ಪ್ರವೀಣ್ ನೆಟ್ಟಾರ್ ಹತ್ಯಾ ಆರೋಪಿಗಳ ಪತ್ತೆಗೆ ಬಹುಮಾನ ಘೋಷಿಸಿದ ಎನ್‌ಐಎ

ಮಂಗಳೂರು: ಬಿಜೆಪಿಯ ಯುವಮೋರ್ಚಾದ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್‌ ನೆಟ್ಟಾರು ಹತ್ಯೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ನಾಲ್ವರು ಆರೋಪಿಗಳ ಮಾಹಿತಿ ನೀಡುವ ಮೂಲಕ ಅವರ ಪತ್ತೆಗೆ ನೆರವಾಗುವವರಿಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಹುಮಾನ ಘೋಷಣೆ ಮಾಡಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕು ಬೆಳ್ಳಾರೆ ಗ್ರಾಮದ ಮೊಹಮ್ಮದ್‌ ಮುಸ್ತಾಫ ಎಸ್‌. ಅಲಿಯಾಸ್‌ ಮುಸ್ತಾಫ ಪೈಚಾರು ಹಾಗೂ ಕೊಡಗು ಜಿಲ್ಲೆಯ ಮಡಿಕೇರಿಯ ತುಫೈಲ್‌ ಎಂ.ಎಚ್ ಅವರ ಪತ್ತೆಗೆ ನೆರವಾದವರಿಗೆ ತಲಾ ರೂ.5 ಲಕ್ಷ ಬಹುಮಾನ ನೀಡಲಾಗುತ್ತದೆ. ಸುಳ್ಯದ  ಕಲ್ಲುಮುಟ್ಟು ಮನೆ ನಿವಾಸಿ ಉಮ್ಮರ್‌ ಫಾರೂಕ್‌ ಎಂ.ಆರ್‌. ಅಲಿಯಾಸ್‌ ಉಮ್ಮರ್‌ ಹಾಗೂ  ಬೆಳ್ಳಾರೆ ಗ್ರಾಮದ ಅಬೂಬಕ್ಕರ್‌ ಸಿದ್ಧಿಕ್‌ ಅಲಿಯಾಸ್ ಪೇಂಟರ್‌ ಸಿದ್ಧಿಕ್‌ ಪತ್ತೆಗೆ ನೆರವಾದವರಿಗೆ ತಲಾ ರೂ.2 ಲಕ್ಷ ಬಹುಮಾನ ನೀಡಲಾಗುತ್ತದೆ ಎಂದು ಎನ್‌ಐಎ ಪ್ರಕಟಣೆಯಲ್ಲಿ ತಿಳಿಸಿದೆ.

ಈ ನಾಲ್ವರು ಆರೋಪಿಗಳು ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾದ ಸದಸ್ಯರು. ಇವರ ಪತ್ತೆಗೆ ನೆರವಾಗುವ ಮಾಹಿತಿದಾರರ ಹೆಸರನ್ನು ಗೋಪ್ಯವಾಗಿಡಲಾಗುವುದು. ಇವರ ಮಾಹಿತಿ ನೀಡಲು ಬಯಸುವವರು ಸಂಸ್ಥೆಯನ್ನು ಸಂಪರ್ಕಿಸಬಹುದು ಎಂದು ಎನ್‌ಐಎ ಹೇಳಿದೆ.

ವಿಳಾಸ: ಪೊಲೀಸ್‌ ವರಿಷ್ಠಾಧಿಕಾರಿ, ರಾಷ್ಟ್ರೀಯ ತನಿಖಾ ದಳ, 8ನೇ ಮಹಡಿ, ಸರ್‌.ಎಂ.ವಿಶ್ವೇಶ್ವರಯ್ಯ ಕೇಂದ್ರೀಯ ಸದನ, ದೊಮ್ಮಲೂರು, ಬೆಂಗಳೂರು 560071

ಸಂಪರ್ಕ: 080 29510900 ಅಥವಾ 8904241100

ಇ–ಮೇಲ್‌:[email protected] 

Leave a Reply

Your email address will not be published. Required fields are marked *

error: Content is protected !!