ಪರ್ಕಳ: ಶವ ಸಂಸ್ಕಾರ ಮಾಡಿ ಮಾನವೀಯತೆ ಮೆರೆದ ಸುನ್ನಿ ಹೆಲ್ಪ್ ಡೆಸ್ಕ್

ಪರ್ಕಳ: (ಉಡುಪಿ ಟೈಮ್ಸ್ ವರದಿ) ಪರ್ಕಳದಲ್ಲಿ ಹಿಂದೂ ಧರ್ಮದ ಓರ್ವರು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಕೋವಿಡ್ ನಿಂದ ಮೃತರಾಗಿದ್ದರು. ಅವರ ಕುಟುಂಬದವರು ಆ ಶವದ ಅಂತ್ಯ ಸಂಸ್ಕಾರ ನಡೆಸಲು ಮುಂದೆ ಬಂದಿರಲಿಲ್ಲ.

ಈ ಸಂದರ್ಭ ಸುನ್ನಿ ಹೆಲ್ಪ್ ಡೆಸ್ಕ್ ಕಾರ್ಯಕರ್ತರು ಆರೋಗ್ಯ ಇಲಾಖೆ ಮತ್ತು ಅಧಿಕಾರಿಗಳ ಅನುಮತಿ ಹಾಗೂ ಆ ಕುಟುಂಬದ ಬೇಡಿಕೆಯಂತೆ ಅವರ ಧರ್ಮದ ಪ್ರಕಾರ ಅಂತ್ಯಕ್ರಿಯೆ ನಡೆಸಲು ಇಂದ್ರಾಳಿ ರುದ್ರ ಭೂಮಿ ತನಕ ಆ ಶವ ತಲುಪಿಸಿ ಮಾನವೀಯತೆ ಮೆರೆದಿದ್ದಾರೆ.


ಕೊನೆಗೆ ಗೌರವಯುತ ಅಂತ್ಯ ಸಂಸ್ಕಾರ ನಡೆಯುವುದರೊಂದಿಗೆ ಮೃತರ ಕುಟುಂಬ ಸಮಾಧಾನದ ನಿಟ್ಟುಸಿರು ಬಿಡುವಂತಾಯಿತು. ಈ ಸೇವೆಯಲ್ಲಿ ನೇಜಾರು ಅಬೂಬಕ್ಕರ್ ಹಾಜಿ, ಕೆ.ಎ. ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ಹಾಗೂ ರಫೀಕ್ ದೊಡ್ಡಣಗುಡ್ಡೆ , ಖಯ್ಯೂಮ್ ಮಲ್ಪೆ, ಬಿಲಾಲ್ ಮಲ್ಪೆ, ಅಲ್ತಾಫ್ ಮಲ್ಪೆ,ಅಫ್ಜಲ್ ಕರಂಬಳ್ಳಿ, ಬಶೀರ್ ಕರಂಬಳ್ಳಿ, ನಝೀರ್ ಕರಂಬಳ್ಳಿ ಹಾಗೂ ಆಸಿಫ್ ಮಂಚಿ ಭಾಗಿಯಾದರು.
ಈ ಮಾನವೀಯ ಸೇವಾ ಕೈಂಕರ್ಯಕ್ಕೆ ಅಧಿಕಾರಿ ವರ್ಗ ಹಾಗೂ ಕುಟುಂಬಿಕರಿಂದ ಮೆಚ್ಚುಗೆ ವ್ಯಕ್ತವಾಯಿತು.

Leave a Reply

Your email address will not be published. Required fields are marked *

error: Content is protected !!