ಕುಂದಾಪುರ/ಕೋಟ ಪ್ರತ್ಯೇಕ ಪ್ರಕರಣ: ಇಬ್ಬರು ವ್ಯಕ್ತಿಗಳು ನೇಣಿಗೆ ಶರಣು

ಉಡುಪಿ ಅ.29(ಉಡುಪಿ ಟೈಮ್ಸ್ ವರದಿ): ಶಂಕರನಾರಾಯಣ ಹಾಗೂ ಕೋಟ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ವ್ಯಕ್ತಿಗಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ರಾಜೀವ ಹೆಗ್ಡೆ (66), ಸಂತೋಷ (38) ಆತ್ಮಹತ್ಯೆ ಮಾಡಿಕೊಂಡವರು.

ರಾಜೀವ ಹೆಗ್ಡೆ ಅವರು ವಿಪರೀತ ಮದ್ಯ ಸೇವನೆ ಮಾಡುವ ಅಭ್ಯಾಸ ಹೊಂದಿದ್ದು, 26 ವರ್ಷದಿಂದ ಮನೆ ಬಿಟ್ಟು ಯಾವುದೇ ಒಂದೆ ಕಡೆ ವಾಸವಿರದೇ ಬೇರೆ ಬೇರೆ ಕಡೆ ತಿರುಗಾಡಿಕೊಂಡಿದ್ದರು. ಇದೇ ವಿಷಯಗಳಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ಅ.28 ರಾತ್ರಿಯಿಂದ ಅ.29 ರ ನಡುವಿನ ಅವಧಿಯಲ್ಲಿ ಕುಂದಾಪುರ ತಾಲೂಕಿನ ಸಿದ್ದಾಪುರ ಗ್ರಾಮದ ಸಿದ್ದಾಪುರ ಮಾರ್ಕೇಟ್‍ನ ಕಟ್ಟಡದ ಒಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದಾಗಿ ಮೃತರ ಮಗಳು ಹೆಬ್ರಿಯ ಮಡಾಮಕ್ಕಿ ಗ್ರಾಮದ ಲತಾ ಹೆಗ್ಡೆ ಎಂಬವರು ನೀಡಿದ ಮಾಹಿತಿಯಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು ಬ್ರಹ್ಮಾವರದ ಕೋಟ ತಟ್ಟು ಗ್ರಾಮದ ಪಡುಕೆರೆಯ ಸಂತೋಷ ಅವರು ತಂದೆಯ ಮರಣದ ನಂತರ ಮನೆಯಲ್ಲಿ ಒಬ್ಬರೇ ವಾಸ ಮಾಡಿಕೊಂಡಿದ್ದು, ತಾಯಿ ಅಸೌಖ್ಯದಿಂದ ಅಕ್ಕನ ಮನೆಯಲ್ಲಿದ್ದರು. ಅಲ್ಲದೇ ಇತ್ತೀಚೆಗೆ ವಿಪರೀತ ಮದ್ಯಪಾನ ಕುಡಿತದ ಅಭ್ಯಾಸ ಇದ್ದವರು ಮದ್ಯಪಾನ ಕುಡಿಯುವ ಅಬ್ಯಾಸವನ್ನು ಬಿಟ್ಟಿದ್ದರು. ಈ ಎಲ್ಲಾ ವಿಚಾರದಿಂದ ಮನನೊಂದು ಎಂದಿನಂತೆ ಮನೆಯಲ್ಲಿ ಒಬ್ಬರೆ ಮಲಗಿದ್ದವರು ಇಂದು ಬೆಳಗಿನ ಸಮಯದಲ್ಲಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮೃತರ ಅಣ್ಣ ಚಂದ್ರ ಕುಂದರ್ ಎಂಬವರು ನೀಡಿದ ಮಾಹಿತಿಯಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯಾವುದೇ ಸಮಸ್ಯೆಗೆ ಆತ್ಮಹತ್ಯೆಯೊಂದೇ ಪರಿಹಾರವಲ್ಲ ಆತ್ಮಹತ್ಯೆ ಮಾಡಿಕೊಳ್ಳುವ ಸಂಭವನೀಯ ವ್ಯಕ್ತಿಗಳ ಗಮನಕ್ಕೆ, ಸಹಾಯವಾಣಿ ನಂಬರ್ : 080 2572 2573, ಸಮರ್ಥನಂ ಆವರಣ, 15ನೇ ಕ್ರಾಸ್, ಹೆಚ್‍ಎಸ್‍ಆರ್ ಸೆಕ್ಟರ್- 4, ಬೆಂಗಳೂರು.

Leave a Reply

Your email address will not be published. Required fields are marked *

error: Content is protected !!