ಉಡುಪಿ: ಕ್ರೈಸ್ತ ಸಮುದಾಯದವರಿಗೆ ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ ಕಾರ್ಯಾಗಾರ
ಉಡುಪಿ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಉಡುಪಿ ಜಿಲ್ಲೆ ವತಿಯಿಂದ ಡಾನ್ ಬೋಸ್ಕೋ ಸಭಾಂಗಣದಲ್ಲಿ ನಡೆದ “ಕ್ರೈಸ್ತ ಸಮುದಾಯದವರಿಗೆ ಸರ್ಕಾರದಿಂದ ಸಿಗುವ ವಿವಿಧ ಯೋಜನೆಗಳ ಮಾಹಿತಿ ಕಾರ್ಯಾಗಾರ ಹಾಗೂ ಸಮಾಲೋಚನಾ ಸಭೆ” ನಡೆಯಿತು.
ಶಾಸಕರಾದ ಕೆ. ರಘುಪತಿ ಭಟ್ ಅವರು ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಕ್ರಿಶ್ಚಿಯನ್ ಸಮುದಾಯದವರು ಸರ್ಕಾರದಿಂದ ಸಿಗುವ ವಿವಿಧ ಯೋಜನೆಗಳ ಮಾಹಿತಿ ಪಡೆದು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕರ್ನಾಟಕ ಸರ್ಕಾರ ಕ್ರಿಶ್ಚಿಯನ್ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಕೆನಡಿ ಶಾಂತ ಕುಮಾರ್ ರವರು ಕ್ರೈಸ್ತರಿಗೆ ಸರಕಾರದಿಂದ ಸಿಗುವ ವಿದ್ಯಾರ್ಥಿ ವೇತನ, ವಿದೇಶದಲ್ಲಿ ವಿವಿಧ ಯೂನಿವರ್ಸಿಟಿ ಶಿಕ್ಷಣ ಪೂರೈಸಲು ವಿದ್ಯಾರ್ಥಿ ವೇತನ, ಸವಲತ್ತುಗಳು ಮತ್ತು ಧಾರ್ಮಿಕ ಕೇಂದ್ರಗಳಿಗೆ, ಅನಾಥಾಲಯ, ವೃದ್ಧಾಶ್ರಮಗಳಿಗೆ ಅನುದಾನವನ್ನು ವಿವರಿಸಿದರು.
ವಿವಿಧ ಇಲಾಖೆಗಳ ಜಿಲ್ಲಾ ಅಧಿಕಾರಿಗಳು ವ್ಯಾಪಾರ ವ್ಯವಹಾರಗಳಿಗೆ ಮತ್ತು ಕೃಷಿ ಇಲಾಖೆ, ವಾಹನ ಖರೀದಿಗಾಗಿ, ತೋಟಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆ, ಕೈಗಾರಿಕೆ, ಖಾದಿ ಗ್ರಾಮೋದ್ಯೋಗ, ಲೀಡ್ ಬ್ಯಾಂಕ್, ದೀನ್ ದಯಾಳ್ ಅಂತ್ಯೋದಯ, ಸಲಹೆಗಾರ ಅಂತಾರಾಷ್ಟ್ರೀಯ ಸಲಹೆ ಕೇಂದ್ರ ಕರ್ನಾಟಕ, ಮತ್ತಿತರ ಸವಲತ್ತುಗಳನ್ನು ವಿವರಿಸಿ, ಸವಲತ್ತನ್ನು ಉಪಯೋಗಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಧಾನ ಧರ್ಮ ಗುರುಗಳಾದ ಚಾರ್ಲ್ಸ್ ಮೆನೇಜಸ್, ಪ್ರಧಾನ ಮಂತ್ರಿ 15 ಅಂಶಗಳ ಮತ್ತು ಉಡುಪಿ ಜಿಲ್ಲಾ ಅಲ್ಪಸಂಖ್ಯಾತ ಸಂಸ್ಥೆಗಳ ಉಸ್ತುವಾರಿ ಸದಸ್ಯರಾದ ಅಲ್ವಿನ್ ಡಿಸೋಜ, ಭಾರತೀಯ ಕ್ರೈಸ್ತ ಒಕ್ಕೂಟದ ಉಪಾಧ್ಯಕ್ಷರಾದ ಪ್ರಶಾಂತ್ ಜತ್ತನ, ಸಿರಿಯನ್ ಕಥೋಲಿಕ್ ಧರ್ಮ ಗುರುಗಳಾದ ಫಾದರ್ ನೋಯೆಲ್, CSI ರೆವೆರೆಂಡ್ ಪಾಸ್ಟರ್ ಐವನ್ ಸೋನ್ಸ್, ಉಡುಪಿ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಪ್ರಭಾರ ಅಧಿಕಾರಿಗಳಾದ ಸಚಿನ್, ಕ್ರೈಸ್ತ ಮುಖಂಡರಾದ ಮಾರ್ಟಿನ್ ವೇನಸ್, ಮೈಕಲ್ ಡಿಸೋಜ, ಗಿಲ್ಬರ್ಟ್ ಬ್ರಗಾಂಜಾ, ಗ್ರೆಟ್ಟಾ ಮಸ್ಕರೇನಸ್ ಮಣಿಪಾಲ, ಮತ್ತು ಕಲ್ಯಾಣ ಇಲಾಖೆಯ ಅಜಯ್ ಡಿಸೋಜ, ಕಿಶೋರ್ ಪುತ್ರನ್ ಉಪಸ್ಥಿತರಿದ್ದರು.
ಎಲ್ಲಾ ಕ್ರೈಸ್ತ ಧಾರ್ಮಿಕ ಗುರುಗಳು, ಧಾರ್ಮಿಕ ಭಗಿನಿಯರು ಮತ್ತು ಕ್ರೈಸ್ತ ಮುಖಂಡರು, ಕ್ರೈಸ್ತ ಸಹೋದರ ಸಹೋದರಿಯರು ಮಾಹಿತಿ ಪಡೆದುಕೊಂಡರು.