ಬಾಯಿಗೆ ಬಂದ ಹಾಗೆ ಹೇಳಿಕೆ ನೀಡುವ ಸೊರಕೆ ಹೇಳಿಕೆಗೆ ಪುರಾವೆ ಒದಗಿಸಲಿ, ಇಲ್ಲ ಸತ್ಯಪ್ರಮಾಣಕ್ಕೆ ಬರಲಿ- ಲಾಲಾಜಿ ಆರ್.ಮೆಂಡನ್
ಕಾಪು: ‘ಬಿಜೆಪಿ ಮತ್ತು ನನಗೆ, ಎಸ್‍ಡಿಪಿಐ ಪಕ್ಷದೊಂದಿಗೆ ಸಂಬಂಧ ಕಲ್ಪಿಸಿ ನೀಡಿದ ಹೇಳಿಕೆಯನ್ನು ಮೊದಲು ಮಾಜಿ ಶಾಸಕ ವಿನಯ ಕುಮಾರ್ ಸೊರಕೆಯವರು ನಿರೂಪಿಸಲಿ ಎಂದು ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಅವರು ಸವಾಲು ಹಾಕಿದ್ದಾರೆ.
`ಬಿಜೆಪಿ ಮತ್ತು ಎಸ್‍ಡಿಪಿಐ ಒಂದೇ ನಾಣ್ಯದ ಎರಡು ಮುಖಗಳು ಎಸ್.ಡಿ.ಪಿ.ಐ ಯವರ ಚುನಾವಣಾ ಖರ್ಚನ್ನು ಬಿಜೆಪಿ ಮಾಡುತ್ತಿದೆ ಎಂಬ ಮಾಜಿ ಶಾಸಕ ವಿನಯ ಕುಮಾರ್ ಸೊರಕೆಯವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಮೊದಲು ಅವರು ಹೇಳಿರುವ ಮಾತನ್ನು ನಿರೂಪಿಸಲಿ ಇಲ್ಲದಿದ್ದರೆ ಬಹಿರಂಗ ಕ್ಷಮೆ ಕೇಳಬೇಕು ಎಂದಿದ್ದಾರೆ.
ಹಾಗೂ ‘ಬಾಯಿಗೆ ಬಂದ ಹಾಗೆ ಹೇಳಿಕೆ ನೀಡಿರುವ ಸೊರಕೆಯವರು ಹೇಳಿಕೆಗೆ ಪುರಾವೆಯನ್ನು ಒದಗಿಸಲಿ. ಇಲ್ಲವಾದಲ್ಲಿ ಸತ್ಯಪ್ರಮಾಣಕ್ಕೆ ಯಾವುದೇ ಪುಣ್ಯಕ್ಷೇತ್ರಕ್ಕೆ ಬರಲಿ ನಾನು ಸಿದ್ಧನಿದ್ದೇನೆ. ಹೀಗೆ ಮುಂದುವರಿದರೆ ‘ಮತಿಗೆಟ್ಟ ಸೊರಕೆ’ ಎಂದು ಹೊಸ ನಾಮಕರಣ ಅವರಿಗೆ ಮಾಡಬೇಕಾದ ಅನಿವಾರ್ಯತೆಯನ್ನು ಅವರೇ ಸೃಷ್ಟಿಸಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.
ಎಸ್.ಡಿ.ಪಿ.ಐ ಮಾತೃ ಸಂಘಟನೆಯಾದ ಪಿ.ಎಫ್.ಐಯನ್ನು ನಿಷೇಧ ಮಾಡಿದ ಬಿಜೆಪಿಯವರಿಗೆ ಎಸ್.ಡಿ.ಪಿ.ಐ ಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಅಗತ್ಯವೇನಿದೆ..? ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಪುರಸಭೆಯಲ್ಲಿ ಆಗಲಿ ಅಥವಾ ನಮ್ಮ ಉಡುಪಿ ಜಿಲ್ಲೆಯಲ್ಲಿ ಹಲವು ಪಂಚಾಯಿತಿಗಳಲ್ಲಿ ಕಾಂಗ್ರೆಸ್-ಎಸ್‍ಡಿಪಿಐ ಒಳಒಪ್ಪಂದ ಮತ್ತು ಮೈತ್ರಿಯ ಅಧಿಕಾರ ಹಿಡಿರುವುದು ತಿಳಿದಿದೆ. ಹಾಗಿದ್ದಲ್ಲಿ ನಮ್ಮ ಮೇಲೆ ಯಾವ ನೈತಿಕತೆ ಆಧಾರದಲ್ಲಿ ಸೊರಕೆಯವರು ಆರೋಪ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಮುಸ್ಲಿಂ ಸಮುದಾಯದ ಮತವನ್ನು ನೆಚ್ಚಿಕೊಂಡಿರುವ ಕಾಂಗ್ರೆಸ್ ಪಕ್ಷಕ್ಕೆ ಈಗ ಎಸ್‍ಡಿಪಿಐ ಪಕ್ಷ ಬಂದ ಮೇಲೆ ತಲೆನೋವು ಶುರುವಾಗಿದೆ. ತಮ್ಮ ಖಾತೆಯಲ್ಲಿದ್ದ ಮತಗಳು ಅವರ ಪಾಲಾಗುತ್ತಿವೆ ಎಂಬ ಕೋಪ ಮತ್ತು ಅಸೂಯೆಯಿಂದ ಮಾಜಿ ಶಾಸಕರಾದ ವಿನಯ್ ಕುಮಾರ್ ಸೊರಕೆ ಅವರು ಈ ರೀತಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಟೀಕಿಸಿದರು.
ಕಾಪು ಶಾಸಕರಿಗೆ ಬಾಕಿ ಉಳಿದಿರುವುದು ಆಣೆ ಪ್ರಮಾಣ ಮಾತ್ರ, ಸುಳ್ಳು ಹೇಳುವ ಪಕ್ಷ ಎಂದರೆ ಬಿಜೆಪಿ ನಿಮಗೆ ಎಂಥಹ ಪ್ರಮಾಣ, ಪ್ರಮಾಣ ಮಾಡಲು ಲೆಕ್ಕ ಕೊಟ್ಟರೆ ಮಹಭಾರತ ರಾಮಾಯಣ ದಷ್ಟು ಇದೆ