ಟೋಲ್’ನ ಅಕ್ರಮ ಹಣ ಬಿಜೆಪಿ ಪರಿವಾರದ ಕಾನೂನುಬಾಹಿರ ಚಟುವಟಿಕೆಗೆ ಬಳಕೆ-ಅನಿತಾ ಡಿಸೋಜಾ
ಕಾಪು: ಸುರತ್ಕಲ್ ಟೋಲ್ ಗೇಟ್ ವಿರುದ್ಧದ ಹೋರಾಟವನ್ನು ಹತ್ತಿಕ್ಕಲು ಬಿಜೆಪಿ ಸರಕಾರ ಪೊಲೀಸರ ಮೂಲಕ ಶತಾಯಗತಾಯ ಪ್ರಯತ್ನಿಸುತ್ತಿದೆ. ಎಂಬುದು ಹೋರಾಟಗಾರರಿಗೆ ಅದು ಕೂಡ ಮಹಿಳೆಗೆ ಮಧ್ಯರಾತ್ರಿ ನೋಟಿಸ್ ನೀಡಿರುವುದರ ಮೂಲಕ ಸಾಬೀತಾಗಿದೆಂದು ಕಾಂಗ್ರೆಸ್ ಅನಿತಾ ಡಿಸೋಜಾ ಆರೋಪಿಸಿದ್ದಾರೆ.
ಅಗತ್ಯ ಬಿದ್ದರೆ ಯು.ಪಿ ಮಾಡೆಲ್, ಕರ್ನಾಟಕದಲ್ಲೂ ಮಾಡುತ್ತೇವೆ ಅಂತ ಮುಖ್ಯಮಂತ್ರಿಗಳು ಹೇಳಿರುವುದು ಇಂಥ ಘಟನೆಯಿಂದ ನೆನಪಿಗೆ ಬರುತ್ತಿದೆ. ಆ ರೀತಿ ಹೋರಾಟಗಾರರನ್ನು ಹತ್ತಿಕ್ಕುತ್ತೇವೆ ಎಂದು ಮುಖ್ಯಮಂತ್ರಿಗಳು ಹಾಗು ಅವರ ಹಿಂಬಾಲಕರು ಯೋಚಿಸಿದ್ದರೆ ಅದು ಕನಸಿನ ಮಾತು ನಮ್ಳ ಶಾಂತಿಯುತ ಹೋರಾಟ ನೀವು ಎಷ್ಟೇ ಹತ್ತಿಕ್ಕಿದ್ದರೂ ಜನರಿಗೆ ನ್ಯಾಯ ಸಿಗುವವರೆಗೆ ಮುಂದುವರಿಯುತ್ತದೆ.
ಈ ಅಕ್ರಮದ ವಿರುದ್ಧ ಜನರ ಪರವಾಗಿ ನಿಲ್ಲ ಬೇಕಾಗಿದ್ದ ಶಾಸಕರು ಸಂಸದರು ತಮ್ಮ ಜವಾಬ್ದಾರಿಯನ್ನು ಮರೆತಿದ್ದಾರೆ. ಯಾರು ಟೋಲ್ ಕಟ್ಟಬೇಡಿ ನಾನು ಜವಾಬ್ದಾರಿ ಎಂದು ಹೇಳಿದ ಸಂಸದ ನಳಿನ್ ಕುಮಾರ್ ಕಟೀಲ್ ರವರು ತಾನಾಡಿದ ಮಾತನ್ನೆ ಮರೆತಿದ್ದಾರೆ.
