ಕೊಂಕಣ ರೈಲ್ವೆ: ನವೆಂಬರ್ 1ರಿಂದ ಸಾಮಾನ್ಯ ವೇಳಾಪಟ್ಟಿ ಜಾರಿ

ಉಡುಪಿ, ಅ.17: ಕೊಂಕಣ ರೈಲ್ವೆ ಮಾರ್ಗದಲ್ಲಿ ಮಳೆಗಾಲದಲ್ಲಿ ಮುಂಗಾರು ವೇಳಾ ಪಟ್ಟಿಯಂತೆ ಸಂಚರಿಸುತಿದ್ದ ರೈಲುಗಳು ನವೆಂಬರ್ ಒಂದರಿಂದ ಸಾಮಾನ್ಯ ವೇಳಾಪಟ್ಟಿಯಂತೆ ಸಂಚರಿಸಲಿವೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.

ಕೊಂಕಣ ರೈಲು ಮಾರ್ಗದಲ್ಲಿ ಸಂಚರಿಸುವ ಕರಾವಳಿಗೆ ಸಂಬಂಧಿಸಿದ ಕೆಲವು ಪ್ರಮುಖ ರೈಲುಗಳು ಉಡುಪಿಗೆ ಆಗಮಿಸುವ ಹಾಗೂ ನಿರ್ಗಮಿಸುವ ಸಮಯದ ವಿವರ ಹೀಗಿದೆ.

ಮಂಗಳೂರು ಜಂಕ್ಷನ್ ಹಾಗೂ ಮುಂಬೈ ನಡುವೆ ಸಂಚರಿಸುವ ದೈನಂದಿನ ಮಂಗಳೂರು ಎಕ್ಸ್‌ಪ್ರೆಸ್ ರೈಲು ಪ್ರತಿದಿನ ಬೆಳಗ್ಗೆ 11:26ಕ್ಕೆ ಉಡುಪಿಗೆ ಬರಲಿದ್ದು 11:28ಕ್ಕೆ ನಿರ್ಗಮಿಸಲಿದೆ. ಅದೇ ರೈಲು ಮಂಗಳೂರಿ ನಿಂದ ಅಪರಾಹ್ನ 3:16ಕ್ಕೆ ಬಂದು 3:18ಕ್ಕೆ ನಿರ್ಗಮಿಸಲಿದೆ. ರಾಜಧಾನಿ ಎಕ್ಸ್‌ಪ್ರೆಸ್ ಬುಧವಾರ ಶುಕ್ರವಾರ-ಶನಿವಾರ ಬೆಳಗ್ಗೆ 6:40ಕ್ಕೆ ಬಂದು 6:42ಕ್ಕೆ ನಿರ್ಗಮಿಸಲಿದೆ. ಮುಂಬೈ ಕಡೆಯಿಂದ ಸೋಮವಾರ ಬುಧವಾರ- ಗುರುವಾರ 10:40ಕ್ಕೆ ಬಂದು 10:42ಕ್ಕೆ ನಿರ್ಗಮಿಸಲಿದೆ.

ದೈನಂದಿನ ಮಂಗಳಾ ಎಕ್ಸ್‌ಪ್ರೆಸ್ ರಾತ್ರಿ 11:04ಕ್ಕೆ ಬಂದು 11:06ಕ್ಕೆ ತೆರಳಲಿದೆ. ಅದೇ ರೀತಿ ಮುಂಬೈ ಕಡೆಯಿಂದ ರಾತ್ರಿ 8:08ಕ್ಕೆ ಬಂದು 8:10ಕ್ಕೆ ಉಡುಪಿಯಿಂದ ತೆರಳಲಿದೆ. ದೈನಂದಿನ ನೇತ್ರಾವತಿ-ಟಿವಿಸಿ ರೈಲು ಮಧ್ಯರಾತ್ರಿ 2:30ಕ್ಕೆ ಬಂದು 2:32ಕ್ಕೆ ನಿರ್ಗಮಿಸಿದರೆ ನೇತ್ರಾವತಿ-ಎಲ್‌ಟಿಟಿ ರೈಲು ರಾತ್ರಿ 12:38ಕ್ಕೆ ಬಂದು 12:40ಕ್ಕೆ ನಿರ್ಗಮಿಸಲಿದೆ.

ಬೆಂಗಳೂರು-ಕಾರವಾರ ನಡುವಿನ ದೈನಂದಿನ ಪಂಚಗಂಗಾ ಎಕ್ಸ್‌ಪ್ರೆಸ್ ಮುಂಜಾನೆ 4:16ಕ್ಕೆ ಉಡುಪಿ ತಲುಪಿ 4:18ಕ್ಕೆ ನಿರ್ಗಮಿಸಲಿದೆ. ಕಾರವಾರ- ಬೆಂಗಳೂರು ನಡುವಿನ ರೈಲು ರಾತ್ರಿ 9:02ಕ್ಕೆ ಉಡುಪಿಗೆ ಬಂದು 9:04ಕ್ಕೆ ಇಲ್ಲಿಂದ ತೆರಳಲಿದೆ. ದೈನಂದಿನ ಮತ್ಸಗಂಧ ಎಕ್ಸ್‌ಪ್ರೆಸ್ ರೈಲು ಮಂಗಳೂರು ಕಡೆಯಿಂದ ಅಪರಾಹ್ನ 3:48ಕ್ಕೆ ಬಂದು 3:50ಕ್ಕೆ ನಿರ್ಗಮಿಸಲಿದೆ. ಅದೇ ರೀತಿ ಮುಂಬೈಯಿಂದ ಸಂಜೆ 5:32ಕ್ಕೆ ಬಂದು 5:34ಕ್ಕೆ ನಿರ್ಗಮಿಸಲಿದೆ.

ಕಾರವಾರ-ಯಶವಂತಪುರ ಎಕ್ಸ್‌ಪ್ರೆಸ್ ರೈಲು ಮಂಗಳವಾರ, ಗುರುವಾರ ಶನಿವಾರದಂದು ಬೆಳಗ್ಗೆ 8:38ಕ್ಕೆ ಕಾರವಾರದಿಂದ ಬರಲಿದ್ದು, 8:40ಕ್ಕೆ ನಿರ್ಗಮಿಸಲಿದೆ. ಅದೇ ರೀತಿ ಯಶವಂತಪುರ-ಕಾರವಾರ ರೈಲು ಸೋಮವಾರ, ಬುಧವಾರ, ಶುಕ್ರವಾರದಂದು ಸಂಜೆ 6 ಗಂಟೆಗೆ ಬಂದು 6:02ಕ್ಕೆ ತೆರಳಲಿದೆ.

ದೈನಂದಿನ ಮಂಗಳೂರು ಸೆಂಟ್ರಲ್-ಮಡಗಾಂವ್ ಜಂಕ್ಷನ್ ಎಕ್ಸ್‌ಪ್ರೆಸ್ ರೈಲು ಬೆಳಗ್ಗೆ 7:31ಕ್ಕೆ ಉಡುಪಿ ಬಂದು 7:32ಕ್ಕೆ ನಿರ್ಗಮಿಸಿದರೆ, ಅದೇ ರೈಲು ಮಡಗಾಂವ್ ಕಡೆಯಿಂದ ಸಂಜೆ 6:30ಕ್ಕೆ ಬಂದು 6:31ಕ್ಕೆ ನಿರ್ಗಮಿಸಲಿದೆ ಎಂದು ಕೊಂಕಣ ರೈಲ್ವೆಯ ಹೊಸ ವೇಳಾ ಪಟ್ಟಿಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!