ಕಾಂತಾರದಲ್ಲಿ ತುಳುನಾಡಿನ ಜಾನಪದ ಸಂಸ್ಕøತಿಯನ್ನು ಎತ್ತಿಹಿಡಿಯುವ ಪ್ರಯತ್ನ – ಭುವನಪ್ರಸಾದ್ ಹೆಗ್ಡೆ
ಉಡುಪಿ: ಸಿನೆಮಾರಂಗದಲ್ಲಿ ಕರಾವಳಿಯಲ್ಲಿ ಅನೇಕ ಪ್ರತಿಭೆಗಳು ಹೆಸರು ಮಾಡುತ್ತಿದ್ದು, ಈ ನಿಟ್ಟಿನಲ್ಲಿ ಕರಾವಳಿಯ ಸೊಗಡನ್ನು ಬಿಂಬಿಸುವ ಕಾಂತಾರದಂತಹ ಜನಪ್ರಿಯ ಚಿತ್ರದಲ್ಲಿ ತುಳುನಾಡಿನ ಜಾನಪದ ಸಂಸ್ಕøತಿಯ ಸೊಗಡನ್ನು ಎತ್ತಿಹಿಡಿಯವ ಪ್ರಯತ್ನ ನಡೆದಿರುವುದು ಸ್ತುತ್ಯರ್ಹವೆನಿಸಿದೆ ಎಂದು ಕಲಾಪೋಷಕ ಹಾಗೂ ಜಾನಪದ ಚಿಂತಕ ಭುವನಪ್ರಸಾದ್ ಹೆಗ್ಡೆ ಮಣಿಪಾಲ ತಿಳಿಸಿದ್ದಾರೆ.
ಉಡುಪಿಯ ಸೃಷ್ಠಿ ಫೌಂಡೇಶನ್ ಮತ್ತು ಕಟಪಾಡಿಯ ದಿಶಾ ಕಮ್ಯೂನಿಕೇಶನ್ಸ್ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ನ.1ರಂದು ಉಡುಪಿ ಬಡಗಬೆಟ್ಟು ಸೊಸೈಟಿಯ ಜಗನ್ನಾಥ ಸಭಾಭವನದಲ್ಲಿ ನಡೆದ ಕರಾವಳಿ ಕೋಗಿಲೆಗಳ ಗಾನಯಾನ -2022 ಗಾನಗಂಧರ್ವ ಡಾ. ಎಸ್ ಪಿ ಬಿ ಹಾಡುಗಳ ಉತ್ಸವ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.
ಇದೇ ಸಂದರ್ಭ ಖ್ಯಾತ ಜಾನಪದ ಗಾಯಕ ಡಾ.ಗಣೇಶ್ ಕುಮಾರ ಗಂಗೊಳ್ಳಿ ಅವರಿಗೆ ಸಂಗೀತ ರತ್ನ ಹಾಗೂ ಯುವ ಸಂಕಲನಕಾರ ಸುಹಾಸ್ ಶೆಣೈ ಮಣಿಪಾಲ ಅವರಿಗೆ ಯುವರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಗತಿಪರ ಯುವ ಕೃಷಿಕ ಸಂತೋಷ್ ಶೆಟ್ಟಿ ಪಂಜಿಮಾರ್ ಅವರನ್ನು ಸನ್ಮಾನಿಸಲಾಯಿತು.
ಡಾ.ಗಣೇಶ್ ಕುಮಾರ ಗಂಗೊಳ್ಳಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಕರಾವಳಿಯ ಜಾನಪದರ ಬದುಕು ಮತ್ತು ಸಂಸ್ಕøತಿಯನ್ನು ದೇಶ ವಿದೇಶದ ಜನರು ಮೆಚ್ಚುಕೊಂಡು ಜನಪದ ಸಂಶೋಧನೆಗಳನ್ನು ನಡೆಸುತ್ತಿರುವುದು ನಾಡಿನ ಹಿರಿಮೆಯನ್ನು ಹೆಚ್ಚಿಸುವಂತೆ ಮಾಡಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಮಲ್ಪೆಯ ಉದ್ಯಮಿ ಸಾಧು ಸಾಲಿಯಾನ್ ಶುಭಾಶಂಸನೆಗೈದರು. ಉಡುಪಿಯ ಸೃಷ್ಠಿ ಫೌಂಡೇಶನ್ ಅಧ್ಯಕ್ಷೆ ಪ್ರೀತಿ ಪಿ.ಸುವರ್ಣ ಕಟಪಾಡಿ, ಕಾವ್ಯಶೀ ಸುಹಾಸ್, ಭುವನ್ ಕ್ರಿಯೇಷನ್ಸ್ ಮುಖ್ಯಸ್ಥ ಭುವನೇಶ್ ಪ್ರಭು, ಲಕ್ಷ್ಮೀಂದ್ರ ಆಚಾರ್ಯ, ಸಂಜೀವ ಸುವರ್ಣ, ರವಿಶಂಕರ್ ಮಂಗಳೂರು, ಯಶಸ್ ಪಿ.ಸುವರ್ಣ, ಕಲಾವತಿ ನಾಯಕ್, ಜಯಂತಿ, ಸಚಿನ್ ಸಾಲ್ಯಾನ್,ರವಿ ಶಂಕರಪುರ ಉಪಸ್ಥಿತರಿದ್ದರು. ಗಾನಾಯಾನ ಸ್ಫರ್ಧೆಯ ತೀರ್ಪುಗಾರರಾದ ಧರ್ಮರಾಜ್ ಎರ್ಮಾಳ್, ಜಯಶ್ರೀ ಕೋಟ್ಯಾನ್ ಕಟಪಾಡಿ, ಕಟಪಾಡಿ ದಿಶಾ ಕಮ್ಯೂನಿಕೇಶನ್ಸ್ ನಿರ್ದೇಶಕ ಪ್ರಕಾಶ ಸುವರ್ಣ ಕಟಪಾಡಿ ಸ್ವಾಗತಿಸಿದರು. ನಂದಿನಿ ಉಡುಪಿ ಪ್ರಾರ್ಥಿಸಿದರು. ಶಿಕ್ಷಕಿ ಸಂಗೀತಾ ವಸಂತ್ ಕಾರ್ಯಕ್ರಮ ನಿರೂಪಿಸಿದರು. ಸಾಹಿತಿ ದಯಾನಂದ ಕೆ.ಶೆಟ್ಟಿ ದೆಂದೂರು ವಂದಿಸಿದರು.ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಯ 25 ಮಂದಿ ಕಲಾವಿದರು ಕರಾವಳಿ ಕೋಗಿಲೆಗಳ ಗಾನಯಾನ -2022 ಕಾರ್ಯಕ್ರಮದಲ್ಲಿ ಗಾನಗಂಧರ್ವ ಡಾ.ಎಸ್ ಪಿ ಬಿ ಹಾಡುಗಳ ಉತ್ಸವ ನಡೆಸಿಕೊಟ್ಟರು. ಚಾಣಕ್ಯ ಪ್ರಶಸ್ತಿ ವಿಜೇತ ಮಾಸ್ಟರ್ ಯಶಸ್ ಪಿ.ಸುವರ್ಣ ಕಟಪಾಡಿ ಕೊಳಲುವಾದನ ನಡೆಸಿಕೊಟ್ಟರು.