ಕನ್ನಡ ಅನ್ನ ನೀಡುವ ಭಾಷೆಯಾಗಲಿ: ಜಯನ್ ಮಲ್ಪೆ

ಮಲ್ಪೆ: ಕನ್ನಡ ನಾಡಿನ ಆರ್ಥಿಕ,ಸಾಮಾಜಿಕ, ಶೈಕ್ಷಣಿಕ ಪರಿಸ್ಥಿತಿಯನ್ನು ಚಿಂತಿಸುವ ಸರಕಾರ ಈ ನೆಲದ ಬಹುತ್ವ ಸಂಸ್ಕೃತಿಯನ್ನು ಉಳಿಸಿಕೊಳ್ಳುವ ಜೊತೆಗೆ ಕನ್ನಡ ಅನ್ನ ನೀಡುವ ಭಾಷೆಯಾಗಬೇಕು ಎಂದು ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಹೇಳಿದ್ದಾರೆ.

ಅವರು ಮಲ್ಪೆ ಕಡಲ ತೀರದಲ್ಲಿ ರಿಕ್ಷಾ ಮಾಲಕ ಚಾಲಕರ ಸಂಘ ಆಯೋಜಿಸಿದ 67ನೇ ಕನ್ನಡ ರಾಜ್ಯೋತ್ಸವದ ಮೆರವಣಿಗೆಯನ್ನು ಉದ್ಘಾಟಿಸಿ ಮಾತನಾಡುತ್ತಾ, ಕನ್ನಡಕ್ಕಾಗಿ ಕೈಯೆತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ ಎಂಬ ಕುವೆಂಪುರವರ ಮಾತಿನಂತೆ ಕನ್ನಡದ ಪರ ದನಿಯೆಂಬುದು ಕನ್ನಡಕ್ಕೆ ಪ್ರಭುತ್ವದ ಕಡೆಯಿಂದ ಅನ್ಯಾಯಾವಾದಾಗ ಅದನ್ನು ಪ್ರಶ್ನಿಸುವ ಜೊತೆಗೆ ಕನ್ನಡದ ಪರ ದನಿಯೆಂಬುದು ಕನ್ನಡ ಜನರ ಬದುಕಿನಗೆ ನೆರವಾಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಿಕ್ಷಾ ಮಾಲಕರ ಚಾಲಕರ ಸಂಘದ ಅಧ್ಯಕ್ಷ ಹರೀಶ್ ಸಾಲ್ಯಾನ್ ವಹಿಸಿದ್ದರು. ವೇದಿಕೆಯನ್ನು ಮಾಜಿ ನಗರಸಭಾ ಸದಸ್ಯ ಪಾಂಡುರಂಗ ಮಲ್ಪೆ, ಸಮಾಜ ಸೇವಕ ಮಂಜು ಕೊಳ, ಮಲ್ಪೆ ಠಾಣೆಯ ಉಪನಿರೀಕ್ಷಕ ಶಕ್ತಿವೇಲು ಐತ್ತಪ್ಪ ಬಂಗೇರ, ಚಂದ್ರಹಾಸ್ ಮಲ್ಪೆ, ಪ್ರಕಾಶ್ ಎಂ.ಕಲ್ಮಾಡಿ, ಶಾರದ ನೆರ್ಗಿ ಮತ್ತು ಗಣೇಶ್ ನೆರ್ಗಿ ಉಪಸ್ಥಿತರಿದ್ದರು.

ಮಲ್ಪೆ ಕಡಲ ತೀರದ ಬೀಚ್‌ನಿಂದ ಕನ್ನಡಾಂಭೆಯ ಭಾವಚಿತ್ರದ ಜೊತೆ ಸುಮಾರು ಐನೂರಕ್ಕೂ ಹೆಚ್ಚು ರಿಕ್ಷಾಗಳು ಕನ್ನಡದ ಭಾವುಟಗಳ ಜೊತೆ ವಡಭಾಂಡೇಶ್ವರ, ಕೋರನೇಟ್ ಮೂಲಕ ಮಲ್ಪೆಯ ಹೃದಯಭಾಗವಾಗಿ ಕೊಳ ಮೂಲಕ ಮೆರವಣಿಗೆ ನಡೆಸಿದರು. ಅರುಣ್ ಸ್ವಾಗತಿಸಿ, ಪ್ರಕಾಶ್ ಕೊರನೆಟ್ ವಂದಿಸಿದರು, ಭಗವಾನ್ ಮಲ್ಪೆ ಕಾರ್ಯಕ್ರಮ ನಿರೂಪಿಸಿದರು,

Leave a Reply

Your email address will not be published. Required fields are marked *

error: Content is protected !!