ಅಪಾಯವನ್ನು ಆಹ್ವಾನಿಸುತ್ತಿದೆ ಕೆಮ್ಮಣ್ಣು ತೂಗು ಸೇತುವೆ

ಉಡುಪಿ: ಗುಜರಾತ್‌ ಮೊರ್ಬಿ ತೂಗು ಸೇತುವೆ ದುರಂತದಲ್ಲಿ 140ಕ್ಕೂ ಹೆಚ್ಚು ಜನ‌ ಸಾವನ್ನಾಪ್ಪಿದ್ದು,‌ ಉಡುಪಿ ಜಿಲ್ಲೆಯಲ್ಲೂ ಇಂತಹ ತೂಗು ಸೇತುವೆ ಇದ್ದು ಜಿಲ್ಲಾಡಳಿತ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ ಆಗಿದೆ.

ವಿಕೆಂಡ್,‌ ರಜಾ ದಿನ ಬಂದರೆ ಸಾಕು ಕೆಮ್ಮಣ್ಣುವಿನ ತೂಗು ಸೇತುವೆ ಮೇಲೆ ನೂರಾರು ಜನ‌ ಪ್ರವಾಸಿಗರು ಪೋಟೋ ಶೂಟ್, ಸೇಲ್ಫಿ ತೆಗೆಯಲು ಈ ಅಪಾಯಕಾರಿ ಸೇತುವೆ ಮೇಲೆ ಸಂಚಾರ ಮಾಡುತ್ತಾರೆ.

ಒಮ್ಮಿಂದೊಮ್ಮಲೆ ನೂರಾರು ಜನ ಈ ಸೇತುವೆಯಲ್ಲಿ ಸಂಚರಿಸುತ್ತಾರೆ. ಸೇತುವೆ ಈ ಭಾರ ಸಹಿಸಿಕೊಳ್ಳುತ್ತಾ ಎನ್ನುವುದನ್ನು ತಜ್ಞರ ಮುಖಾಂತರ ಪರೀಶಿಲಿಸಬೇಕು ಎನ್ನುತ್ತಾರೆ ಸ್ಥಳೀಯ ನಿವಾಸಿಗಳು.

ಸೇತುವೆ ಬಳಿ ಬೋಟ್ ರೈಡಿಂಗ್, ಕಯಾಕಿಂಗ್ ಸಾಹಸಕ್ಕೆ ಪ್ರವಾಸಿಗರು ದಿನ‌ ನಿತ್ಯ ನೂರಾರು ಜನ ಬರುವವರು ಈ ತೂಗು ಸೇತುವೆಯಲ್ಲೂ ಸಂಚಾರಿಸುತ್ತಾರೆ.‌ ಇದೇ ಸಂದರ್ಭದಲ್ಲಿ ದ್ವಿಚಕ್ರ ವಾಹನ ಕೂಡ ಇದೇ ತೂಗು ಸೇತುವೆಯಲ್ಲಿ ಸಂಚರಿಸುತ್ತದೆ ಎನ್ನುತ್ತಾರೆ ಸ್ಥಳೀಯರು. ಗುಜರಾತ್ ದುರಂತದ ಪಾಠವನ್ನು ಕಲಿತು ಇಲ್ಲೂ ಯಾವುದೇ ಅವಘಡ ಆಗುವ ಮುನ್ನ ಉಡುಪಿ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕಾಗಿದೆ.

ಗುಜರಾತ್ ಮೊರ್ಬಿ ತೂಗು ಸೇತುವೆ ದುರಂತ.
ಉಡುಪಿ ಜಿಲ್ಲಾಡಳಿತವೂ ಎಚ್ಚರಾಗಬೇಕು
ಜಿ.ವಾಸುದೇವ ಭಟ್ ಪೆರಂಪಳ್ಳಿ

ಉಡುಪಿಯ ಆಕರ್ಷಕ ಪ್ರವಾಸಿ ತಾಣಗಳ ಪೈಕಿ ಒಂದಾಗಿರುವ ಕೆಮ್ಮಣ್ಣು ತೋನ್ಸೆ ತಿಮ್ಮಣ್ಣಕುದ್ರುವಿಗೆ ಅಡ್ಡಲಾಗಿ ಕಟ್ಟಿರೋ ತೂಗು ಸೇತುವೆಯ ಬಗ್ಗೆ ಜಿಲ್ಲಾಡಳಿತ ನಿಗಾ ವಹಿಸಬೇಕು. ಕೆಲವೊಂದು ಸಂದರ್ಭ ಈ ಪ್ರದೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಬರ್ತಾರೆ . ಸೇತುವೆಯ ಮೇಲೆ 200- 300 ರಷ್ಟು ಜನ ನಿಂತಿರ್ತಾರೆ. ಆದ್ರಿಂದ ಜಿಲ್ಲಾಡಳಿತದ ವತಿಯಿಂದ ಸೇತುವೆಯ ಬಳಿ ಸೇತುವೆಯ ಧಾರಣಾ ಸಾಮರ್ಥ್ಯದ ಕುರಿತಾಗಿ ಮಾಹಿತಿ ಫಲಕ ಮತ್ತು ಎಚ್ಚರಿಕೆ ಫಲಕ ಅಳವಡಿಸೋದು ಒಳ್ಳೇದು .

ಸ್ಥಳೀಯ ಪಂಚಾಯತ್ ವತಿಯಿಂದ ಮೇಲ್ವಿಚಾರಣೆಗಾಗಿ ಓರ್ವ ಸಿಬಂದಿ ನೇಮಿಸಬಹುದು ಸೇತುವೆಯ ಪ್ರವೇಶಕ್ಕೆ ನಿರ್ದಿಷ್ಟ ಸಮಯವನ್ನು ನಿಗದಿಪಡಿಸಬಹುದು .ಆ ಸಮಯದ ನಂತರ ಸೇತುವೆ ಬಂದ್ ಮಾಡಬೇಕು. ಸೇತುವೆಯ ಸಮೀಪ ಇಂದು ಕೋಣೆ ನಿರ್ಮಿಸಿ ಅಲ್ಲಿ ತುರ್ತು ಜೀವ ರಕ್ಷಕ ಸಾಮಗ್ರಿ ಇಡಬಹುದು. ಈ ರೀತಿ ಗುಜರಾತ್ ನ ದುರಂತದ ಹಿನ್ನೆಲೆಯಲ್ಲಿ ನಮ್ಮೂರಿನ ತೂಗು ಸೇತುವೆಗಳ ಮೇಲೆ ನಿಗಾ ವಹಿಸೋದು ಒಳ್ಳೇದು ತಿಳಿಸಿದ್ದಾರೆ.

3 thoughts on “ಅಪಾಯವನ್ನು ಆಹ್ವಾನಿಸುತ್ತಿದೆ ಕೆಮ್ಮಣ್ಣು ತೂಗು ಸೇತುವೆ

  1. We will sooner or later see same Gujarat incident here. Because the wire rope securing clamping mechanism on both side submerged inside the earth. And 75% eroded. No one is interested in human safety. Only interested in grabbing money in the name of tourism.

Leave a Reply

Your email address will not be published. Required fields are marked *

error: Content is protected !!