಲಿ ಟಿಕೆಟ್ ಕೌಂಟರ್ ಕಲೆಕ್ಷನ್ ರೂ 20,000/ ಕ್ಕಿಂತ ಕಡಿಮೆ ಇದೆ ಅಲ್ಲದೆ ಬಾರ್ಕುರಿನಲ್ಲಿ ಟ್ರೈನ್ ಹತ್ತುವವರು ಉಡುಪಿಯಿಂದಲೇ ಬುಕ್ ಮಾಡುತ್ತಾರೆ ಎಂದು ಕುಂಟು ನೆಪಗಳನ್ನು ಮನವಿ ಸಲ್ಲಿಸಿದವರಿಗೆ ನೀಡಲಾಯಿತು.

ಆದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಒನ್ಲೈನ್ ಬುಕಿಂಗ್ ಪ್ರಯಾಣಿಕರು ಪ್ರಯಾಣಿಕರು ಮಾಡುತ್ತಿರುವುದರಿಂದ (ಬಾರ್ಕುರಿನಲ್ಲಿ ಹತ್ತುವವರು ಇಳಿಯುವವರು ಸೇರಿ) ಕೌಂಟರ್ ನಲ್ಲಿ ಕ್ಯಾಶ್ ಕಲೆಕ್ಟ್ ಆಗುವುದಾದರೂ ಹೇಗೆ ? ಈ ಎಲ್ಲಾ ಕುಂಟು ನೆಪಗಳು ಕೋರೋನಾ ಪೂರ್ವದಲ್ಲಿ ಹಲವು ವರ್ಷಗಳಿಂದ ಇರದೇ ಈಗ ಏಕಾಏಕಿ ಆಗಿ ಹೇಗೆ ಪ್ರಾಧಿಕಾರದ ತಲೆಗೆ ಬಂತು ಎನ್ನುವುದು ಪ್ರಾಧಿಕಾರವೇ ಸ್ಪಷ್ಟಪಡಿಸ ಬೇಕಿದೆ. ಕೊಂಕಣ ರೈಲ್ವೆಯ ಈ ನಿರ್ಧಾರದಿಂದಾಗಿ ಬಾರ್ಕುರಿನ ನೂರಕ್ಕೂ ಹೆಚ್ಚು ಆಟೋ ಡ್ರೈವರ್ ಗಳು ಆರ್ಥಿಕ ಸಂಕಷ್ಟಕ್ಕೆ ಈಡಾದರೆ ಅತ್ತ ಉಡುಪಿಯಾ ಕುಂದಾಪುರದಲ್ಲಿ ಇಳಿವ ಪ್ರಯಾಣಿಕರು ಕೋಟ, ಸಾಸ್ತಾನ, ಬ್ರಹ್ಮಾವರ, ಕೊಕ್ಕರ್ಣೆ, ಶಿರಿಯಾರ, ಉಪ್ಪುರು ತಲುಪ ಬೇಕಾದರೆ ರೂ 700 ರಿಂದ ರೂ 800/ ರೂ ಖರ್ಚು ಮಾಡಬೇಕಾಗಿದ್ದು ಇದು ಮುಂಬೈ ನಿಂದ ಉಡುಪಿಗೆ ಬರುವ ರೈಲಿನ ದರಕ್ಕಿಂತ ಹೆಚ್ಚು. ಅಂದರೆ ತಾಯಿಗಿಂತ ಮಗಳ ಪ್ರಾಯವೇ ಹೆಚ್ಚಾದ ಹಾಗೆ ಆಯ್ತು ಅಲ್ಲವೇ.

