ಡಾ.ಅನು ಆಯುರ್ವೇದ ಕ್ಲಿನಿಕ್: ಮಧುಮೇಹ ತಪಾಸಣೆ-ಮಾಹಿತಿ ಕಾರ್ಯಾಗಾರ
ಉಡುಪಿ: ಚೈತನ್ಯ ಫೌಂಡೇಶನ್ ಮತ್ತು ಡಾ.ಅನು ಆಯುರ್ವೇದ ಕ್ಲಿನಿಕ್ ಇದರ ಜಂಟಿ ಆಶ್ರಯದಲ್ಲಿ ಮಧುಮೇಹ ತಪಾಸಣೆ ಮತ್ತು ಮಾಹಿತಿ ಕಾರ್ಯಾಗಾರ ಅಂಬಲಪಾಡಿ ಮೆಂಡನ್ಸ್ ಗಿರಿಜಾ ಸಂಕೀರ್ಣದಲ್ಲಿ ನಡೆಯಿತು.
ಕಾರ್ತಿಕ್ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ಹರಿಯಪ್ಪ ಕೋಟ್ಯಾನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಚೈತನ್ಯ ಫೌಂಡೇಶನ್ ನಿಂದ ಸಾಕಷ್ಟು ಉತ್ತಮ ಕಾರ್ಯಕ್ರಮಗಳು ನಡೆಯುತ್ತಿದ್ದು ಇವತ್ತಿನ ಮಧುಮೇಹ ಮಾಹಿತಿ ಕಾರ್ಯಕ್ರಮ ಬಹಳ ಉಪಯುಕ್ತ ಕಾರ್ಯಕ್ರಮ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಮಧುಮೇಹ ತಜ್ಞೆ ಡಾ.ಶೃತಿ ಬಲ್ಲಾಳ್ ಅವರು ಮಧುಮೇಹ ಮಾಹಿತಿ ಕಾರ್ಯಗಾರವನ್ನು ನಡೆಸಿಕೂಟ್ಟರು.
ಅನು ಡೆಂಟಲ್ ಕೇರ್ ನ ದಂತ ವೈದ್ಯೆ ಡಾ.ಅನುಪಮಾ ಸುನೀಲ್, ಅನು ಅಯುರ್ವೇದದ ವೈದ್ಯೆ ಡಾ. ಅಂಜಲಿ, ಹಿರಿಯ ನಾಗರಿಕರ ವೇದಿಕೆಯ ಗೌರವಧ್ಯಕ್ಷರಾದ ವಿಶ್ವನಾಥ್ ಹೆಗ್ಡೆ, ಲಯನ್ಸ್ ಕ್ಲಬ್ ಉಡುಪಿ ಲಕ್ಷ್ಯದ ಅಧ್ಯಕ್ಷರಾದ ರಮೇಶ್ ಶೆಟ್ಟಿ, ಜೋಸೆಫ್ ರೆಬೆಲ್ಲೋ ಮೊದಲಾದವರು ಉಪಸ್ಥಿತರಿದ್ದರು.
ಚೈತನ್ಯ ಫೌಂಡೇಶನ್ ನ ಪ್ರವರ್ತಕರಾದ ಸುನೀಲ್ ಸಾಲ್ಯಾನ್ ಕಡೆಕಾರ್ ಸ್ವಾಗತಿಸಿ, ನೀಲಾವತಿ ಎ. ಕಾರ್ಯಕ್ರಮ ನಿರೂಪಿಸಿ ವಂದಿಸಿದರು.