ದ.ಕ ಜಿಲ್ಲೆಯ ಶಾಸಕರಿಗಂತು ಅಕ್ರಮ ಟೋಲ್ ವಿರುದ್ಧ ಧ್ವನಿ ಎತ್ತುವ ತಾಕತ್ ಮತ್ತು ಧಮ್ ಇಲ್ಲದಾಗಿದೆ. ಮುನಿರ್ ಕಾಟಿಪಾಳ್ಳ ನೇತೃತ್ವದ ಟೋಲ್ ವಿರೋಧಿ ಹೋರಾಟ ಸಮಿತಿ ಹಲವು ಸಮಯಗಳಿಂದ ಕಾರ್ಯಾಚರಿಸುತ್ತಿದೆ. ಈ ಸಮಿತಿಯು ಈಗಾಗಲೇ ಹಲವಾರು ಸುತ್ತಿನ ಸಭೆಯನ್ನು ಜಿಲ್ಲಾಧಿಕಾರಿಗಳು ಪೊಲೀಸ್ ಅಧಿಕಾರಿಗಳೊಂದಿಗೆ ನಡೆಸಿದೆ. ಸಿ ಆರ್ ಪಿ ಎಸ್ 107 ಅಡಿಯಲ್ಲಿ ನೋಟಿಸ್ ನೀಡಬೇಕಾದರೆ ವ್ಯಕ್ತಿಯು ಸಮಾಜದ ಶಾಂತಿಗೆ ಭಂಗ ತರುವ ವ್ಯಕ್ತಿ ಆಗಿರಬೇಕು. ನೋಟಿಸ್ ನಲ್ಲಿ ಹೋರಾಟಗಾರರಿಗೆ ಏಕವಚನ ಬಳಸಿದ್ದಲ್ಲದೆ ಶಾಂತಿಗೆ ಭಂಗ ತರುವ ಕಿಡಿಗೇಡಿ ಎಂದು ಹೇಳಲಾಗಿದೆ. ಕಿಡಿಗೇಡಿ ಆಗಿದ್ದಲ್ಲಿ ನೋಟಿಸ್ ನೀಡುವ 24 ಗಂಟೆಗಳ ಮೊದಲು ಅದೇ ಹೋರಾಟಗಾರರ ಜೊತೆ ಸಭೆ ನಡೆಸಿದ್ದೇಕೆ?. ಹೋರಾಟ ಕೈಬಿಡುವಂತೆ ಮನವಿ ಮಾಡಿದ್ದೇಕೆ? ಜನ ಪರವಾದ ಶಾಂತಿಯುತ ಹೋರಾಟವನ್ನು ಕಾನೂನು ಸುವ್ಯವಸ್ಥೆಗೆ ಅಡ್ಡಿ ಶಾಂತಿ ಭಂಗ ಎಂದು ಕರೆಯಬಹುದೇ?.
ರಾಜ್ಯ ಲೋಕೋಪಯೋಗಿ ಸಚಿವ ಸಿ.ಸಿ ಪಾಟೀಲ್ ರವರು ಇದೊಂದು ನಿಯಮಭಾಹಿರ ಟೋಲ್ ಗೇಟ್ ಆಗಿದ್ದು ತೆರವುಗೊಳಿಸಲಾಗುವುದು ಎಂದು ವಿಧಾನಸಭೆಯಲ್ಲಿ ಅಧಿಕೃತವಾಗಿ ಸ್ಪಷ್ಟಪಡಿಸಿದ್ದರು. ಸರಕಾರ ವಿಧಾನಸಭೆಯಲ್ಲಿ ನೀಡಿದ ಭರವಸೆಯನ್ನು ನಿಯಮ281(ಎ)ಯಂತೆ ಶೀಘ್ರವಾಗಿ ಈಡೇರಿಸಬೇಕು. ಹಾಗಾಗಿ ಹೋರಾಟಗಾರರಿಗೆ ನೀಡಲಾದ ನೋಟಿಸ್ ನಲ್ಲಿ ಸರ್ಕಾರದಿಂದ ಸ್ಥಾಪಿಸಲಾದ ಟೋಲ್ ಗೇಟ್ ಮತ್ತು ಸರಕಾರದ ಆದೇಶಕ್ಕೆ ವಿರುದ್ಧವಾಗಿ ನಡೆಯುತ್ತಿರುವ ಹೋರಾಟ ಎಂದು ಉಲ್ಲೇಖಿಸಿರುವುದು ಸರಿಯಲ್ಲ ವಿಧಾನ ಸಭೆಯಲ್ಲಿ ಸರಕಾರ ಟೋಲ್ ಬಗ್ಗೆ ತಳೆದಿರುವ ನಿಲುವಿಗೆ ವಿರುದ್ಧವಾಗಿ ಪೊಲೀಸರ ನಡವಳಿಕೆ ಆಶ್ಚರ್ಯಕರವಾಗಿದೆ.