ನಿನ್ನೆ ಮುಂಬೈ ಸಾಯನ್ ನ ಗೋಕುಲ್ ದೇವಸ್ಥಾನಕ್ಕೆ ಈಗ ಹೊಸತಾಗಿ ಬಂದಿರುವ ಕೊಂಕಣ ರೈಲ್ವೆಯ ಚೀಫ್ ಆಪರೇಟಿಂಗ್ ಆಫೀಸರ್ ಸಂತೋಷ್ ಕುಮಾರ್ ಜಾ ಬರುವವರಿದ್ದಾರೆ ಎಂದು ತಿಳಿದು ಈ ವಿಚಾರವಾಗಿ ಏನಾದರೂ ಮಾಡಲು ಸಾಧ್ಯವೇ ಎಂದು ನಮ್ಮ ತಂಡ ಅಲ್ಲಿಗೆ ಸಾಯಂಕಾಲ ತಲುಪಿತು. ಅವರ ಪರಿಚಯದವರು ನಮ್ಮನ್ನು ಅವರಿಗೆ ಪರಿಚಯ ಮಾಡಿಕೊಟ್ಟ ಮೇಲೆ ನಾವು ಮುಂಬೈ ಬಾರಕೂರು ಮತ್ಸ್ಯಗಂಧ ರೈಲ್ವೆ ಪ್ರಯಾಣಿಕರ ಬವಣೆಗಳನ್ನು ತಿಳಿಸಿದೇವು.ಅಲ್ಲದೆ ವರ್ಷದ ಹಿಂದೆ ಬಿಜೆಪಿ ಕರ್ನಾಟಕ ಘಟಕದಿಂದ ಕೊಟ್ಟ ಮನವಿ ಪತ್ರದ ವಿಚಾರ ತಿಳಿಸಿದೆವು. ಎಲ್ಲವನ್ನು ಸಾವಕಾಶವಾಗಿ ಕೇಳಿದ ಅವರು ನೀವು ನಿಮ್ಮ ಆ ಏರಿಯಾಕ್ಕೆ ಸಂಬಂಧ ಪಟ್ಟ ಲೋಕ ಸಭಾ ಸದಸ್ಯರಿಂದ ರೈಲ್ವೆ ಸಚಿವಾಲಯಕ್ಕೆ ಈ ಬಗ್ಗೆ ನಿರ್ದೇಶನ ಕೊಟ್ಟರೆ ಮಾತ್ರ ಸಾಧ್ಯ ಅದಲ್ಲದೆ ನಾವೇನು ಮಾಡುವಂತಿಲ್ಲ ಎಂದು ಉತ್ತರಿಸಿದರು.

ನಮ್ಮ ಈ ತಂಡದಲ್ಲಿ ರಾಜಾರಾಮ್ ಆಚಾರ್ಯ, ಉದ್ಯಮಿ ನಾಗರಾಜ್ ಪಡುಕೋಣೆ ಮತ್ತು ಭೋಜ ದೇವಾಡಿಗರು ಉಪಸ್ಥಿತರಿದ್ದರು. ಪ್ರಸ್ತುತ ಈ ಕಾರ್ಯದಲ್ಲಿ ಈಗ ಸಮಸ್ಯೆಗೆ ಪರಿಹಾರ ಮಾಡಬೇಕಾಗಿರುವ ಜವಾಬ್ದಾರಿ ಶೋಭಾ ಕರಂದ್ಲಾಜೆ ಯವರದ್ದು. ಬಾರಕೂರು ಸುತ್ತ ಮುತ್ತಲ ಮತದಾರರ ಓಟಿನ ಋಣ ತೀರಿಸಬೇಕಾಗಿರುವುದು ಶೋಭಾ ಕರಂದ್ಲಾಜೆಯವರು. ಇಂದು ಈ ವಿಚಾರವಾಗಿ ನಾನು ಬಾರಕೂರು ಶಾಂತರಾಮ್ ಶೆಟ್ಟಿಯವರನ್ನು ಸಂಪರ್ಕಿಸಿದಾಗ ಅವರು ಸಹ ವಿಚಾರವನ್ನು ಶೋಭಾ ಕರಂದ್ಲಾಜೆ ಯವರಿಗೆ ಮನವರಿಕೆ ಮಾಡಿದ್ದೇವೆ ಆದರೆ ಫಲಿತಾಂಶ ಇಂದಿನ ತನಕ ಸಿಕ್ಕಿಲ್ಲ ಎಂದರು.

ಹಾಗಾಗಿ ನಮ್ಮ ನಲ್ಮೆಯ ಚತುರ ಉಡುಪಿ ಲೋಕಸಭಾ ಸದಸ್ಯರು ಆಗಿರುವ ಶೋಭಾ ಕರಂದ್ಲಾಜೆ ಯವರೆ ದಯವಿಟ್ಟು ಮತ್ಸ್ಯಗಂಧ ರೈಲಿನ ಬಾರ್ಕುರಿನ ನಿಲುಗಡೆಯನ್ನು ಆದಷ್ಟು ಬೇಗ ಪುನರಾರ0ಭಿಸಿ ಈ ಸಮಸ್ಯೆಯನ್ನು ಪರಿಹರಿಸಿ ಕೊಡಬೇಕೆಂದು ಸರ್ವ ಮುಂಬೈ ಬಾರಕೂರು ರೈಲ್ವೆ ಪ್ರಯಾಣಿಕರ ಪರವಾಗಿ ನನ್ನ ವಿನಮ್ರ ವಿನಂತಿ.

Ganesh S Brahmavar
Vashi, Navi Mumbai,‌ 9594228684

Leave a Reply

Your email address will not be published. Required fields are marked *

error: Content is protected !!