ಬಜೆ ಮೊಗವೀರ ಸಂಘದ ಅಧ್ಯಕ್ಷರಾಗಿ ವಿಠಲ ಕರ್ಕೆರ ಬೆಳ್ಳಂಪಳ್ಳಿ ಆಯ್ಕೆ
ಉಡುಪಿ ನ.2(ಉಡುಪಿ ಟೈಮ್ಸ್ ವರದಿ): ಹಿರಿಯಡ್ಕದ ಬಜೆ ಮೇಲ್ಸಾಲು ಮೊಗವೀರ ಸಂಘದ ಅಧ್ಯಕ್ಷರಾಗಿ ವಿಠಲ್ ಕರ್ಕೇರ ಬೆಳ್ಳಂಪಳ್ಳಿ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಮುಂದಿನ 3 ವರ್ಷಗಳ ಅವಧಿಗೆ ನೂತನ ಅಧ್ಯಕ್ಷರಾಗಿ ವಿಠಲ್ ಕರ್ಕೇರ ಬೆಳ್ಳಂಪಳ್ಳಿ ಸರ್ವಾನುಮತದಿಂದ ಆಯ್ಕೆಯಾಗಿರುತ್ತಾರೆ. ಇವರು ಪ್ರಸ್ತುತ ಮಣೆಪಾಲದ ಮಾಹೆ ಉದ್ಯೋಗಿಯಾಗಿದ್ದು ಸಾರ್ವಜನಿಕ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ.
ಇವರೊಂದಿಗೆ ಸಂಘದ ಗೌರವ ಅಧ್ಯಕ್ಷರಾಗಿ ನಾಡೋಜ ಡಾ. ಜಿ. ಶಂಕರ್, ಉಪಾಧ್ಯಕ್ಷರಾಗಿ ಪುರಂದರ ಕೋಟ್ಯಾನ್ ಬೆಳ್ಳಂಪಳ್ಳಿ, ಸುರೇಶ್ ಬಿ. ಹೆಬ್ರಿ, ಸಂತೋಷ್ ಪೆರ್ಡೂರು, ಶ್ರೀಧರ್ ಬಜೆ, ಪ್ರಮೋದ್ ಪುತ್ರನ್ ರಂಗನ ಪಾಲ್ಕೆ, ಪ್ರಧಾನ ಕಾರ್ಯದರ್ಶಿಯಾಗಿ ದೇವು ಕುಮಾರ್ ಪರೀಕ, ಕೋಶಾಧಿಕಾರಿಯಾಗಿ ಪ್ರಕಾಶ್ ಕೌಡೂರು, ಹಾಗೂ ಗೌರವ ಸಲಹೆಗಾರರಾಗಿ ಜಯ ಸಿ .ಕೋಟ್ಯಾನ್ ಬೆಳ್ಳಂಪಳ್ಳಿ, ಸುಂದರ ಕಾಂಚನ್ ಓಂತಿಬೆಟ್ಟು, ರವೀಂದ್ರ ಶ್ರೀ ಯಾನ್ ಕಾಜರಗುತ್ತು, ಬಾಲು ಕೋಟ್ಯಾನ್ ಬೆಳ್ಳಂಪಳ್ಳಿ, ಉದಯ ಬಂಗೇರ ಬಜೆ ಆಯ್ಕೆಯಾಗಿದ್ದಾರೆ.