ಜವಾಬ್ದಾರಿಯುತ ನಾಗರಿಕರು ಶಾಂತಿಯುತ ಹೋರಾಟಕ್ಕೆ ಕರೆಕೊಟ್ಟಾಗ ಜನಪ್ರತಿನಿಧಿಗಳು ಬಂದು ಸಮಸ್ಯೆಯ ಪರಿಹಾರಕ್ಕೆ ಪ್ರಯತ್ನಿಸಬೇಕಿತ್ತು ಜಿಲ್ಲೆಯ ಜನರು ಅಕ್ರಮ ಟೋಲ್ ಗೇಟ್ ತೆಗೆಯಿರಿ ಎಂದು ಪ್ರಜಾಸತ್ತಾತ್ಮಕ ರೀತಿಯಲ್ಲಿ ಬೇಡಿಕೆ ಇಟ್ಟರೆ ಜನರ ಎದುರು ಬರಲು ದಮ್ಮು ತಾಕತ್ ಇಲ್ಲದ ಜನಪ್ರತಿನಿಧಿಗಳು ಪೊಲೀಸರನ್ನು ಚೂಬಿಡುತ್ತಿದ್ದಾರೆ ವಿವಿಧ ರೀತಿಯ ಬಲಪ್ರಯೋಗಗಳನ್ನು ಮಾಡುತ್ತಿದ್ದಾರೆ ಅದ್ಯಾವುದಕ್ಕೂ ಬಗ್ಗದೇ ಇದ್ದಾಗ ಶಾಂತಿಭಂಗ ಆಗುತ್ತದೆ ಎಂದು ನೆಪವಡ್ಡಿ ಹೋರಾಟಗಾರರ ಅದೂ ಕೂಡ ಮಹಿಳೆಯ ಮನೆಗೆ ರಾತ್ರಿ ಹನ್ನೆರಡು ಗಂಟೆಗೆ ಸೆಕ್ಷನ್ 107CRPC ನೋಟಿಸ್ ಜಾರಿಗೊಳಿಸುತ್ತಾರೆ ನಿಮ್ಮ ಇಂತಹ ಗೊಡ್ಡು ಬೆದರಿಕೆಗಳಿಗೆ ಸಂವಿಧಾನಾತ್ಮಕವಾಗಿ ಶಾಂತಿಯುತ ಹೋರಾಟ ಮಾಡುವ ಹೋರಾಟಗಾರರು ಹೆದರುವುದಿಲ್ಲ.
ಅಕ್ರಮ ಟೋಲ್ ಗೇಟ್ ನಿಲ್ಲಲೇಬೇಕು ಜನಪ್ರತಿನಿಧಿಗಳು ಅಕ್ರಮ ಟೋಲ್ ಗೇಟ್ ರಕ್ಷಿಸಲು ನಿಂತಿದ್ದಾರೆ ಈ ಹೋರಾಟ ಕರಾವಳಿ ಜಿಲ್ಲೆಯ ನಾಗರಿಕರು ಮತ್ತು ಅಕ್ರಮದಂಧೆ ನಡೆಸುವವರ ಬೆಂಗಾವಲಾಗಿ ನಿಂತಿರುವ ಜನಪ್ರತಿನಿಧಿಗಳ ನಡುವೆ ಆಗಿದೆ ಟೋಲ್ ಗೇಟ್ ನಲ್ಲಿ ಸಂಗ್ರಹ ಆಗುವ ಅಕ್ರಮ ಹಣವು ಬಿಜೆಪಿ ಪರಿವಾರದ ಕಾನೂನುಬಾಹಿರ ಚಟುವಟಿಕೆಗಳಿಗೆ ಬಳಕೆಯಾಗುತ್ತಿದೆ ಎಂಬ ಸುದ್ದಿಯೂ ಕೇಳಿ ಬರುತ್ತಿದ್ದೆಂದು ಆರೋಪಿಸಿದ್ದಾರೆ.
ನಡೆಯುವ ಶಾಂತಿಯುತ ಪ್ರತಿಭಟನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಜನಸಾಮಾನ್ಯರಿಗೆ ಆಗುವ ಅನ್ಯಾಯವನ್ನು ಜವಾಬ್ದಾರಿಯುತ ನಾಗರಿಕರಾದ ನಾವೆಲ್ಲರೂ ಸೇರಿ ಶಾಂತಿಯುತವಾಗಿ ಪ್ರತಿಭಟಿಸೋಣ ಎಂದು ಅನಿತಾ ಡಿಸೋಜಾ ಕರೆ ನೀಡಿದ್ದಾರೆ.