ದೈವ ನರ್ತಕ ಗುಡ್ಡ ಪಾಣಾರ, ಹೊಟೇಲ್ ಉದ್ಯಮಿ ಜಯರಾಂ ಬನಾನ್ ಸಹಿತ ನಾಲ್ವರಿಗೆ ರಾಜ್ಯೋತ್ಸವ ಪ್ರಶಸ್ತಿ

ಉಡುಪಿ: 2022 ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿದ್ದು, ಉಡುಪಿ ಜಿಲ್ಲೆಯ ನಾಲ್ವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ದೈವ ನರ್ತಕ ಗುಡ್ಡ ಪಾಣಾರ, ಯಕ್ಷಗಾನ ಕಲಾವಿದ ಎಮ್.ಎ.ನಾಯಕ್, ರಂಗಭೂಮಿ – ತಾಳಮದ್ದಲೆ ಕಲಾವಿದ ಪ್ರಭಾಕರ್ ಜೋಶಿ ಹಾಗು ವಾಣಿಜ್ಯೋದ್ಯಮಿ ಜಯರಾಂ ಬನಾನ್ ಅವರಿಗೆ ಪ್ರಶಸ್ತಿ ಲಭಿಸಿದೆ.

ಗುಡ್ಡ ಪಾಣಾರ (ದೈವ ನರ್ತಕರು)

ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮೂಳೂರು ಗ್ರಾಮದ ನಿವಾಸಿ ಗುಡ್ಡ ಪಾಣಾರ (67) ತಮ್ಮ 25ನೇ ವಯಸ್ಸಿನಲ್ಲಿ ಕಾಪುವಿನ ಪ್ರಸಿದ್ಧ ಪಿಲಿ ಕೋಲದಿಂದ ದೈವನರ್ತನವನ್ನು ಆರಂಭಿಸಿದವರು. ಅಂದಿನ ಸುಪ್ರಸಿದ್ಧ ದೈವನರ್ತಕರಾಗಿದ್ದ ತಂದೆ ನಾಣು ಪಾಣಾರರಿಂದ ದೈವನರ್ತನ ಕಲೆಯನ್ನು ಕರಗತ ಮಾಡಿಕೊಂಡ ಗುಡ್ಡ ಪಾಣಾರ ಆರಂಭದಲ್ಲಿ ಪಂಜುರ್ಲಿ, ಕೊರ್ದಬ್ಬು, ವರ್ತೆ, ರಾವು, ಗುಳಿಗ ಇತ್ಯಾದಿ ದೈವಗಳ ಕೋಲಗಳನ್ನೂ ಮಾಡಿದ್ದರು. ಆದರೇ ಇತ್ತೀಚೆಗೆ 2 ವರ್ಷಕ್ಕೊಮ್ಮೆ ನಡೆಯುವ ಪಿಲಿ ಕೋಲದಲ್ಲಿ ಮಾತ್ರ ಭಾಗವಹಿಸುತ್ತಿದ್ದಾರೆ. ಅವರು ಇಬ್ಬರು ಮಕ್ಕಳಲ್ಲಿ ಕಿರಿಯವ ಕೂಡ ತಂದೆಯಿಂದ ಕಲೆಯನ್ನು ಕಲಿತು ದೈವನರ್ತಕರಾಗಿದ್ದಾರೆ.

ಜಯರಾಂ ಬನಾನ್

ಮೂಲತಃ ಉಡುಪಿ ಜಿಲ್ಲೆಯ ಕಾರ್ಕಳದ ಮಠದಬೆಟ್ಟುವಿನವರು. ತಮ್ಮ 13ನೇ ವಯಸ್ಸಿನಲ್ಲಿ ಮನೆಬಿಟ್ಟು, ಮುಂಬೈಗೆ ತೆರಳಿ ಅತ್ಯಂತ ಕಷ್ಟಕಾರ್ಪಣ್ಯಗಳ ನಡುವೆಯೇ ಹಂತಹಂತವಾಗಿ ಯಶಸ್ಸಿನ ಮೆಟ್ಟಿಲೇರುತ್ತಾ ಬಂದವರು. ಕೇವಲ 5000 ರೂಪಾಯಿಗಳ ಬಂಡವಾಳದೊಂದಿಗೆ ದೆಹಲಿಯ ಡಿಫೆನ್ಸ್ ಕಾಲೋನಿಯಲ್ಲಿ ಸಾಗರ್‌ ರತ್ನ ರೆಸ್ಟೋರೆಂಟ್ ಆರಂಭಿಸಿದ ಅವರು ಜಯರಾಮ್‌ ಬಸಣ್ ಸಾಗರ್ ರತ್ನ ಮತ್ತು ಶ್ರೀ ರತ್ನಂ ರೆಸ್ಟೋರೆಂಟ್‌ಗಳ ಮಾಲೀಕರು, ದೆಹಲಿಯಾದ್ಯಂತ ಸರಣಿ ರೆಸ್ಟೋರೆಂಟ್‌ಗಳನ್ನು ನಡೆಸುತ್ತಿದ್ದಾರೆ. ಮಂಗಳೂರಿನ ಓಷಿಯನ್ ಪರ್ಲ್ ಹೋಟೆಲ್ ಮಾಲೀಕರಾಗಿದ್ದಾರೆ. ದೇಶದಲ್ಲಿ ಸಾಗರ್ ರತ್ನ ಮತ್ತು ಶ್ರೀರತ್ನಂ ಹೆಸರಿನ ಸುಮಾರು 15ಕ್ಕೂ ಹೆಚ್ಚು ಶಾಖೆಗಳು ಮತ್ತು ಅದರ ಅಂಗಸಂಸ್ಥೆ ಸ್ವಾಗತ್‌ ಹೆಸರಿನಲ್ಲಿ ಇನ್ನಷ್ಟು ಶಾಖೆಗಳು ಸ್ಥಾಪಿತವಾಗಿದೆ. ಉಪಚಾರ, ಆಹಾರ, ನೈರ್ಮಲ್ಯ ಮುಂತಾದ ಉತ್ಕೃಷ್ಟತೆಗಳನ್ನು ಹೊಂದಿದ್ದು ಹೆಸರುವಾಸಿಯಾಗಿದೆ.

Leave a Reply

Your email address will not be published. Required fields are marked *

error: Content is protected !!